‘ಬಡತನದ ಜೀವನದಲ್ಲಿಯೂ ಬದುಕಿ ಬಾಳಿ ಸಮಾಜಕ್ಕೆ ಮಾದರಿಯಾದ ಗಜಾನನ ಮಹಾಲೆ’

‘ಬಡತನದ ಜೀವನದಲ್ಲಿಯೂ ಬದುಕಿ ಬಾಳಿ ಸಮಾಜಕ್ಕೆ ಮಾದರಿಯಾದ ಗಜಾನನ ಮಹಾಲೆ’ 'Gajanana Mahale, who lived a life of poverty and became a role model for society'

ಧಾರವಾಡ 28:  ಗಜಾನನ ಮಹಾಲೆಯವರು ಪ್ರಸಾದನದಲ್ಲಿ ಪ್ರಾವಿಣ್ಯತೆಯನ್ನು ಪಡೆದವರಾಗಿದ್ದು, ಅನೇಕ ನಾಟಕ, ಸಂಗೀತ ಮತ್ತು ಚಿತ್ರಕಲೆಗಳಲ್ಲಿಯೂ ಪರಿಣತೆಯನ್ನು ಪಡೆದವರಾಗಿದ್ದು ಸರಕಾರಿ ಅನುದಾನಿತ ಟ್ರಸ್ಟ್‌ಗಿಂತ, ಈ ಪ್ರತಿಷ್ಠಾನ ಗಜಾನನ ಮಹಾಲೆಯವರ ವ್ಯಕ್ತಿತ್ವದಿಂದ ಅವರ ಅಭಿಮಾನಗಳಿಂದ ರಚಿತವಾಗಿದ್ದು ಇದಕ್ಕೆ ಮಹತ್ವವಿದೆ ಎಂದು ನುಡಿದರಲ್ಲದೆ ಪ್ರಸಾಧನದಲ್ಲಿ ಹೊಸ ಹೊಸ ಸೂಕ್ಷ್ಮ ರೀತಿಯಿಂದ ಬಣ್ಣದಲ್ಲಿ ಹೊಸತನವನ್ನು ಕಂಡುಕೊಂಡವರು ಅಲ್ಲದೆ ಅವರು ತಮ್ಮ ಬಡತನದ ಜೀವನದಲ್ಲಿಯೂ ನಮ್ಮ ನಡುವೆ ಬದುಕಿ ಬಾಳಿ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಹಿರಿಯ ವಿದ್ವಾಂಸರಾದ ಡಾ. ವೀರಣ್ಣ ರಾಜೂರ ರವರು ನುಡಿದರು. 

ದಿ. ಗಜಾನನ ಮಹಾಲೆ ಕಲಾ ಪ್ರತಿಷ್ಠಾನ ಧಾರವಾಡದವರು ದಿನಾಂಕ 27.01.2026 ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ ದೇಶಪಾಂಡೆ ಸಭಾಭವನದಲ್ಲಿ ನಾಡಿನ ಶ್ರೇಷ್ಠ ಪ್ರಸಾದನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ದಿ. ಶ್ರೀ ಗಜಾನನ ಮಹಾಲೆಯವರ ತೊಂಬತ್ನಾಲ್ಕನೇಯ (94) ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಕಲಾಉಪಾಸಕ ಪ್ರಶಸ್ತಿ 2026 ವನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು.  

ಎಪ್ಪತ್ತರ ದಶಕದಲ್ಲಿ ತಾವು ಮಹಾಲೆಯವರ ಕೈಯಿಂದ ಪ್ರಸಾಧನವನ್ನು ಮಾಡಿಕೊಂಡು ಬಂದಿದ್ದು ಕರ್ನಾಟಕ ವಿಶ್ವವಿದ್ಯಾಲಯದ ಯುವಜನೋತ್ಸವದಲ್ಲಿಯೂ ಸಹ ತಮ್ಮ ಒಡನಾಟದ ಕುರಿತು ಮಾತನಾಡಿದರು ಅಭಿನಯ, ಆಂಗೀಕ, ವಾಚಿಕ ಹಾಗೂ ಸಾತ್ವಿಕ, ಆಹಾರ‌್ಯ ಇವು ವ್ಯಕ್ತಿಯನ್ನು ಕಲಾವಿದರನ್ನಾಗಿ ರೂಪಿಸುತ್ತವೆ ಅವರು ಪಾತ್ರಕ್ಕೆ ಪ್ರಸಾಧನ ವೇಷಭೂಷಣದ ಮೂಲಕ ಜೀವ ತುಂಬುತ್ತಿದ್ದರು ಪ್ರಸಾಧನ ಕಲೆ ಇಲ್ಲವಾಗಿದ್ದರೆ ಪಾತ್ರಕ್ಕೆ ಜೀವ ಇರುತ್ತಿರಲಿಲ್ಲ, ಅವರು ಮನೆತನದ ಪರಂಪರೆಯ ವೃತ್ತಿಗೆ ಘನತೆ ತಂದುಕೊಟ್ಟ ಅವರು ಹವ್ಯಾಸವಾಗಿ ಮೆಕಪ್, ಚಿತ್ರಕಲೆ, ಸಂಗೀತ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದರು. ಇಂಥವರ ನಡೆ, ನುಡಿ, ಸಾಧನೆಯಿಂದಲೇ ಧಾರವಾಡ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು ಎಂದ ಡಾ. ವೀರಣ್ಣ ರಾಜೂರವರು ಬಡತನವನ್ನು ಅತ್ಯಂತ ಪ್ರೀತಿಯಿಂದ ಅಪ್ಪಿಕೊಂಡು ಅದರಲ್ಲಿಯೇ ಸಂತೃಪ್ತಿ ಜೀವನ ನಡೆಸಿ ನಮಗೆ ಆದರ್ಶವನ್ನು ಕಟ್ಟಿಕೊಂಡವರು ಎಂದರು. 

ಹತ್ತು ಸಾವಿರ ರೂಪಾಯಿ ಹಾಗೂ ಕಲಾ ಉಪಾಸಕ ಪ್ರಶಸ್ತಿ ಫಲಕವನ್ನು ಸ್ವೀಕರಿಸಿ ಮಾತನಾಡಿದ ದೀಪಕ ಮಹಾಲೆಯವರು ತಮ್ಮ ಅಣ್ಣ ಗಜಾನನ ಮಹಾಲೆಯವರು ತಮಗೆ ಸ್ಪೂರ್ತಿದಾಯಕರು ಅವರು ತಮ್ಮ ಸಂಗಡ ಪ್ರಸಾಧನ ಕಲೆಯಲ್ಲಿ ತೊಡಗಿಸಿಕೊಳ್ಳಲು ಕರೆದುಕೊಂಡು ಹೋಗುತ್ತಿದ್ದರು ಅವರ ಸರಳತೆ ಮತ್ತು ಅವರು ತೊಡಗಿಸಿಕೊಳ್ಳುತ್ತಿದ್ದ ವಿಭಿನ್ನ ಶೈಲಿಯ ಪ್ರಸಾಧನದ ಕಲೆಯಿಂದಲೇ ನಾನು ಇಂದು ಉತ್ತಮ ಪ್ರಸಾಧನ ಕಲಾವಿದನಾಗಿ ಹೊರಹೊಮ್ಮಲು ಸಾಕ್ಷಿಯಾಗಿದೆ ಅದರಂತೆ ತಮ್ಮ ತಂದೆ ಹರಿ ಮಹಾಲೆ ಮತ್ತು ಮತ್ತೊಬ್ಬ ಅಣ್ಣ ಪ್ರೇಮಾನಂದ ಮಹಾಲೆಯವರನ್ನು ಸಹ ಈ ಸಂದರ್ಭದಲ್ಲಿ ನೆನೆದು ಈ ಪ್ರಶಸ್ತಿ ನನಗೆ ಇನ್ನಷ್ಟು ಕಲಾಸೇವೆಯನ್ನು ಮಾಡಲು ಸ್ಫೂರ್ತಿ ನೀಡಿದಂತಾಗಿದೆ ಎಂದು ನುಡಿದರು.   

ಹಿರಿಯ ಸಾಹಿತಿ ಡಾ. ಬಾಳಣ್ಣಾ ಶೀಗೀಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಜಾನನ ಮಹಾಲೆ ಅವರು ಉತ್ತರ ಕರ್ನಾಟಕದ ಪ್ರಸಾದನ ಕಲೆಯಲ್ಲಿ ದಿಗ್ಗಜರಾಗಿ ಜನಮಾನಸದಲ್ಲಿ ಇಂದಿಗೂ ನೆಲೆಸಿದ್ದಾರೆ. ಅವರೊಬ್ಬ ಶ್ರೇಷ್ಠ ಕಲಾವಿದರಾಗಿದ್ದು, ಸಾಮಾನ್ಯ ನಾಗರಿಕರಂತೆ ತಮ್ಮ ಹವ್ಯಾಸಿ ಕಲೆಯೊಂದಿಗೆ ತಮ್ಮ ವೃತ್ತಿಯನ್ನು ಅಷ್ಟೇ ಶೃದ್ಧಾ ಭಕ್ತಿಯಿಂದ ಮತ್ತು ಸರಳತೆಯಿಂದ ಬದುಕಿ ತಮ್ಮ ಕುಟುಂಬದ ಜೊತೆಗೆ ಸಮಾಜದಲ್ಲಿ ಕಲೆಯ ನೆಲೆಯನ್ನ ಉಳಿಸಿದ ಮಹಾನ್ ಕಲಾವಿದ. ಅವರು ತಮ್ಮ ಪ್ರಸಾಧನಕಲೆಯಲ್ಲಿ ಹೊಸತನವನ್ನು ತಂದು ಸರಳವಾಗಿ ಪ್ರಸಾಧನವನ್ನು ಹೇಗೆ ಮಾಡಬೇಕು ಎಂಬುವುದನ್ನು ಮನದಟ್ಟನೆ ಮಾಡಿಕೊಟ್ಟ ಮಹಾನ ಪ್ರಸಾಧಕ ಎಂದು ನುಡಿದರು. ಇಂಥವರ ಸರಳತೆ ಮತ್ತು ಸಜ್ಜನಿಕೆ ಇಂದಿನ ಪೀಳಿಗೆಯಲ್ಲಿ ಅಳವಡಿಸಿಕೊಳ್ಳಬೇಕಾಗಿದ್ದು ಅವಶ್ಯ ಶ್ರೀಮಂತಿಕೆ ಇದ್ದಲ್ಲಿ ಸರಸ್ವತಿ ಇರುವುದಿಲ್ಲ, ಸರಸ್ವತಿ ಇದ್ದಲ್ಲಿ ಲಕ್ಷ್ಮೀ ಇರುವುದಿಲ್ಲ ಎಂದು ಖ್ಯಾತ ನಾಟಕಕಾರ ಶ್ರೀರಂಗರನ್ನು ನೆನೆದ ಬಾಳಣ್ಣ ಶೀಗೀಹಳ್ಳಿ ಗಜಾನನ ಮಹಾಲೆಯವರು ಇಂದು ತಮ್ಮೊಂದಿಗೆ ಜೀವಂತವಾಗಿ ಇರದಿದ್ದರು ಅವರು ಕೊಟ್ಟ ಪ್ರಸಾಧನ ಕಲೆಯ ಮೂಲಕ ಸಮಾಜದಲ್ಲಿ ಎಂದೆಂದಿಗೂ ಅಮರ ಎಂದು ಹೇಳಿದರು.  

ಅನುರಾಗ ಸಾಂಸ್ಕೃತಿ ಬಳಗ ಧಾರವಾಡ ತಂಡದ ಡಾ. ಅನೀಲ ಮೇತ್ರಿ ಹಾಗೂ ಹೇಮಂತ ಲಮಾಣಿ, ಸೋಹೇಲ್ ಸೈಯದ, ಸೋಮಿಬಾಯಿ ಕುರಿಗಾರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿದವು. ನಂತರದ ಗಜಾನನ ಮಹಾಲೆಯವರ ಭಾವಚಿತ್ರಕ್ಕೆ ಪ್ರತಿಷ್ಠಾನದ ಗಣ್ಯರು ಹಾಗೂ ಮಹಾಲೆ ಪರಿವಾರದ ಸದಸ್ಯರು ಪುಷ​‍್ಾರೆ್ಪಣ ಮಾಡಿದರು. ಪ್ರಾರಂಭದಲ್ಲಿ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ವೇದಿಕೆ ಮೇಲೆ ಅಪೂರ್ವಾ ಮಹಾಲೆ ಉಪಸ್ಥಿತರಿದ್ದರು, ಕಲಾವಿದ ಬಿ. ಮಾರುತಿ ಸ್ವಾಗತಿಸಿದರು, ಬಿ.ಆಯ್‌. ಈಳಿಗೇರ ವಂದಿಸಿದರು. ಕೆ.ಎಚ್‌.ನಾಯಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಂಕರ ಕುಂಬಿ ನಿರೂಪಿಸಿದರು. ಬಿ.ಐ ಈಳಿಗೇರ ವಂದಿಸಿದರು. 

ಸಂತೋಷ ಮಹಾಲೆ ಸೇರಿದಂತೆ ಹಿರಿಯ ಗಣ್ಯರಾದ ವಿದೂಷಿ ನಾಗರತ್ನಾ ಹಡಗಲಿ, ಶಶಿಧರ ತೋಡಕರ, ಎಂ.ಎಂ.ಚಿಕ್ಕಮಠ, ನಾಗರಾಜ ಹಡಗಲಿ, ಡಾ. ಅನಿಲಕುಮಾರ ಮುಗಳಿ, ಕಿರಣ ಮಹಾಲೆ, ಕೃತಿಕಾ ಸ್ನೇಹಾ, ಸೋನಮ್, ಅಕ್ಷತಾ, ಜಯಶ್ರೀ, ಸಂಪ್ರೀತಾ, ತೀಶಾ, ಪ್ರಣವ, ಸೋಹನ, ಮತ್ತು ಆದರ್ಶ, ಸೇರಿದಂತೆ ಗಜಾನನ ಮಹಾಲೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.