ಕನ್ನಡದವರೇ 'ಕನ್ನಡ್ ಗೊತ್ತಿಲ್ಲ' ಎಂದರೆ ಮೈ ಉರಿಯುತ್ತೆ: ನಿರ್ದೇಶಕ ಸಂತೋಷ್ ಆನಂದರಾಮ್

ಬೆಂಗಳೂರು, ಆ 06   ಕನ್ನಡ ಭಾಷೆಯ ಬಗೆಗಿನ ಸಂಕುಚಿತ ಮನೋಭಾವ ಹೋಗಲಾಡಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಯೂರ ರಾಘವೇಂದ್ರ ನಿರ್ದೇಶನದ 'ಕನ್ನಡ್ ಗೊತ್ತಿಲ್ಲ' ಚಿತ್ರ ಸಿದ್ಧವಾಗಿದೆ  ಚಂದನವನದ ಸೊಬಗಿನ ತಾರೆ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿದ್ದು, ಭಾಷಾ ಪ್ರೇಮದ ಜೊತೆ ಸಸ್ಪೆನ್ಸ್, ಥ್ರಿಲ್ಲರ್ ಹೊಂದಿರುವ ಮಹಿಳಾ ಪ್ರಧಾನ ಚಿತ್ರಕಥೆಯನ್ನೊಳಗೊಂಡಿದೆ 

ಚಿತ್ರದ ಅಧಿಕೃತ ತುಣುಕು ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿದರ್ೆಶಕ ಆನಂದ ರಾಮ್, ಕನ್ನಡಿಗರಲ್ಲದವರು ಕನ್ನಡ್ ಗೊತ್ತಿಲ್ಲ ಎಂದರೆ ಹೇಗಾದರೂ ಹೇಳಿಕೊಡಬಹುದು  ಆದರೆ ಕನ್ನಡದವರಾಗಿಯೂ ಕನ್ನಡ ತಿಳಿಯದಂತೆ ವರ್ತಿಸುವವರನ್ನು, ಕನ್ನಡವೆಂದರೆ ಕೀಳೆಂದು ಮೂಗು ಮುರಿಯುವವರನ್ನು ಮನ್ನಿಸಲಾಗದು  ಅಂತಹವರನ್ನು ಕಂಡರೆ ಮೈ ಕೆಂಡವಾಗುತ್ತದೆ  ಎಂದರು 

ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರ, ಈ ಹಿಂದೆ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕನ್ನಡೇತರರು ಕನ್ನಡ ಭಾಷೆಯ ಬಗ್ಗೆ ತೋರುತ್ತಿದ್ದ ಅನಾದರಣೆ, ಅಗೌರವದಿಂದ ಮನನೊಂದು, ಚಿತ್ರದ ಮೂಲಕ ಉತ್ತರ ನೀಡಬೇಕೆಂದು ಬಯಸಿದ್ದೆ  ಅದಕ್ಕೆ ಅನೇಕ ಗೆಳೆಯರು ಸಹಕರಿಸಿದರು  ನಿರ್ಮಾಪಕ ಕುಮಾರ ಕಂಠೀರವ  ಬಂಡವಾಳ ಹೂಡಿದ್ದರಿಂದ ಚಿತ್ರ ತಯಾರಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು

ನಾಯಕಿ ಹರಿಪ್ರಿಯಾ, ಚಿತ್ರದಲ್ಲಿ ತನಿಖಾಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದೇನೆ  'ಕನ್ನಡ್ ಗೊತ್ತಿಲ್ಲ' ಕಣಕಣದಲ್ಲೂ ಕನ್ನಡ ಎಂಬ ಅಡಿಬರಹ ಹೊಂದಿದೆ  ಹೀಗಾಗಿ ಕನ್ನಡ ಭಾಷೆಗೂ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಕಥೆಗೂ ಸಂಬಂಧವೇನು ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು ಎಂದು ಹೇಳಿದರು

ಶ್ರೀ ರಾಮರತ್ನ, ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ತಂಡದಲ್ಲಿರುವ ಏಕೈಕ ಕನ್ನಡಿಗ ನಕುಲ್ ಅಭ್ಯಂಕರ್ 'ಕನ್ನಡ್ ಗೊತ್ತಿಲ್ಲ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಗಿರಿಧರ್ ಛಾಯಾಗ್ರಹಣವಿದೆ

ತಾರಾಗಣದಲ್ಲಿ ಹರಿಪ್ರಿಯಾ, ಸುಧಾರಾಣಿ, ಮಜಾ ಟಾಕೀಸ್ ಖ್ಯಾತಿಯ ಪವನ್ ಗೌಡ, ರೋಹಿತ್ ಭಾನುಪ್ರಕಾಶ್, ರೆಮೊ ಮೊದಲಾದವರಿದ್ದಾರೆ.