'ಆರೋಗ್ಯಕರ ಜೀವನಕ್ಕಾಗಿ ದುಶ್ಚಟ ತ್ಯಜಿಸಿ'

ಲೋಕದರ್ಶನ ವರದಿ

ಬೆಳಗಾವಿ 04:  ಇವತ್ತಿನ ಆಧುನಿಕ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಕಾರ್ಯಗಳಲ್ಲಿ ಮಗ್ನರಾಗಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೇ ಇರುವುದರಿಂದ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಇವತ್ತಿನ ಬಿಡುವಿಲ್ಲ ದಜೀವನದಲ್ಲಿ ಯುವಕರನ್ನೊಳಗೊಂಡಂತೆ ಎಲ್ಲರೂಜಂಕ್ ಮತ್ತು ಪಾಸ್ಟ್ಪುಡ್ಗಳಿಗೆ ಆಕಷರ್ಿತರಾಗುತ್ತಿದ್ದು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಬೆಳಗಾವಿ ಜಿಲ್ಲಾಸವರ್ೇಕ್ಷಣಾಧಿಕಾರಿ ಡಾ. ಬಿ.ಎನ್.ತುಕ್ಕಾರ ಕಳವಳ ವ್ಯಕ್ತಪಡಿಸಿದರು. 

ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಸಮುದಾಯ ಆರೋಗ್ಯಕೇಂದ್ರದಲ್ಲಿ ಆಯೋಜಿಸಿದ ವಿಶ್ವಆರೋಗ್ಯ ದಿನಾಚರಣೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡುತ್ತಿದ್ದರು. 

ಧೂಮಪಾನ, ಅಲ್ಕೋಹಾಲ, ತಂಬಾಕು ಕ್ಯಾನ್ಸರ ರೋಗಕ್ಕೆ ಮುಖ್ಯಕಾರಣವಾಗಿದ್ದು ವರ್ಷಕ್ಕೆ ಅಂದಾಜು 1 ಲಕ್ಷ 77 ಸಾವಿರ ಮಹಿಳೆಯರು ಗಭರ್ಾಶಯ ಕ್ಯಾನ್ಸರಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಸ್ಥನ ಕ್ಯಾನ್ಸರ, ಬಾಯಿ ಕ್ಯಾನ್ಸರ ಮುಂತಾದ ಕ್ಯಾನ್ಸರ ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಬಹಳಷ್ಟು ಹೆಚ್ಚಾಗುತ್ತಿದ್ದು ಪ್ರತಿಯೊಬ್ಬರು ತಮ್ಮ ದೇಹದಲ್ಲಿ ಏನಾದರೂ ಬದಲಾವಣೆ ಕಂಡರೆ ತಕ್ಷಣ ವೈದ್ಯರನ್ನು ಭೇಟಿಯಾದಲ್ಲಿ ಪ್ರಥಮ ಹಂತದಲ್ಲಿ ಚಿಕಿತ್ಸೆ ತೆಗೆದುಕೊಂಡರೆ ಸಾವಿನ ಸಂಖ್ಯೆ ಕಡಿಮೆಯಾಗಬಹುದು. ಇತ್ತಿಚೆಗಷ್ಟೆ ಚೀನಾದಿಂದ ಬಂದ ಕರೋನಾ ವೈರಸ್ ಬಗ್ಗೆ ವಿವರಿಸಿದ ಅವರು ಸಂಶಯಾಸ್ಪದ ಹಂತದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ವೈಯಕ್ತಿಕ ಆರೋಗ್ಯದ  ಸಲುವಾಗಿ ದುಶ್ಚಟಗಳನ್ನು ತ್ಯಜಿಸಿ ಕ್ಯಾನ್ಸರ ನಂತಹ ಮಾರಕ ರೋಗಗಳಿಂದ ರಕ್ಷಿಸಿಕೊಳ್ಳುವಂತೆ ಕರೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಎನ್.ಸಿ.ಡಿ ಕಾರ್ಯಕ್ರಮದ ಸಂಯೋಜಕ ಡಾ.ನೀತಿನ ಹೆಚ್ ಮಾತನಾಡಿ ಕ್ಯಾನ್ಸರ ವಾಸಿಯಾಗದಂತಹ ರೋಗ ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡಲಾರದು. ಸಾತ್ವಿಕ ಆಹಾರ ಪದ್ಧತಿ, ವಯ್ಯಕ್ತಿಕ ಸ್ವಚ್ಛತೆ, ಹಣ್ಣು ಹಂಪಲಗಳ ಸೇವೆನೆ, ನಿಯಮಿತ ದೈಹಿಕ ವ್ಯಾಯಾಮದಿಂದಾಗಿ ಕ್ಯಾನ್ಸರ ರೋಗದಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದರು. ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ ತಮ್ಮ ದೇಹದಲ್ಲಿ ಏನಾದರೂ ಬದಲಾವಣೆ ಗಮನಿಸಿದರೆ ನಾಚದೇ ತಕ್ಷಣ ಸಮೀಪದ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಈ ವರ್ಷದ ಘೋಷಣೆಯಾದ" ಐಆಮ್ಆಂಡ ಐ ವಿಲ್ಲ ಪ್ರಕಾರ ಪ್ರತಿಯೊಬ್ಬರು ಕ್ಯಾನ್ಸರ ರೋಗವನ್ನು ತಡೆಗಟ್ಟುತ್ತೇವೆ ಮತ್ತು ಅದಕ್ಕಾಗಿ ಪ್ರಯತ್ತಿಸುತ್ತೇವೆ ಎಂಬ ದೃಢ ನಿಧರ್ಾರ ಸಂಕಲ್ಪ ಮಾಡುವಂತೆ ಕರೆ ನೀಡಿದರು. 

ದಂತ ಆರೋಗ್ಯಾಧಿಕಾರಿ ಡಾ. ದೀಪಾ ಮಗದುಮ್ ಮಾತನಾಡಿ ಬಾಯಿ ಕ್ಯಾನ್ಸರದ ಲಕ್ಷಣಗಳನ್ನು ವಿವರಿಸಿ ತಂಬಾಕು ಪದಾರ್ಥಗಳಿಂದ ದೂರವಿರುವಂತೆ ಸಲಹೆ ನೀಡಿದರಲ್ಲದೇ ನಿಯಮಿತವಾಗಿ ಬಾಯಿ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಂಡಾಗ ಮಾತ್ರ ಕ್ಯಾನ್ಸರ ರೋಗದಿಂದ ಪಾರಾಗಬಹುದೆಂದು ಹೇಳಿದರು. 

ಕಾರ್ಯಕ್ರಮದಲ್ಲಿ ಎನ್.ಸಿ.ಡಿ.ಘಟಕದ ಶಶೀಧರ ಕಡೇಮನಿ. ಪ್ರತಿಭಾಕದಮ್, ಭಾರತಿತಲ್ಲೂರ, ವಾಣಿಶ್ರೀ ಕೊಂಕಣಿ, ಕಿ.ಮ.ಆಸಹಾಯಕಿ ಗೀತವ್ವ ಈಳೀಗೇರ ಒಳಗೊಂಡಂತೆ  ಆಶಾ ಕಾರ್ಯಕತರ್ೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಆಸ್ಪತ್ರೆಯಲ್ಲಿ ಉಚಿತವಾಗಿ ಬಾಯಿ, ಸ್ಥನ, ಮತ್ತು ಗಭರ್ಾಶಯ ಕ್ಯಾನ್ಸರ ರೋಗದ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ತ್ರೀರೋಗ ತಜ್ಞೆ ಡಾ. ನೀತಾಚವ್ವಾಣ ವಹಿಸಿದ್ದರು. ದಂತ ಆರೋಗ್ಯಾಧಿಕಾರಿ ಡಾ. ದೀಪಾ ಮಗದುಮ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಗೆ ಹಿರಿಯ ಪುರುಷ ಆರೋಗ್ಯ ಸಹಾಯಕ ಎಸ್.ಬಿ. ಮೇಳೆದ ವಂದಿಸಿದರು. ಆಕಾಶ್ ಥಬಾಜ ಕಾರ್ಯಕ್ರಮ ನಿರೂಪಿಸಿದರು.