ಬೆಳಗಾವಿ : ಆನೆಬಲ ಚಿತ್ರವು ಜನಪದ ಸಂಸ್ಕೃತಿ, ನೆಲ ಸಂಸ್ಕೃತಿ, ಹಳ್ಳಿ ಮತ್ತು ಪಕೃತಿ ಶೈಲಿಯ ಸೊಬಗನ್ನು ಸೆರೆಹಿಡಿದಿರುವಂತ ನಾಟ್ಯ ರೀತಿಯಲ್ಲಿ ಇರುವಂತಹ ಮಂಡ್ಯ ಭಾಷೆ ಶೈಲಿಯಲ್ಲಿ ಹೆಣೆದಿರುವ ವಿಭಿನ್ನವಾದ ಚಿತ್ರಕತೆ ಹೊಂದಿರುವ ಚಿತ್ರವಾಗಿದ್ದು, ಫೆಬ್ರವರಿ 3ನೇ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ನಿದರ್ೆಶಕ ಸೂನಗಹಳ್ಳಿ ರಾಜು ಅವರು ಇಂದಿಲ್ಲಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ದಿನದಂದು ಆನೆಬಲ ಚಿತ್ರ ತಂಡದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪದ ಸಂಸ್ಕೃತಿ, ಸೋಬಾನ ಪದಗಳ ಬಳಕೆ, ಗ್ರಾಮೀಣ ಸೌಂದರ್ಯವನ್ನ ಬೇರೆ ಆಯಾಮದಲ್ಲಿ ತೋರಿಸುವ ಪ್ರಯತ್ನ ಈ ಚಲನ ಚಿತ್ರದಲ್ಲಿ ಮಾಡಲಾಗಿದ್ದು, ಯುವ ಜನತೆ ಕಟ್ಟುವ ಕೆಲಸಕ್ಕೆ ಹೇಗೆ ಒಳಗೊಳ್ಳಬೇಕು ಅನ್ನುವ ಅಂಶವನ್ನ ವಿಶಿಷ್ಟವಾಗಿ ತೋರಿಸಲಾಗಿದೆ. ವಿನೂತನ ಕಥೆಯನ್ನ ಹೊಸಬರ ಚಿತ್ರ ಆನೆಬಲ. ಇದು ಇಡೀ ಇಂಡಿಯಾದಲ್ಲಿ ಮೊದಲಬಾರಿಗೆ ತೆರೆಯಮೇಲೆ ಕಾಣಿಸುಕೊಳ್ಳುತ್ತಿದೆ.ಈ ಚಿತ್ರ ಟ್ರೇಲರ್ನ್ನು ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಚಾಲೆಂಜಿಂಗ್ ದರ್ಶನ್ ತೂಗುದೀಪ ಅವರು ಬಿಡುಗಡೆ ಮಾಡಲಿದ್ದಾರೆ. ಅದೇ ರೀತಿ ಆನೆಬಲ ಚಿತ್ರದ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆಗೋಳಿಸಲಿದ್ದಾರೆ. ಈ ಚಿತ್ರದ ನಾಯಕರಾಗಿ ಸಾಗರ್, ನಾಯಕಿಯಾಗಿ ರಕ್ಷಿತ, ಮಲ್ಲರಾಜು, ಚಿರಂಜೀವಿ, ಗಿರೀಶ್ ಶೆಟ್ಟಿ ಸೇರಿದಂತೆ 120ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಬಹುತೇಕ ಹೊಸ ಕಲಾವಿದರೇ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಿದರು.
ಇದೇ ವೇಳೆಯಲ್ಲಿ ಚಿತ್ರದ ನಾಯಕ ನಟ ಸಾಗರ್ ಮಾತನಾಡಿ, ಈ ಚಿತ್ರದಲ್ಲಿ ನಾನು ಶಿವು ಅಂತಾ ನಾಯಕನಾಗಿ ಪಾತ್ರ ಮಾಡಿದ್ದೇನೆ. ಇದು ನನ್ನ ಎರಡನೇ ಚಿತ್ರವಾಗಿದ್ದು. ಈ ಚಿತ್ರದಲ್ಲಿ ನೆಲ, ಜಲ, ಭಾಷೆ, ನಮ್ಮ ನಾಡು-ನುಡಿ ಎಂಬ ಸಂಸ್ಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ತಿಳಿಸುಕೊಡುತ್ತದೆ. ಆದರೆ ನಾನು ಅನಕ್ಷರಸ್ಥನಾದ್ರೂ ಕೂಡ ಊರಿಗೆ ಒಳ್ಳೆಯದಾಗಬೇಕು ಎಂದು ಬಯಸುವ ಒಂದು ಒಳ್ಳೆಯ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಹೀಗಾಗಿ ಚಿತ್ರವನ್ನು ನೋಡಿ ಆಶೀರ್ವದಿಸಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಆನೆಬಲ ಚಿತ್ರ ತಂಡದ ಸಹ ನಿದರ್ೆಶನ ಕಬ್ಬನಹಳ್ಳಿ ಶಿವಕುಮಾರ್, ವಿಜಯ ಸಾಗ್ಯ, ವಿಶ್ವನಾಥ ಕೋರೆ ಉಪಸ್ಥಿತರಿದ್ದರು.