ಬಿಇಒ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ 'ವಿಜ್ಞಾನ ಹಬ್ಬ 2019'

ಲೋಕದರ್ಶನ ವರದಿ

ಕಾಗವಾಡ 16: ಕಾಗವಾಡ ಬಿಇಒ ಕಾರ್ಯಕ್ಷೇತ್ರ ವ್ಯಾಪ್ತಿಯ ಉಗಾರ ಖುರ್ದ ಪಟ್ಟಣದ ಸಕರ್ಾರಿ ಕನ್ನಡ, ಮರಾಠಿ ಶಾಲೆಯ ವಿದ್ಯಾಥರ್ಿಗಳಿಗಾಗಿ ಎರಡು ದಿನದ 'ವಿಜ್ಞಾನ ಹಬ್ಬ 2019' ಕಾರ್ಯಕ್ರಮಕ್ಕೆ ಬಿಇಒ ಎ.ಎಸ್.ಜೋಡಗೇರಿ ಚಾಲನೆ ನೀಡಿದರು.

ಸೋಮವಾರ ರಂದು ಉಗಾರ ಕ್ಲಸ್ಟರ್ ವ್ಯಾಪ್ತಿಯ 4 ಸಕರ್ಾರಿ ಕನ್ನಡ ಶಾಲೆ ವಿದ್ಯಾಥರ್ಿಗಳಿಂದ ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ಉಗಾರ ಪಟ್ಟಣದ ಮುಖ್ಯ ಮಾರ್ಗಗಳಿಂದ ಭವ್ಯ ರ್ಯಾಲಿ ಹಮ್ಮಿಕೊಂಡಿದ್ದರು.

ಶಿಕ್ಷಣ ಇಲಾಖೆ ವತಿಯಿಂದ ಈ ವರ್ಷ ನೂತನ ಹಾಗೂ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮಕ್ಕಳಲ್ಲಿ ಸೃಜನಶೀಲ ಚಟುವಟಿಕೆಗಳನ್ನು, ಕೌಶಲ್ಯಗಳನ್ನು ಪ್ರದಶರ್ಿಸಲು ವಿಜ್ಞಾನ ಹಬ್ಬ ಕಾರ್ಯಕ್ರಮದ ಉದ್ದೇಶವಾಗಿದೆ. ಕಾಗವಾಡ ಕ್ಷೇತ್ರದಲ್ಲಿ ಉಗಾರ, ಶಿರಗುಪ್ಪಿ, ಐನಾಪೂರ ಮೂರು ಕ್ಲಸ್ಟರ್ಗಳಲ್ಲಿ ಕಾರ್ಯಕ್ರಮ ನೆರವೇರುತ್ತದೆ. 

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಉಂಟುಮಾಡುವುದು. ಮಕ್ಕಳಿಂದ ಆಕರ್ಷಣೆಯಾದ ಕಾರ್ಯಕ್ರಮ ನಿಮರ್ಾಣಗೊಳಿಸುವುದರಿಂದ ಅವರಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಿಸುತ್ತಿದೆ. ಮತ್ತು ಹಾಜರಾತಿ ಹೆಚ್ಚಾಗುವದರೊಂದಿಗೆ ಪರಿಣಾಮಕಾರಿ ಕಲಿಕೆ ಉಂಟಾಗುತ್ತದೆ.ಇದರಲ್ಲಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ, ವಿದ್ಯಾಥರ್ಿಗಳಲ್ಲಿಯ ಪ್ರತಿಭೆ ಗುರುತಿಸಬೇಕು. ಅಂದರೇ ಮಾತ್ರ ವಿಜ್ಞಾನ ಹಬ್ಬದ ಉದ್ದೇಶ ಸಫಲವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಹೇಳಿದರು.

ಎ.ಎಸ್.ಜೋಡಗೇರಿ, ಬಿಇಒ  ಸಮಾರಂಭದಲ್ಲಿ ರಾಜ್ಯ ನೌಕರರ ಸಂಘದ ಕಾಗವಾಡ ಘಟಕ ಆಧ್ಯಕ್ಷ ಜಿ.ಎಂ.ಸಡ್ಡಿ, ಶಿಕ್ಷಕ ಸಂಘಟನೆಯ ಸದಸ್ಯ ಆರ್.ಎಂ.ಪಾಟೀಲ, ಈಶ್ವರ ಕಾಂಬಳೆ, ಎಂ.ಎನ್.ಕುಂಬಾರ, ಪುರಸಭೆ ಸದಸ್ಯ ಸ್ವಾತಿ ಕುಂಬಾರ, ಇಂದುಮತಿ ಬಸ್ತವಾಡೆ, ಬಾಳಕೃಷ್ಣ ಪಾಟೀಲ, ಪ್ರಫೂಲ್ಲ್ ಥೋರುಶೆ, ವಿಜಯ ಆಸೂದೆ, ಎ.ಎಸ್.ಪರಸನ್ನವರ, ಮುಖ್ಯಾಧ್ಯಾಪಕರಾದ ಅಣ್ಣಾಸಾಹೇಬ ಕೋಳಿ, ಎಸ್.ಜೆ.ದೇವಮಾನೆ, ಎಸ್.ಜೆ.ಹೋನಕಾಂಬಳೆ, ಸಂಪನ್ನಮೂಲ ವ್ಯಕ್ತಿಗಳಾದ ಎಂ.ಎನ್.ಕುಂಬಾರ, ಜಾಸ್ಮೀನ , ಎಚ್.ಎಫ್.ಸನ್ನಕ್ಕಿ, ಅಣ್ಣಪ್ಪಾ ಕೋಳಿ, ಶಿಕ್ಷಕ ಸಂಘಟನೆ ಸದಸ್ಯರು, ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.