‘ಸ್ತ್ರೀ ಕುಲಕ್ಕೆ ಕ್ರಾಂತಿಯ ಜ್ಯೋತಿಯಾಗಿ, ಅಕ್ಷರ ನೀಡಿದ ಅವ್ವ, ಸಾವಿತ್ರಿಬಾಯಿ ಫುಲೆ’
ರನ್ನ ಬೆಳಗಲಿ 3: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ದಂದು ಅಕ್ಷರದ ಅವ್ವ, ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನೋತ್ಸವ ಕಾರ್ಯಕ್ರಮ ಜರುಗಿತು.
ಉಪನ್ಯಾಸಕ ರಾಘವೇಂದ್ರ ನೀಲಣ್ಣವರ ಯೋಗ ಶಿಕ್ಷಕರು ಸ್ತ್ರೀ ಕುಲಕ್ಕೆ ಕ್ರಾಂತಿಯ ಜ್ಯೋತಿಯಾಗಿ, ಅಕ್ಷರ ನೀಡಿದ ಅವ್ವ, ಸಾವಿತ್ರಿಬಾಯಿ ಫುಲೆ ಅವರ ಜೀವನ ಅಸಂಖ್ಯಾತ ತ್ಯಾಗಗಳಿಂದ ಕೂಡಿದೆ. ತವರು ಮನೆ, ಗಂಡನ ಮನೆಯ ಸಂಬಂಧಗಳಿಂದ ದೂರವಾಗಿ ತನ್ನ ಪತಿಯ ಬೆಂಬಲ ಮತ್ತು ಆಶ್ರಯ ಜೊತೆಗೆ ರಾಷ್ಟ್ರಕ್ಕೆ ಅಕ್ಷರ ಮಾತೆಯಾಗಿ ಬದುಕನ್ನು ಕಟ್ಟಿಕೊಂಡ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ, ಅನೇಕ ಸಮಾಜ ಸುಧಾರಕರಿಗೆ ದಾರಿ ದೀಪವೇ ಜ್ಯೋತಿಭಾ ಮತ್ತು ಸಾವಿತ್ರಿಬಾಯಿ ಪುಲೆ ದಂಪತಿಗಳು. ಮೂಢನಂಬಿಕೆಗಳನ್ನು ಕಿತ್ತಿಸೆದು, ಅಂಧಕಾರದಲ್ಲಿ ಮುಳುಗಿದ ಸ್ತ್ರೀ ಕುಲವನ್ನು ಮೇಲೆತ್ತಿ ಅಕ್ಷರವನ್ನು ನೀಡಿ, ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವಲ್ಲಿ ಅವರ ಶ್ರಮ ಅಪಾರವಾದುದು. ಆದ್ದರಿಂದ ಪ್ರತಿ ಸಾಧಕ ಹೆಣ್ಣು ಮಕ್ಕಳಿಗೆ ಸಾವಿತ್ರಿಬಾಯಿ ಪುಲೆ ಯವರೇ ಮೊದಲ ಗುರುವಾಗಿದ್ದಾರೆ. ಅವರ ಆದರ್ಶ ಜೀವನದ ಪಥವನ್ನು ನಾವು ನೀವೆಲ್ಲರೂ ಅನುಸರಿಸಿ ಅಕ್ಷರದ ಕ್ರಾಂತಿಗೆ ಕೈಜೋಡಿಸಿ ಶಿಕ್ಷಣವಂತರಾಗೋಣ. ಶಿಕ್ಷಣದಿಂದ ಯಾವ ಹೆಣ್ಣು ಮಕ್ಕಳು ವಂಚಿತರಾಗಬಾರದೆಂಬುದೇ ಅವರ ಮಹದಾಸೆ ಆ ಮಹಾತಾಯಿಯ ಕನಸನ್ನು ಸಾಕಾರಗೊಳಿಸಲು ಕೈಜೋಡಿಸಿ ಶಿಕ್ಷಣ ಕ್ರಾಂತಿಯ ಜ್ಯೋತಿಯನ್ನು ಬೆಳಗೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಎಸ್ ಎಲ್ ಕಠಾರೆ ಮುಖ್ಯೋಪಾಧ್ಯಾಯನಿ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಗುರುಮಾತೆಯರಾದ ಸವಿತಾ ಜೋಶಿ, ರೇಣುಕಾ ಬಂಡಿ, ಹಸಿನಾ ಜಮಾದಾರ, ರೂಪಾ ದಂಡಿನ ಮತ್ತು ಶೋಭಾ ವೀರಘಂಟಿ, ಕಾಳಮ್ಮ ಬಡಿಗೇರ, ಭಾರತಿ ಮಳ್ಳಿಗೇರಿ ಹಾಗೂ ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.