ಲೋಕದರ್ಶನ ವರದಿ
ಮುಗಳಖೋಡ 14: ಸುಕ್ಷೇತ್ರ ಮುಗಳಖೋಡ ಬ್ರಹನ್ಮ್ಮಠದಲ್ಲಿ ಸದ್ಗರು ಯಲ್ಲಾಲಿಂಗ ಮಹಾಪ್ರಭುಗಳವರ 34 ನೇಯ ಪುಣ್ಯಾರಾಧನೆ ಸಂದರ್ಭದಲ್ಲಿ ದಿ. 12 ರಂದು ರವಿವಾರ ಶ್ರೀ ಮಠದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಮೂತರ್ಿಗೆ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಪೂಜೆ ಸಲ್ಲಿಸಿ ವಿಶ್ವ ಯುವಕರ ದಿನಾಚರಣೆಯನ್ನು ಆಚರಿಸಿದರು.
ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಬರುವಂತ ದಿನಗಳು ಬಹಳಷ್ಟು ಕಠಿಣತೆಯಿಂದ ಕೂಡಿರುತ್ತದೆ. ಅದೇನೆಂದರೆ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿಕೊಳ್ಳಿ ಏಕೆಂದರೆ ನಿಮ್ಮ ಜನ್ಮವನ್ನು ಕೊಟ್ಟ ತಂದೆ ತಾಯಂದಿರು ಮಕ್ಕಳ ಮೇಲೆ ಬಹುದೊಡ್ಡ ಕನಸುಕಟ್ಟಿಕೊಂಡಿದ್ದಾರೆ. ಅದು ಸಾಕಾರಗೊಳ್ಳಬೇಕಾದರೆ ಮಕ್ಕಳು, ಯುವಕರು ಸ್ವಾಮಿ ವಿವೇಕಾನಂದರ ತತ್ವ, ಸಂದೇಶ, ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸಾಯಂಕಾಲ ಮಠದ ಬ್ರಹ್ಮ ವೇದಿಕೆ ಮೇಲೆ ಪೂಜ್ಯರ ಆದೇಶದ ಮೇರೆಗೆ "ಓ ಯುವಕ ನಿನಗೂ ನವ ವಿವೇಕ" ಎಂಬುವ ವಿಷಯಾಧಾರಿತವಾಗಿ ಹಲವಾರು ಶರಣರು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಹರಗುರು ಚರಮೂತರ್ಿಗಳು ಮಠದ ಸಧ್ಬಕ್ತಾಧಿಗಳು ಉಪಸ್ಥತರಿದ್ದರು.