ಹಂಗರ್ ಬಾಕ್ಸ್ ಸಂಸ್ಥೆಯಿಂದ 12 ದಶಲಕ್ಷ ಡಾಲರ್ ಬಂಡವಾಳ ಕ್ರೋಢೀಕರಣ

ಬೆಂಗಳೂರು, ಡಿ.24, ಭಾರತದಲ್ಲಿ ಮುಂಚೂಣಿಯಲ್ಲಿರುವ ಫುಡ್ ಟೆಕ್ ಪರಿಹಾರ ಒದಗಿಸುವ ಸಂಸ್ಥೆಯಾದ ಹಂಗರ್ ಬಾಕ್ಸ್ 12 ದಶಲಕ್ಷ ಡಾಲರ್ ಬಂಡವಾಳ ಕ್ರೋಡಿಕರಿಸಿದೆ. ಭಾರತೀಯ ಮತ್ತು ವಿದೇಶಿ ಹೂಡಿಕೆದಾರರಿಂದ ಈ ಬಂಡವಾಳವನ್ನು ಕ್ರೋಡಿಕರಿಸಿದ್ದು ಪೇಟಿಎಂ, ಸಬ್ರೇ ಪಾರ್ಟರ್ಸ್, ನಿಯೋಪ್ಲಕ್ಸ್ ಮತ್ತು ಎನ್ಪಿಟಿಕೆ ಎಮರ್ಜಿಂಗ್ ಏಷ್ಯಾಫಂಡ್(ಇಂಡಿಯಾ) ಸಂಸ್ಥೆಗಳು ಹಂಗರ್ ಬಾಕ್ಸ್ ನಲ್ಲಿ ಹೂಡಿಕೆ ಮಾಡಿವೆ.2016 ರಲ್ಲಿಸ್ಥಾಪನೆಯಾದ ಹಂಗರ್‌ ಬಾಕ್ಸ್ ತಂತ್ರಜ್ಞಾನವನ್ನುಬಳಸಿಕೊಂಡು ಎಂಡ್-ಟು-ಎಂಡ್ಎಫ್ ಮತ್ತು ಬಿ (ಆಹಾರ ಮತ್ತುಪಾನೀಯ) ಕಾರ್ಯಾಚರಣೆಗಳ ನಿರ್ವಹಣೆಯನ್ನು ನೀಡುತ್ತದೆ. ಇದು ಈಗಾಗಲೇ 18 ನಗರಗಳಲ್ಲಿ ಭಾರತದ ಅತಿದೊಡ್ಡ ವ್ಯವಹಾರಗಳುಮತ್ತು ಸಂಸ್ಥೆಗಳಲ್ಲಿ 126 ಗ್ರಾಹಕರಾಗಿಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲದೆ ಭಾರತದ 11 ಅತಿದೊಡ್ಡ ಕಂಪನಿಗಳಲ್ಲಿ 10 ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚುಉದ್ಯೋಗಿಗಳನ್ನು ಹೊಂದಿದೆ."ವಿಶ್ವದ ನಂಬರ್ ಒನ್ ಸಾಂಸ್ಥಿಕ ಫುಡ್ ಟೆಕ್ ಕಂಪನಿಯಾವುದು ನಮ್ಮ ಮಹತ್ವಾಕಾಂಕ್ಷೆ. ಇದರ ಸಾಧನೆಗೆ ಮೂರು ಮುಖದವಿಧಾನವನ್ನು ಅನುಸರಿಸುತ್ತಿದ್ದೇವೆ. ಮೊದಲನೆಯದು ಕಾರ್ಪೊರೇಟ್ ವಲಯಕ್ಕೆ ತೊಡಗಿಸಿಕೊಳ್ಳುವುದು. ಎರಡನೆಯದು ನಿರ್ವಹಣೆಯನ್ನು ಸುಧಾರಿಸಲುಭಾರಿ ವ್ಯಾಪ್ತಿಯನ್ನು ಬಹಿರಂಗಪಡಿಸುವ ಕ್ಷೇತ್ರಗಳಾಗಿ ವಿಸ್ತರಿಸುವುದು. ಉದಾಹರಣೆಗೆ ಶಿಕ್ಷಣ, ಆರೋಗ್ಯ ರಕ್ಷಣೆ (ಆಸ್ಪತ್ರೆಗಳು) ಮತ್ತು ಚಿಲ್ಲರೆ (ಮಾಲ್‌ಗಳು) ಮತ್ತು ಕೊನೆಯದಾಗಿ ಭಾರತವನ್ನು ಮೀರಿ ಭೌಗೋಳಿಕವಾಗಿ ನಮ್ಮ ಸಂಸ್ಥೆಯನ್ನು ವಿಸ್ತರಿಸುವುದು" ಎಂದು ಹಂಗರ್‌ ಬಾಕ್ಸ್‌ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕ ಸಂದೀಪನ್ ಮಿತ್ರಾ ಹೇಳಿದರು.