'ಶಿಕ್ಷಣದಿಂದ ಜೀವನ ವಿಕಸನ'

ಲೋಕದರ್ಶನವರದಿ

ಹುಬ್ಬಳ್ಳಿ27: ಸುಸಂಸ್ಕೃತ ಸಮಾಜ ನಿಮರ್ಾಣಕ್ಕೆ ಶಿಕ್ಷಣದ ಅರಿವು ಮುಖ್ಯ. ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಶಾಲೆಗಳ ಅವಶ್ಯಕತೆಯಿದೆ. ಶಿಕ್ಷಣದಿಂದ ಬಾಳ ಬದುಕು ವಿಕಸನಗೊಳ್ಳುವುದೆಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಭಾರತ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಿಮರ್ಾಣಗೊಂಡ 'ಭಾರತ ಕಾನ್ವೆಂಟ್ ಶಾಲಾ ಕಟ್ಟಡ' ಉದ್ಘಾಟನಾ  ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.

ನಗರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕುವುದು ಸುಲಭ. ಆದರೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಸಂಸ್ಥೆಗಳು ವಿರಳ. ಆದರೆ ಪ್ರಕಾಶ ಬೆಂಡಿಗೇರಿ ಅವರು ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಬೇಕೆಂಬ ಅವರ ಉದಾತ್ ಧ್ಯೇಯ ಪ್ರಶಂಸನೀಯ. 

        ಪಾಲಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಕೊಡುವುದರ ಮೂಲಕ ಬೆಳೆಸುವ ಜವಾಬ್ದಾರಿ ತಮ್ಮದಾಗಿದೆ.

   ಇಂದು ಶಿಕ್ಷಣ ವ್ಯಾಪಾರಿಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಕಲೆ, ಸಾಹಿತ್ಯ ಸಂಸ್ಕೃತಿಗಳ ಅರಿವು ಉಂಟು ಮಾಡುತ್ತಿರುವ ನಿಟ್ಟಿನಲ್ಲಿ ಭಾರತ ಶಿಕ್ಷಣ ಸಂಸ್ಥೆ ಶ್ರಮಿಸುತ್ತಿರುವುದು ಸಂತೋಷದ ಸಂಗತಿ ಎಂದರು

ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಪೈಪೋಟಿಯಿದೆ. ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಎಲ್ಲಡೆ ಪೋಷಕರು ಹೆಚ್ಚು ಶ್ರಮಿಸುತ್ತಾ ಬಂದಿರುತ್ತಾರೆ. ಓದುವ ವಿದ್ಯಾಥರ್ಿಗಳಲ್ಲಿ ಛಲ, ನಿಷ್ಠೆ ಮತ್ತು ಶೃದ್ಧೆಯಿದ್ದರೆ ವಿಕಲಾಂಗರೂ ಕೂಡಾ ಉತ್ತಮ ಶಿಕ್ಷಣ ತನ್ನದಾಗಿಸಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಹಲವಾರು ದೃಷ್ಟಾಂತ ಕಾಣಬಹುದೆಂದರು. 

             ಭಾರತ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪ್ರಕಾಶ ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಕೊಡಲು ಈ ಸಂಸ್ಥೆ ಸದಾ ಬದ್ದವಾಗಿದೆ. ಈ ಶಾಲೆಗೆ ಎಲ್ಲರ ಸಹಕಾರವಿದ್ದರೆ ಬಹು ಬೇಗನೆ ಪ್ರಗತಿಯಾಗಲು ಸಾಧ್ಯವಾಗುತ್ತದೆ ಎಂದರು. 

      ಎಸ್.ಎಸ್.ಪಾಟೀಲ, ಅಂದಾನೆಪ್ಪ ಸಜ್ಜನ, ಮೋಹನ ಕುಲಕಣರ್ಿ, ಎಫ್.ಎಸ್.ಡಫಲಿ, ಶಾರೀಖಾ ಇರಪ್ಪಣ್ಣವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

   ಹುಬ್ಬಳ್ಳಿ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳಿ ಸದಸ್ಯರಿಂದ ಭಕ್ತಿಗೀತೆ ಜರುಗಿತು. ಸಂಸ್ಥೆಯ ಸದಸ್ಯರಾದ ಸುಭಾಶ ಅಂಚಿ ಸ್ವಾಗತಿಸಿದರು. ಪ್ರಕಾಶ ಬೆಂಡಿಗೇರಿ ನಿರೂಪಿಸಿದರು.