*ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಸುನಂದಾ ವಾಲಿಕಾರ
ಇಂಡಿ: ಇಂದಿನ ಮಕ್ಕಳು ಮುಂದಿನ ಭವ್ಯ ಭಾರತದ ಪ್ರಜೆಗಳು ಅವರಿಗೆ ಉತ್ತಮ ಶಿಕ್ಷಣ ಜೊತೆಗೆ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶವೇ ನಮ್ಮದಾಗಿದೆ ಎಂದು ತಡ ವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಹೇಳಿದರು . ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಸವೇಶ್ವರ ವಸತಿ ಶಾಲೆ ಆವರಣದಲ್ಲಿ ನರೇಗಾ ಯೋಜನೆ ಯಡಿಯಲ್ಲಿ ನಿರ್ಮಿಸಲಾದ ವಾಲಿಬಾಲ್ ಕ್ರೀಡಾಂಗಣ ಉದ್ಘಾಟನೆ ಮಾಡಿ ಮಾತನಾಡಿದ ಶಾಲೆ ಜೀವನಂತ ದೇವಾಲಯದ, ಅಲ್ಲಿ ಕಲಿಯುವ ಮಕ್ಕಳು ದೇವರ ಸಮಾನ, ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಕ್ರೀಡೆಯು ಅತ್ಯಂತ ನಿರ್ಣಾಯಕ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು. ಆ ಶಾಲೆಯ ಮುಖ್ಯ ಗುರುಗಳಾದ ಚೆನ್ನಮ್ಮ ಝಳಕಿ ಮಾತನಾಡಿ ಕ್ರೀಡೆಗಳು ಎಲ್ಲಾ ರೀತಿಯ ಸ್ಪರ್ಧಾತ್ಮಕ ದೈಹಿಕ ಚಟುವಟಿಕೆಗಳಾಗಿವೆ, ಅದು ಪ್ರಾಸಂಗಿಕ ಅಥವಾ ಸಂಘಟಿತ ಭಾಗವಹಿಸುವಿಕೆಯ ಮೂಲಕ ದೈಹಿಕ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ, ನಿರ್ವಹಿಸುವ ಅಥವಾ ಹೆಚ್ಚಿಸುವ ಗುರಿಯನ್ನು ಹೊಂದಿದೆ.ಕ್ರೀಡೆಯು ವ್ಯಕ್ತಿಯ ದೈನಂದಿನ ಜೀವನ ಮತ್ತು ಆರೋಗ್ಯದ ಮೇಲೆ ದೈಹಿಕ ಮತ್ತು ಮಾನಸಿಕ ಎರಡರಲ್ಲೂ ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ನೀವು ಯಾವುದೇ ರೀತಿಯ ಕ್ರೀಡೆಗಳಲ್ಲಿ ತೊಡಗಿರುವಾಗ, ತೀವ್ರವಾದ ದೈಹಿಕ ಚಟುವಟಿಕೆಯು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಡೊಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸಮ್ಮ ಖಸ್ಕಿ,ಮಲ್ಲಿಕಾರ್ಜುನ ಗುಡ್ಲಮನಿ, ಉಸ್ಮಾನ್ ಕಸ್ಸಾಬ, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಮೇತ್ರಿ, ಮತ್ತು ರಮೇಶ ಸಿಂದಗೇರಿ,ಶಕೀಲ್ ಬಳಂ, ರಾಜಶೇಖರ ಅಳ್ಳೊಟ್ಟಿ, ಮಾಹಾನಂದ ಇಂಡಿ,ಅಶೋಕ ಇಂಡಿ, ಮಲ್ಲಮ್ಮ ಲೋಕುರ್ ಅಣ್ಣಾರಾಯ ಪಂತೋಜಿ, ಬಸವರಾಜ ಪಂತೋಜಿ, ಸೈಫನ್ ಮಲೀಕ್ ಜಾಲವಾದ,ಸಹೇಬಗೌಡ ಇಂಡಿ, ಯಶವಂತ ಖಸ್ಕಿ, ಹಾಗೂ ಶಿಕ್ಷಕರಾದ ಎಸ್ ಕೆ ಲಾಳಸಂಗಿ, ಎನ್ ಜಿ ರೊಳ್ಳಿ, ಎಸ್ ಸಿ ಗಿಡಗಂಟಿ,ಬಿ ಬಿ ಝಳಕಿ, ಎಸ್ ಬಿ ಅಂಗಡಿ, ಕವಿತಾ ಪಾಟೀಲ ಸೇರಿದಂತೆ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.