ಲೋಕದರ್ಶನ ವರದಿ
ಬೆಳಗಾವಿ 14: ಕೆಎಲ್ಇ ಸಂಗೀತ ಮಹಾವಿದ್ಯಾಲಯದ ವತಿಯಿಂದ ಫೆ. 15ರ ಇಂದು ಇಲ್ಲಿನ ಕೆಎಲ್ಇ ಕನ್ವೆನ್ಷನ್ ಸೆಂಟರ್ ಹಾಲ್ನಲ್ಲಿ ಪಂಡಿತ್ ಹಯವದನ ಜೋಶಿ ಅವರ ಸ್ಮರಣಾರ್ಥ `ಸ್ವರ ಶ್ರದ್ಧಾಂಜಲಿ' ಸಂಗೀತ ಕಾರ್ಯಕ್ರಮ ಹಾಗೂ ಸಂಗೀತ ವಿಭಾಗದ ವಾಷರ್ಿಕೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಬೆಳಗಾವಿ ನಗರದ ಪೊಲೀಸ್ ಉಪ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ) ಸೀಮಾ ಲಾಟ್ಕರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಕೆಎಲ್ಇ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾಕ್ಟರ್ ವೀ.ಎ. ಕೋಟೀವಾಲೆ, ಡಾಕ್ಟರ್ ರಾಜೇಂದ್ರ ಬಾಂಧನ್ಕರ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು. ಈ ಕಾರ್ಯಕ್ರಮದಲ್ಲಿ ಗುರುದತ್ತ ಎ.ಕೆ (ದೆಹಲಿ) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಅಂಬರ ಮಿರಿಂಗ್ಕರ್ (ಗೋವಾ) ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಪ್ರಹ್ಲಾದ ಜಾಧವ (ಕೊಲ್ಲಾಪುರ) ಗಜಲ್ ಇವರ ಸಂಗೀತ ಕಾರ್ಯಕ್ರಮವು ಜರುಗಲಿದೆ.
ಬೆಳಗಾವಿಯ ಎಲ್ಲಾ ಸಂಗೀತ ಕಲಾಸಕ್ತರು, ಕಲಾಭಿಮಾನಿಗಳು ಈ ಕಾರ್ಯಕ್ರಮದ ಲಾಭವನ್ನು ಪಡೆಯಬೇಕಾಗಿ ಸಂಗೀತ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸ್ನೇಹಾ ರಾಜೂರಿಕರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.