'ಮಾಲ್ಗುಡಿ ಡೇಸ್ ಯುವಜನತೆಗೆ ಉತ್ತಮ ಸಂದೇಶದ ಚಿತ್ರ

ಬೆಳಗಾವಿ : ದಿ. ಶಂಕರನಾಗ್ ಅವರ ಅಂದಿನ ಮಾಲ್ಗುಡಿ ಡೇಸ್ ಸಿನಿಮಾಗೂ ಈ ಹೊಸ ಮಾಲ್ಗುಡಿ ಡೇಸ್ಗೂ ಯಾವುದೇ ರೀತಿ ಸಂಬಂಧವಿಲ್ಲ. ಆದರೆ ಚಿನ್ನಾರಿಮುತ್ತದಂತಹ ಒಂದು ಒಳ್ಳೆಯ ಚಿತ್ರವನ್ನು ವಿಜಯ ರಾಘವೇಂದ್ರ ಯಾಕೆ ಕೊಡಲು ಸಾಧ್ಯವಾಗುತ್ತಿಲ್ಲ. ಯಶಸ್ವಿ ಸಿನಿಮಾ ಮಾಡಲು ಸಾಧ್ಯ ಆಗುತ್ತಿಲ್ಲ ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಈ ಚಿತ್ರದಿಂದ ಉತ್ತರ ಸಿಗಲಿದೆ ಎಂದು ನಾಯಕನಟ ವಿಜಯ್ ರಾಘವೇಂದ್ರ ಹೇಳಿದ್ದಾರೆ.

ನಗರದ ಮಹಾಂತೇಶ ನಗರದಲ್ಲಿರುವ ಮಾಜಿ ಸಂಸದ ಎಸ್.ಬಿ. ಸಿದ್ನಾಳ್ ಮನೆಗೆ ಮಂಗಳವಾರ ಭೇಟಿ ನೀಡಿದ ಚಿತ್ರನಟ ವಿಜಯ ರಾಘವೇಂದ್ರ ಆಶೀವರ್ಾದ ಪಡೆದುಕೊಂಡರು. ಬಳಿಕ ಅಲ್ಲಿಯೇ ಸುದ್ದಿಗೋಷ್ಠಿ ನಡೆಸಿ ವಿಜಯ ರಾಘವೇಂದ್ರ ಮಾತನಾಡಿದರು. ಮಾಲ್ಗುಡಿ ಡೇಸ್ನಲ್ಲಿ ನಿಮ್ಮ ಬದುಕು, ಬಾಲ್ಯ, ಊರು, ತಂದೆ-ತಾಯಿ, ಅಜ್ಜ-ಅಜ್ಜಿ, ಸ್ನೇಹಿತರು ನೆನಪಾಗುತ್ತಾರೆ.

ಯವಕರನ್ನು ಟಾಗರ್ೆಟ್ ಮಾಡಿ ಒಂದು ಒಳ್ಳೆಯ ಚಿತ್ರ ಮಾಡಿದ್ದೇವೆ ಇದೇ ಫೆ.7ರಂದು ಚಿತ್ರ ಬಿಡುಗಡೆ ಆಗುತ್ತಿದ್ದು ದಯವಿಟ್ಟು ಎಲ್ಲರೂ ಮಾಲ್ಗುಡಿ ಡೇಸ್ ನೋಡಿ ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡರು. ಮಾಲ್ಗುಡಿ ಡೇಸ್ನಲ್ಲಿ 75 ವರ್ಷದ ಹಿರಿಯ ಸಾಹಿತಿಯ ಪಾತ್ರ ಮತ್ತು 16 ವರ್ಷದ ಬಾಲಕನ ಪಾತ್ರವನ್ನು ಮಾಡಿದ್ದೇನೆ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು. ಬಳಿಕ ನಗರದ ಲಿಂಗರಾಜ್, ಜೈನ್, ಗೊಮಟೇಶ್ ಕಾಲೇಜುಗಳಿಗೆ ಭೇಟಿ ನೀಡಿದ ಮಾಲ್ಗುಡಿ ಡೇಸ್ ಚಿತ್ರದ ಪರವಾಗಿ ವಿಜಯ ರಾಘವೇಂದ್ರ ಪ್ರಚಾರ ನಡೆಸಿದರು. ಈ ವೇಳೆ ಮಾಲ್ಗುಡಿ ಡೇಸ್ ಚಿತ್ರದ ಹಾಡು ಹಾಡಿ ವಿದ್ಯಾಥರ್ಿಗಳನ್ನು ವಿಜಯ ರಾಘವೇಂದ್ರ ರಂಜಿಸಿದರು. 

ಈ ಸಂದರ್ಭದಲ್ಲಿ ಎಸ್.ಬಿ. ಸಿದ್ನಾಳ, ಬಿಜೆಪಿ ಯವ ಮುಖಂಡ ದಿಗ್ವಿಜಯ ಸಿದ್ನಾಳ, ನಿದರ್ೆಶಕ ಕಿಶೋರ ಮೂಡಬಿದರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಬೈಲಹೊಂಗಲದ ಗಣಾಚಾರಿ ಡಿಗ್ರಿ ಕಾಲೇಜಿನಲ್ಲಿ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಮಾಲ್ಗುಡಿ ಡೇಸ್ ಚಿತ್ರದ ಪ್ರಚಾರವನ್ನು ನಡೆಸಿದರು. ಈ ವೇಳೆ ವಿಜಯ ರಾಘವೇಂದ್ರ ನೋಡಲು ಅಭಿಮಾನಿಗಳು ಮುಗಿಬಿದ್ದರು. ಸೆಲ್ಪೀ ಫೋಟೋ ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದರು.