'ಕೆಪಿಟಿಸಿಎಲ್ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ'

ಲೋಕದರ್ಶನವರದಿ

ತಾಳಿಕೋಟೆ01:  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ವನ್ನು 2020ರ ವಿದ್ಯುತ್ ಕಾಯ್ದೆ ತಿದ್ದುಪಡಿಗೆ ಸಕರ್ಾರವು ಮುಂದಾಗಿರುವದನ್ನು ವಿರೋಧಿಸಿ ತಾಳಿಕೋಟೆ ಪಟ್ಟಣದ ವಿದ್ಯುತ್ ಪ್ರಸರಣ ನೌಕರರು ಸೋಮವಾರರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ತಮ್ಮ ದೈನಿಂದ ಕಾರ್ಯಕ್ಕೆ ಹಾಜರಾದರು.

ಈ ಸಮಯದಲ್ಲಿ ನೌಕರರು ಮಾತನಾಡಿ ವಿದ್ಯುತ್ ಪ್ರಸರಣಾ ನಿಗಮವನ್ನು ಖಾಸಗಿ ಕರಣಗೊಳಿಸುವದರಿಂದ ಕಾರ್ಯನಿರ್ವಹಿಸುವ ನೌಕರರಿಗೆ ಭದ್ರತೆ ಇಲ್ಲದಂತಾಗುತ್ತದೆ ಅಲ್ಲದೇ ಖಾಸಗಿ ಕಂಪನಿಯವರು ನಿಗಧಿಪಡಿಸುವ ಮೊತ್ತಕ್ಕೆ ಯಾರೂ ದುಡಿಯಲು ಸಹ ಬರುವದಿಲ್ಲಾ ಇದರಿಂದ ರಾಜ್ಯಾದ್ಯಂತ ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ ಕೂಡಲೇ ವಿದ್ಯುತ್ ಪ್ರಸರಣ ನಿಗಮವನ್ನು ಖಾಸಗಿಕರಣ ಗೊಳಿಸಲು ಸಕರ್ಾರ ಮುಂದಾಗಿರುವ ಕಾಮರ್ಿಕ ವಿರೋಧಿ ನೀತಿಯನ್ನು ಕೈಬಡಬೇಕು ಎಂದು ಒತ್ತಾಯಿಸಿದರು.

ಕೆಪಿಟಿಸಿಎಲ್ ಖಾಸಗಿಕರಣಗೊಳಿಸಲು ಸಕರ್ಾರವು ಮುಂದಾಗಿರುವ ಕಾಮರ್ಿಕ ವಿರೋಧಿ ನೀತಿ ಕೈಬಿಡುವ ಕುರಿತು ಬರೆದ ಮನವಿ ಪತ್ರವನ್ನು ಕೆಪಿಟಿಸಿಎಲ್ ಕಿರಿಯ ಅಭಿಯಂತರ ಟಿ.ಬಿ.ರಾಠೋಡ ಅವರಿಗೆ ನೌಕರರು ಸಲ್ಲಿಸಿದರು.

ಈ ಸಮಯದಲ್ಲಿ ಸಹಾಯಕ ಕಿರಿಯ ಅಭಿಯಂತರ ಎಸ್.ಎ.ಪಾಟೀಲ, ಗ್ರಾಮೀಣ ಶಾಖಾಧಿಕಾರಿ ಆರ್.ಎಚ್.ಕುಲಕಣರ್ಿ, ಮಡಿಕೇಶ್ವರ ಶಾಖಾಧಿಕಾರಿ ಪಿ.ಬಿ.ಗುರಡ್ಡಿ, ಉಪಕೇಂದ್ರದ ಶಾಖಾಧಿಕಾರಿ ಡಿ.ಎಂ.ಹೆಬ್ಬಾಳ, ಹಿರಿಯ ಸಹಾಯಕ ಬಿ.ಆಯ್.ಸಾರವಾಡ, ಎಂ.ಎನ್.ಬಿಜಾಪೂರ, ಎ.ಬಿ.ದೊಡಮನಿ, ಬಿ.ಎಸ್.ಸುರಪೂರ, ಶಿವು ಬೇನಾಳಮಠ, ಒಳಗೊಂಡು 60 ಕ್ಕೂ ಹೆಚ್ಚು ಕೆಪಿಟಿಸಿಎಲ್ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.