ಲೋಕದರ್ಶನ ವರದಿ
ಅಂಕೋಲಾ: ಸಾಮಾಜಿಕ ಜಾಲತಾಣಗಳ ಉಪಯೋಗ ಒಂದು ಕಡೆಯಾದರೆ ಇನ್ನೊಂದೆಡೆಗೆ ಅದರಿಂದ ತಪ್ಪು ದಾರಿ ಹಿಡಿಯುವ ಸಮಾಜವನ್ನು ನಾವು ನೋಡುತ್ತಿದ್ದೇವೆ. ಇಂತಹ ಸೈಬರ್ ಪ್ರಕರಣಗಳಲ್ಲಿ ಸಿಲುಕಿಸುವ ಕೆಲ ವರಿಂದ ಪ್ರತಿಯೊಬ್ಬ ವ್ಯಕ್ತಿಗಳು ದೂರವಿರಬೇಕಿದೆ ಎಂದು ಜೆ.ಎಂ.ಎಫ್.ಸಿ. ನ್ಯಾಯಾಧಿಶ ಜೆ. ರಂಗಸ್ವಾಮಿ ಹೇಳಿದರು.
ಅವರು ಮಂಗಳವಾರ ಕೆ.ಎಲ್.ಇ. ಸಭಾಭವನದಲ್ಲಿ ಪೊಲೀಸ್ ಇಲಾಖೆ ಮತ್ತು ವಿವಿಧ ಸಂಘಟನೆಗಳ ಆಶ್ರ ಯದಲ್ಲಿ ಹಮ್ಮಿಕೊಂಡ ಸೈಬರ್ ಅಪರಾದಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾಥರ್ಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗೃತಿ ವಹಿಸಬೇಕು ಎಂದರು.
ಹೆಚ್ಚುವರಿ ನ್ಯಾಯಾಧೀಶ ರಾಜು ಶೇಡಬಾಳ್ಕರ ಮಾತನಾಡಿ ವ್ಯಸನ ಮುಕ್ತ ಸಮಾಜ ನಮ್ಮದಾ ಗಬೇಕಾಗಿದೆ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಬೇಕೋ ಅಷ್ಟು ಒಳ್ಳೆಯ ವಿಚಾರಗಳನ್ನು ಪಡೆದುಕೊಂಡು ಕೆಟ್ಟದರಿಂದ ದೂರವಿರಬೇಕು ಎಂದರು.
ವೇದಿಕೆಯಲ್ಲಿ ಸಿ.ಪಿ.ಐ ಪ್ರಮೋದಕುಮಾರ ಬಿ., ಪಿ.ಎಸ್.ಐ ಶ್ರೀಧರ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಕಾರ್ತಿ ಕ, ಕೆ.ಎಲ್.ಇ. ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ವಿನಾಯಕ ಹೆಗಡೆ, ತಾಲೂಕಾ ಪತ್ರಕರ್ತ ಸಂಘದ ಕಾರ್ಯ ದರ್ಶಿ ಸುಭಾಷ ಕಾರೇಬೈಲ್, ನ್ಯಾಯವಾದಿ ಉಮೇಶ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು. ಉಪನ್ಯಾಸಕ ಮಂಜುನಾಥ ಇಟಗಿ ನಿರ್ವಹಿಸಿದರು. ಎನ್.ಸಿ.ಸಿ ಕಮಾಂಡರ ಜಿ.ಆರ್. ತಾಂಡೇಲ ವಂದಿಸಿದರು.