'ಹೌದು, ನಾನು ಕಪ್ಪು, ಅದು ನನ್ನ ಚರ್ಮ' : ಬವುಮಾ ಭಾವುಕ ನುಡಿ

ಕೇಪ್ ಟೌನ್ [ದಕ್ಷಿಣ ಆಫ್ರಿಕಾ], ಫೆ 5, ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ತೆಂಬಾ ಬವುಮಾ ಅವರು ತಮ್ಮ ಚರ್ಮದ ಬಣ್ಣವನ್ನು ನಿರಂತರವಾಗಿ ನೋಡುವುದರಿಂದ ತನಗೂ ಹಾನಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಜಯಗಳಿಸಿದ ನಂತರ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. 98 ರನ್‌ ಬಾರಿಸಿದ ಬವುಮಾ, ನಾಯಕ ಕ್ವಿಂಟನ್ ಡಿ ಕಾಕ್ ಅವರೊಂದಿಗೆ 173 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. "ಹೌದು, ನಾನು ಕಪ್ಪು, ಅದು ನನ್ನ ಚರ್ಮ. ನಾನು ಕ್ರಿಕೆಟ್ ಆಡುತ್ತೇನೆ, ಏಕೆಂದರೆ  ಅದನ್ನು ಪ್ರೀತಿಸುತ್ತೇನೆ. ನಾನು ತಂಡದಲ್ಲಿರಲು ಕಾರಣವೆಂದರೆ ತಂಡದಲ್ಲಿ ತಾನು ತೋರಿದ ಪ್ರದರ್ಶನ ಮತ್ತು ಸಾಧ್ಯವಾದಾಗಲೆಲ್ಲಾ ರಾಷ್ಟ್ರೀಯ ತಂಡಕ್ಕೆ ಆಸರೆಯಾಗಿದ್ದೇನೆ. ತಂಡದಲ್ಲಿ ಅಸ್ವಸ್ಥತೆ ಇತ್ತು, ಆ ಎಲ್ಲಾ ರೀತಿಯ ಮಾತುಕತೆಗಳ ಸುತ್ತಲೂ ನನ್ನನ್ನು ನ್ಯಾವಿಗೇಟ್ ಮಾಡಬೇಕಾಗಿತ್ತು "ಎಂದು ಅವರು ಹೇಳಿದರು.

ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿಯಮಗಳ ಪ್ರಕಾರ, ರಾಷ್ಟ್ರೀಯ ತಂಡವು ಇಬ್ಬರು ಕಪ್ಪು ಆಫ್ರಿಕನ್ನರು ಸೇರಿದಂತೆ ಆರು ಆಟಗಾರರನ್ನು ತಮ್ಮ ತಂಡದಲ್ಲಿ ಕಣಕ್ಕಿಳಿಸುವ ಅಗತ್ಯವಿದೆ."ನೀವು ರೂಪಾಂತರದ ದೃಷ್ಟಿಯಿಂದ ನೋಡಿದಾಗ ನನ್ನನ್ನು ಕೆರಳಿಸುವ ಒಂದು ವಿಷಯ. ಉತ್ತಮ ಪ್ರದರ್ಶನ ತೋರಿದಾಗ, ರೂಪಾಂತರದ ಬಗ್ಗೆ ಮಾತನಾಡುವುದಿಲ್ಲ. ಆದರೆ, ನಾವು ಕಳಪೆ ಪ್ರದರ್ಶನ ತೋರಿದಾಗ ರೂಪಾಂತರದ ಕಾರ್ಯಸೂಚಿಯ ಮುಂದಿಟ್ಟುಕೊಂಡು ನಮ್ಮನ್ನು ಟೀಕಿಸಲಾಗುತ್ತದೆ,'' ಎಂದು ಬವುಮಾ ಹೇಳಿದರು. "ನನಗೆ ಇದರೊಂದಿಗೆ ಗಂಭೀರ ಸಮಸ್ಯೆ ಇದೆ. ಒಳ್ಳೆಯದನ್ನು ಕೆಟ್ಟದ್ದನ್ನು ತೆಗೆದುಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಕಪ್ಪು ಆಫ್ರಿಕಾದ ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದಾಗ ರೂಪಾಂತರವು ಕೆಟ್ಟದಾಗಿ ಕಾಣುತ್ತದೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ರೂಪಾಂತರ ನಿಯಮ ಒಳ್ಳೆಯದು ಎಂದು ಬಿಂಬಿಸಲಾಗುತ್ತದೆ," ಎಂದು ಅವರು ಹೇಳಿದರು. ಮೊದಲ ಪಂದ್ಯದ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಸರಣಿಯಲ್ಲಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ಫೆಬ್ರವರಿ 7 ರ ಶುಕ್ರವಾರ ಡರ್ಬನ್‌ನಲ್ಲಿ ನಡೆಯಲಿದೆ.