ಕೊಪ್ಪಳ : ಮನುಷ್ಯ ಹುಟ್ಟಿದ ಮೇಲೆ ಧೀರ್ಘಕಾಲ ಬಾಳಿ ಬದುಕಬೇಕಾದರೆ ಉತ್ತಮ ಹವ್ಯಾಸ ಮತ್ತು ಅಭ್ಯಾಸಗಳನ್ನು ರೂಡಿಸಿಕೊಂಡಾಗ ಮಾತ್ರ ಒಳ್ಳೆಯ ಆರೋಗ್ಯದ ಜೊತೆಗೆ ನಮಗೆ ಬರುವ ವಿವಿಧ ಕಾಯಿಲೆಗಳಿಂದ ದೂರವಿರಬಹುದು.
ಆದರೆ ಕೆಲವರು ಹಲವಾರು ದುಷ್ಚಟಗಳಾದ ಮಧ್ಯಪಾನ, ಧೂಮಪಾನ, ಸಿಗರೇಟ, ಬಿಡಿ, ಗಾಂಜಾ, ಚರಸ್ ನಂತಹ ಹಲವಾರು ಮಾಧಕ ಚಟಗಳ ದಾಸರಾಗಿ ವಿವಿಧ ಕಾಯಿಲೆಗಳಿಗೆ ಬಲಿಯಾಗುವುದರ ಜೊತೆಗೆ ಅವರ ಮೇಲೆ ಅವಲಂಭಿತರಾಗಿರುವ ಕುಟುಂಬವನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಾರೆ.
ತಂಬಾಕು ಸೇವನೆ ಒಂದು ಕೆಟ್ಟ ಚಟವಾಗಿದ್ದು, ಇದರಿಂದ ಮನುಷ್ಯನ ದೇಹದ ಮೇಲೆ ಹಲವಾರು ದುಷ್ಪರಿಣಾಮಗಳು ಬೀರುತ್ತವೆ. ಅವುಗಳೆಂದರೆ ಧ್ವನಿ ಪೆಟ್ಟಿಗೆಯ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ವಯೋ ಕಾರ್ಡ್ಯಲ್ ಇನ್ಫಕ್ಷನ್, ಜಠರದ ಹುಣ್ಣು, ಅಪಧಮನಿಗೆ ಸಂಬಂಧಿಸಿದ ಕಾಯಿಲೆ, ಮೆಧೋಜಿರಕ ಗ್ರಂಥಿ ಕ್ಯಾನ್ಸರ್, ಮೂತ್ರ ಕೋಶದ ಕ್ಯಾನ್ಸರನಂತಹ ಮಾರಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ.
ತಂಬಾಕು ಸೇವನೆಯಿಂದ ವಿಶ್ವದ 10 ಜನರ ಪೈಕಿ ಒಂದು ಸಾವು ಸಂಭವಿಸುತ್ತಿದ್ದು, ಭಾರತದಲ್ಲಿ ತಂಬಾಕು ಸೇವನೆಯಿಂದ ಪ್ರತಿದಿನ 2500 ಜನ ಸಾವನಪ್ಪುತ್ತಿದ್ದಾರೆ. ಪ್ರತಿ ಸಿಗರೇಟ್, ಬಿಡಿ ಸೇವನೆಯಿಂದ ಒಬ್ಬ ವ್ಯಕ್ತಿಯ ಏಳು ನಿಮಿಷದ ಆಯುಷ್ಯ ಕಡಿಮೆಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.
ತಂಬಾಕಿನಲ್ಲಿ ನಿಕೋಟಿನ್, ಅಮೊನಿಯ, ಕಾರ್ಬನ್ ಮೊನಾಕ್ಸೈಟ್, ಹೈಡ್ರೋಜನ್ ಸೈನೆಡ್, ಟಾರ್, ಮೆಂಥಾಲ್, ಸತು, ಆಸರ್ೆನಿಕ್ ನಂತಹ ಸುಮಾರು 3000 ದಿಂದ 4000 ಅಪಾಯಕಾರಿ ರಾಸಾಯನಿಕಗಳನ್ನು ತಂಬಾಕು ಪದಾರ್ಥಗಳು ಹೊಂದಿರುತ್ತವೆ.
ವ್ಯಕ್ತಿ ತಾನು ನೇರವಾಗಿ ಧೂಮಪಾನ ಮಾಡುವುದಲ್ಲದೇ ಪಕ್ಕದಲ್ಲಿ ಇರುವ ಇತರರು ಅದರ ಹೊಗೆ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ. ಗಂಡಸರಲ್ಲಿ ಲೈಂಗಿಕ ಅಶಕ್ತತೆ, ಹೆಣ್ಣುಮಕ್ಕಳಲ್ಲಿ ಗರ್ಭಪಾತವಾಗುವುದು ಅಥವಾ ಕಡಿಮೆ ತೂಕದ ಮಕ್ಕಳ ಜನನವಾಗುವ ಸಂಭವವಿರುತ್ತದೆ. ಹಾಗೂ ಮಗುವಿನ ದೈಹಿಕ ಹಾಗೂ ಮಾನಸಿಕ ವೈಫಲ್ಯಗಳು ಕಿವಿಯ ಸೊಂಕು, ಕೆಮ್ಮು ಮತ್ತು ಉಬ್ಬಸದಿಂದ ಬಳಲುವ ಸಾಧ್ಯತೆ ಇರುತ್ತದೆ. ತಂಬಾಕು ಸೇವನೆ ಮಾಡುವ ಮಹಿಳೆಯರಿಗೆ ಮುಟ್ಟು ನಿಂದ ನಂತರವೂ ಮೂಳೆಯ ತೊಂದರೆಗಳು ಮತ್ತು ಹೃದಯ ಸಂಬಂಧಿಸಿದ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗಿರುತ್ತದೆ.
ತಂಬಾಕು ನಿಯಂತ್ರಣ ಕಾನೂನು-ಅಔಕಖಿಂ 2003 ರಲ್ಲಿ ಜಾರಿಯಾಗಿದ್ದು, ಸೆಕ್ಷನ್ 4 ರ ಪ್ರಕಾರ ಸಾರ್ವಜನಿಕರ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಿರುತ್ತದೆ. ಸೆಕ್ಷನ್ 5 ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಅಥವಾ ಪರೋಕ್ಷ ಜಾಹೀರಾತು, ಉತ್ತೇಜನ ಪ್ರಾಯೋಜಕತೆ ನಿಷೇಧಿಸಲಾಗಿದೆ. ಸೆಕ್ಷನ್ 6ಎ ಪ್ರಕಾರ ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ ಅಂದರೆ 18 ವರ್ಷದೊಳಗಿನ ಮಕ್ಕಳಿಗೆ ಸಿಗದಂತೆ ನಿಯಂತ್ರಣ ಮಾಡುವುದಾಗಿದೆ. ಸೆಕ್ಷನ್ 6ಬಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಶಿಕ್ಷಣ ಸಂಸ್ಥಗೆಳು ಸಂಪೂರ್ಣವಾಗಿ ತಂಬಾಕು ಮುಕ್ತವಾಗಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ. ಹಾಗೂ ತಂಬಾಕು ನಿಷೇಧ ಕುರಿತು ನಾಮ ಫಲಕಗಳನ್ನು ಕಡ್ಡಾಯವಾಗಿ ಶಿಕ್ಷಣ ಸಂಸ್ಥೆಗಳ ಮುಂದೆ ಹಾಕಬೇಕು.
ತುಂಬಾಕು ಸೇವನೆ ತ್ಯಜಿಸುವುದರಿಂದಾಗುವ ಲಾಭಗಳು: ನಮ್ಮ ಹೃದಯ ಬಡಿತ ಮತ್ತು ದೇಹದಲ್ಲಿ ರಕ್ತ ಸಂಚಾರ ಸರಳವಾಗುತ್ತದೆ. ಮತ್ತು ರಕ್ತದಲ್ಲಿರುವ ಕಾರ್ಬನ್ ಮೊನಾಕ್ಸೈಡ್ನ ಸಂಚಾರ ಸರಳವಾಗುವುದು. ರಕ್ತ ಸಂಚಾರ ಹಾಗೂ ಶ್ವಾಸಕೋಶಗಳ ಉತ್ತಮ ಕಾರ್ಯನಿರ್ವಹಣೆ, ಕೆಮ್ಮು, ಸುಸ್ತು, ಉಸಿರಾಟದ ತೊಂದರೆಗಳ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೃದಯಘಾತದ ಅಪಾಯಗಳು ಕಡಿಮೆ, ಬಾಯಿ ಗಂಟಲು, ಅನ್ನನಾಳ, ಮೂತ್ರಕೋಶ, ಗರ್ಭಶಯ ಮತ್ತು ಪಚನ ಗ್ರಂಥಿಗಳ ಕ್ಯಾನ್ಸರ್ ಬರುವ ಅಪಾಯಗಳಿಂದ ದೂರವಿರಬಹುದು. ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಗಳಡಿಯಲ್ಲಿ ಹಲವಾರು ಸರ್ಕಾರೇತರ ಸಂಸ್ಥೆಗಳು ತಂಬಾಕಿನಿಂದ ಆರೋಗ್ಯದ ಮೇಲಾಗುವ ಹಾನಿಯ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಬರುತ್ತಲಿವೆ.
ಸ್ವಾಸ್ಥ್ಯ ಸದೃಢ ಸಮಾಜ ನಿಮರ್ಾಣವಾಗಬೇಕಾದರೆ, ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ತಂಬಾಕಿನಿಂದಾಗುವ ಹಾನಿಯ ಕುರಿತು ತಮ್ಮ ಅಕ್ಕ-ಪಕ್ಕದವರಿಗೆ ತಿಳಿ ಹೇಳುವುದರ ಜೊತೆಗೆ ನಮ್ಮನ್ನ ನಾವು ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಆಗ ಮಾತ್ರ ಸಾಮಾಜದಲ್ಲಿ ನಾವು ನಮ್ಮ ಕುಟುಂಬದ ಜೊತೆಗೆ ಸಂತೋಷದ ಜೀವನ ಕಳೆಯಬಹುದು. ಜೀವನ ಆಯ್ದುಕೊಳ್ಳಿ ತಂಬಾಕನಲ್ಲ.