ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 

ಯಾವುದೇ ಸಂವಿಧಾನ ಅದು ರಚಿಸಲ್ಪಟ್ಟಿರುವ ಪದಗಳಿಂದ ಶ್ರೇಷ್ಠವಾಗುವುದಿಲ್ಲ. ಎಷ್ಟೇ ಸಮರ್ಥ ಪದಪುಂಜಗಳನ್ನು ಬಳಸಿ ರಚಿಸಿದ ಸಂವಿಧಾನವಾದರೂ ಕೂಡ ಅದನ್ನು ಬಳಸುವ ಜನರು ಅಸಮರ್ಥರಿದ್ದರೆ, ಕೆಟ್ಟವರಿದ್ದರೆ, ಸಂವಿಧಾನವೂ ಕೂಡ ಕೆಟ್ಟ ಹಾಗೂ ನಿಶ್ಯಕ್ತ ಸಂವಿಧಾನವಾಗುತ್ತದೆ. ಎಷ್ಟೇ ಕೆಟ್ಟ ಪದಗಳನ್ನು ಬಳಸಿ ರಚಿಸಿದ ಸಂವಿಧಾನವಾಗಿದ್ದರೂ ಕೂಡ ಅದನ್ನು ಬಳಸುವ ಜನರು ಕಾರ್ಯ ದಕ್ಷರು, ಗುಣವಂತರೂ ಮತ್ತು ರಾಷ್ಟ್ರಪ್ರೇಮಿಗಳು ಆಗಿದ್ದರೆ ಅಂತಹ ಸಂವಿಧಾನ ಶ್ರೇಷ್ಠ ಸಂವಿಧಾನವಾಗುತ್ತದೆ" ಹೀಗೆ ನ್ಯೂಯಾಕರ್್ ಟೈಮ್ಸ್ ಪತ್ರಿಕೆಯ ವರದಿಗಾರ 'ನೀವು ಒಂದು ಶ್ರೇಷ್ಠವಾದ ಸಂವಿಧಾನವನ್ನು ರಚಿಸಿದ್ದೀರಾ?' ಎಂದು ಕೇಳಿದ ಪ್ರಶ್ನೆಗೆ ಡಾ|| ಬಿ.ಆರ್. ಅಂಬೇಡ್ಕರ್ ಅವರು ಉತ್ತರಿಸಿದ ಪರಿ ಇದು. ಇದನ್ನು ನೋಡಿದಾಗ ಭಾರತ ಸಂವಿಧಾನದ ಯಶಸ್ಸು ಈ ದೇಶದ ಪ್ರಗತಿ, ಜಗತ್ತಿನೆದುರು ಈ ದೇಶದ ಸ್ಥಾನಮಾನ ನಿಧರ್ಾರವಾಗುವುದು ನಮ್ಮ ದೇಶದ ಜನತೆಯ ನಡುವಳಿಕೆಯ ಮೇಲೆ ಹಾಗೂ ಆಡಳಿತದ ಮೇಲೆ ನಿಂತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಭವ್ಯ ಪರಂಪರೆ ಉಳ್ಳ ಭಾರತ ದೇಶವನ್ನು ಹಲವಾರು ವಿದೇಶಿಯರು ಆಳ್ವಿಕೆ ಮಾಡಿ ಹೋದರು ಕೂಡ ತನ್ನತನವನ್ನು ಯಾವತ್ತು ಬಿಟ್ಟು ಕೊಡಲಿಲ್ಲ. ಅದೊಂದು ಕಾಲದಲ್ಲಿ ಭಾರತದ ಎದುರು ಮಂಡಿಯೂರಿ ಕುಳಿತು ಜ್ಞಾನಕ್ಕಾಗಿ ಮೊರೆ ಇಡುತ್ತಿದ್ದ ದೇಶಗಳೆಲ್ಲ ಇಂದು ಜಗತ್ತಿನೆದುರು ಬೀಗುತ್ತಿದ್ದರೂ ಕೂಡ ಅದ್ಯಾವುದನ್ನು ಲೆಕ್ಕಿಸದೆ ಭಾರತ ಮಾತ್ರ ತನ್ನ ಕಾರ್ಯವನ್ನು ಮಾಡುತ್ತ ಸಾಗುತ್ತಲಿದೆ. ಆದರೆ ಇತ್ತೀಚಿಗೆ ದೇಶದಲ್ಲಿ ನಡೆಯುತ್ತಿರುವ ಸ್ಥಿತಿಗತಿಗಳನ್ನು ನೋಡಿದಾಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಹುಚ್ಚನ ಕೈಯಲ್ಲಿ ಆಯುಧ ಕೊಟ್ಟ ಹಾಗಾಗಿದೆ ಅನ್ನಿಸುತ್ತಲಿದೆ. ಆ ಮೂಲಕ ಅಂಬೇಡ್ಕರ್ ಈ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಎನ್ನುವುದು ಯಶಸ್ವಿಯಾಗುವುದು ಈ ದೇಶದ ಪ್ರಜೆಗಳಲ್ಲಿನ ದೇಶಪ್ರೇಮ ಹಾಗೂ ನಡವಳಿಕೆಯ ಮೇಲೆ ಎಂದಿದ್ದು ಮತ್ತೆ ಮತ್ತೆ ನೆನಪಾಗುತ್ತಿದೆ. ಜೊತೆಗೆ ಈವಾಗ ಯಾವ ಕಡೆಗೆ ದೇಶ ಸಾಗುತ್ತಿದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಮೊನ್ನೆ ಹೀಗೆ ಮಾತನಾಡುತ್ತ ಇದ್ದಾಗ ಯಾರೋ ಹೇಳಿದ ಮಾತನ್ನು ನಾನಿಲ್ಲಿ ಉಲ್ಲೇಖ ಮಾಡುತ್ತಿದ್ದೇನೆ. ಉತ್ತರ ಕೋರಿಯಾ ಅನ್ನುವ ತಿಕ್ಕಲು ರಾಷ್ಟ್ರದ ಸವರ್ಾಧಿಕಾರಿ ಕೀಮ್ ಜಾಂಗ್ ಉನ್ ಇಡೀ ಆಡಳಿತ ವ್ಯವಸ್ಥೆ ಎನ್ನುವ ಜುಟ್ಟನ್ನು ತನ್ನ ಕೈಯಲ್ಲಿಟ್ಟುಕೊಂಡು ಮನ ಬಂದಂತೆ ಆಡಿಸುತ್ತಾನೆ. ಅಲ್ಲಿ ಆತ ಹೇಳಿದ್ದೇ ಕಾನೂನು, ಆತನ ಮಾತೇ ಶಾಸನವಾಗುತ್ತದೆ.
ಆ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಕೂಡ ನಿರ್ಧರಿಸುವವನು ಆ ಮಹಾಶಯನೆ. ತಲೆ ಕೂದಲನ್ನು ಕತ್ತರಿಸಬೇಕಾದರೂ ಆತ ನಿಧರ್ಾರ ಮಾಡಿದಂತ ವಿನ್ಯಾಸಗಳ ಪ್ರಯೋಗವೇ ಆಗಿರಬೇಕೆ ಹೊರತು ಬೇರ್ಯಾವುದನ್ನು ಮಾಡುವ ಹಕ್ಕಿಲ್ಲ. ಮನಸೋ ಇಚ್ಚೆ ಕೂದಲು ಬಿಡುವಂತಿಲ್ಲ, ಮನಸ್ಸಿಗೆ ಬಂದಹಾಗೆ ಕತ್ತರಿಸುವಂತಿಲ್ಲ. ಒಂದು ವೇಳೆ ಅದನ್ನು ಮೀರಿ ನಡೆದರೆ ಆ ದೇಶಲ್ಲಿ ಬದುಕಿರಲು ಅವಕಾಶವೇ ಇಲ್ಲ. ಅಲ್ಲಿನ ಮಿಲಿಟರಿಯಾಗಿರಲಿ, ಪೊಲೀಸ್ ಆಗಿರಲಿ ಎಲ್ಲವು ಕೀಮ್ನ ಆದೇಶದಂತೆಯೇ ನಡೆಯಬೇಕು. ಅದು ಸರಿ ಇರಲಿ ತಪ್ಪಿರಲಿ ಆತ ಹೇಳಿದನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಲೇಬೇಕು. ಸ್ವಂತಃಕ್ಕೆ ವಾಹನ ಖರೀದಿ ಮಾಡುವ ಅವಕಾಶವು ಸಾರ್ವಜನಿಕರಿಗಿಲ್ಲ. ಅದು ಕೇವಲ ಸಕರ್ಾರಿ ಅಧಿಕಾರಿಗಳು ಹಾಗೂ ದೇಶ ಕಾಯುವ ಯೋಧರು ಮಾತ್ರ ಖರೀದಿಸಬಹುದು ಹಾಗೂ ಬಳಸಬಹುದು. ಜನ ಸಾಮಾನ್ಯರು ಸೈಕಲ್ ಹಾಗೂ ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿಕೊಂಡು ಬದುಕಬೇಕು. ಉಡುಗೆ ತೊಡುಗೆಗಳ ಮೇಲೆ ನಿರ್ಬಂಧವಿದೆ. ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ. ಬೈಬಲ್ ಓದುವಂತಿಲ್ಲ, ಬೇರೆ ದೇಶದ ಚಾನಲ್ಗಳನ್ನು ವಿಕ್ಷೀಸುವ ಹಾಗಿಲ್ಲ, ಬೇರೆ ಭಾಷೆಯ ಅಂತಜರ್ಾಲವನ್ನು ವಿಕ್ಷಣೆ ಮಾಡುವಂತಿಲ್ಲ. ಒಂದು ವೇಳೆ ಈ ಎಲ್ಲ ನಿರ್ಬಂಧಗಳನ್ನು ಮೀರಿ ಒಂದು ಹೆಜ್ಜೆ ಇಟ್ಟರು ದೇಹದಲ್ಲಿ ಪ್ರಾಣ ಇರುವುದಿಲ್ಲ. ಇದು ಆ ದೇಶದ ಸ್ಥಿತಿ. ಅಲ್ಲಿನ ಸ್ಥಿತಿ ಅದೆಷ್ಟು ಭೀಕರವಾಗಿರಬಹುದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ನೀಡುತ್ತೇನೆ. ಇತ್ತೀಚೆಗೆ ಜಗತ್ತನ್ನೆ ಕಾಡಿ ಕಂಗೆಡಿಸಿರುವ ಕೊರೊನಾ ವೈರಸ್ ಪ್ರತಿಯೊಂದು ದೇಶಕ್ಕೂ ನುಗ್ಗಿ ಅಲ್ಲಿನ ಜನರ ಜೀವನವನ್ನು ಕಿತ್ತುಕೊಂಡಿದೆ. ಅದರ ಹೊಡೆತಕ್ಕೆ ದೇಶಗಳು ಬಾಗಿಲು ಬಂದ್ ಮಾಡಿಕೊಂಡು ಒಳ ಕೂತು, ಆಡಳಿತ ನಿರ್ವಹಣೆ ಮಾಡಲು ಹೆಣಗಾಡಿ, ಕೊನೆಗೆ ಆಥರ್ಿಕ ಸಂಕಷ್ಟ ಎದುರಿಸಲಾಗದೇ ಬೀದಿಗೆ ಬಂದಿವೆ. ಇಂಥ ಸ್ಥಿತಿಯಲ್ಲಿ ಆ ದೇಶದ ತಿಕ್ಕಲು ಅಧ್ಯಕ್ಷನ ಆಜ್ಞೆಗೆ ಅಕ್ಷರಶಃ ಕೊರೋನಾ ವೈರಸ್ ನಡುಗಿ ಹೋಗಿದೆ ಎನಿಸುತ್ತದೆ. ಅವನೇ ಹೊರಡಿಸಿರುವ ಆದೇಶದಂತೆ ಉತ್ತರ ಕೋರಿಯಾದಲ್ಲಿ ಯಾರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತದೆಯೋ ಅವರು ಸಕರ್ಾರದ ಆದೇಶವನ್ನು ಪಾಲಿಸಬೇಕು ಒಂದು ವೇಳೆ ಅದನ್ನು ಮೀರಿ ನಡೆದರೆ ಅಂತವರನ್ನು ಗುಂಡಿಟ್ಟು ಕೊಲ್ಲಿ ಎಂದು ಆಜ್ಞೆ ಹೊರಡಿಸಿದ. ಈ ಆಜ್ಞೆಗೆ ಬೆಚ್ಚಿದ ಅಲ್ಲಿನ ಜನ ಆ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿದರು. ಜೊತೆಗೆ ರೋಗ ಬಂದರೂ ಕೂಡ ಎಲ್ಲಿಯೂ ತಿರುಗಾಡದ ಹಾಗೆ ಮನೆಯಲ್ಲಿ ಕುಳಿತು ಟ್ರೀಟ್ಮೆಂಟ್ ಮಾಡಿಕೊಂಡು ಹುಷಾರಾಗಿ ಹೊರಬಂದರು. ಇದೆಲ್ಲವನ್ನು ನೋಡಿದಾಗ ಉತ್ತರ ಕೋರಿಯಾದಲ್ಲಿರುವ ವ್ಯವಸ್ಥೆ ಭಾರತದಲ್ಲಿದ್ದರೆ ಪ್ರಸ್ತುತ ಭಾರತ ದೇಶದ ಸ್ಥಿತಿ ಹೇಗಿರುತ್ತಿತ್ತು? ಎಂದು ಆತ ಪ್ರಶ್ನಾರ್ಥವಾಗಿ ಮಾತನಾಡುವಾಗ ವಾಸ್ತವದ ಭಾರತ ನೆನಪಾಯಿತು. ಒಂದು ವೇಳೆ ಕೀಮ್ನಂತ ಆಡಳಿತ ಇದ್ದರೆ ಈ ಹದಗೆಟ್ಟ ವ್ಯವಸ್ಥೆ ಎನ್ನುವುದು ಇರುತ್ತಿರಲಿಲ್ಲವೇನೋ? ನಮ್ಮ ಜನಗಳು ಸರಿಯಾಗಿ ಇರುತ್ತಿದ್ದರೇನೋ? ಎನ್ನುವ ಭಾವನೆ ಮೂಡಿತು. ಹಾಗೆ ಮುಂದುವರಿದು ಮಾತನಾಡಿದ ಅವನು ವಾಸ್ತವದ ಭಾರತದಲ್ಲಿ ಬದಲಾವಣೆ ಬದು ಪ್ರಜೆಗಳಿಗೆ ನಿಜವಾದ ಬುದಕು, ಸ್ವಾತಂತ್ರ್ಯದ ಅರ್ಥವಾಗಬೇಕಾದರೆ ಕೀಮ್ ಜಾಂಗ್ ಉನ್ ನಂತ ಆಡಳಿತ ಸ್ವಲ್ಪ ದಿನದ ಮಟ್ಟಿಗೆ ಆದರೂ ಬರಬೇಕು. ಆವಾಗ ಮಾತ್ರ ನಮಗಳಿಗೆ ಪ್ರಜಾಪ್ರಭುತ್ವ ಬೆಲೆ ಅರ್ಥವಾಗುತ್ತದೆ. ಎನ್ನುವ ಆತನ ಮಾತನ್ನು ಕೇಳಿದರೆ ನಿಜಕ್ಕೂ ಮಾತಿನಲ್ಲಿ ತಾಕತ್ತು ಹಾಗೂ ಅದರಲ್ಲಿನ ಮರ್ಮ ಅರ್ಥವಾಗುತ್ತದೆ.
ನಿಜಕ್ಕೂ ನಾವೆಲ್ಲ ಅದೃಷ್ಟವಂತರು. ಕಾರಣ ಕೀಮ್ನಂತ ಸವರ್ಾಧಿಕಾರಿಗಳ ಕೈಯಲ್ಲಿ, ಬಂದುಕಿನಡಿಯಲ್ಲಿ ಬದುಕು ಮಾಡುವಂತ ದುರವಸ್ತೆಗೆ ನಾವು ಒಳಗಾಗಿಲ್ಲ. ದೇಶಕ್ಕೆ ಸಂವಿಧಾನ ರಚನೆ ಮಾಡುವಾಗ ಭಾರತಕ್ಕೆ ಪ್ರಜಾಪ್ರಭುತ್ವದ ಮನ್ನಣೆ ನೀಡಿ ನಮ್ಮನ್ನೆಲ್ಲ ಪ್ರಭುಗಳನ್ನಾಗಿ ಮಾಡಿದರು. ಆ ಕಾರಣದಿಂದಾಗಿಯೇ ಇಂದು ನಮಗೆ ನೀಡಿರುವ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರವನ್ನಾಗಿ ಮಾಡಿಕೊಂಡು ಪ್ರತಿಯೊಬ್ಬರು ಸ್ವಾರ್ಥ ಮೆರೆಯುತ್ತಿದ್ದೇವೆ. ಪ್ರಜೆಗಳೆ ಪ್ರಭುಗಳು ಎನ್ನುವುದನ್ನು ಅಪಾರ್ಥ ಮಾಡಿಕೊಂಡಂತೆ ಹೊರಟಿರುವ ನಾವುಗಳು ನಾವು ನಿಂತ ಮರದ ಟೊಂಗೆಯನ್ನೇ ನಮಗೇ ಗೊತ್ತಿಲ್ಲದ ಹಾಗೆ ಕಡಿದುಕೊಳ್ಳುತ್ತಲಿದ್ದೇವೆ. ಹಣದ ದಾಹ, ಅಧಿಕಾದ ವ್ಯಾಮೋಹ, ಸ್ವಾರ್ಥದ ಸಹವಾಸ, ದುಷ್ಟತನದ ಪರಮಾವದಿ, ರಾಕ್ಷಸೀ ಪ್ರವೃತ್ತಿ, ಮರೆತು ಹೋದ ಮಾನವೀಯತೆಯ ಮಧ್ಯದಲ್ಲಿ ರಾಮನ ಭೂಮಿಯಲ್ಲಿ ರಾವಣರ ರಾಜ್ಯ ನಿಮರ್ಾಣ ಮಾಡಿಕೊಂಡು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಎಳ್ಳು ನೀರು ಬಿಟ್ಟು, ಮಾನವೀಯ ಮೌಲ್ಯಗಳಿಗೆ ಗೋರಿ ಕಟ್ಟುತ್ತಿದ್ದೆವೆ. ಇದೆಲ್ಲವನ್ನು ಗಮನದಲ್ಲಿಟ್ಟು ನೋಡಿದಾಗ ಕೀಮ್ನಂತ ಸವರ್ಾಧೀಕಾರಿ ಆಡಳಿತಗಾರನ ಕೈಯಲ್ಲಿ ನಾವು ಸಿಗಬೇಕಿತ್ತು. ಆವಾಗ ಬದುಕೆಂದರೆ ಏನು? ಪ್ರಜಾಪ್ರಭುತ್ವ ಎಂದರೇನು? ನಾವು ಹೇಗೆ ಬದುಕಬೇಕು? ಬೇರೊಬ್ಬರನ್ನು ಹೇಗೆ ಬದುಕಿಸಬೇಕು? ಎನ್ನುವುದು ತಿಳಿಯುತ್ತಿತ್ತು. ಆದರೆ ಏನು ಮಾಡುವುದು ಪ್ರಜಾಪ್ರಭುತ್ವ ಎನ್ನುವ ಹಣೆ ಪಟ್ಟಿಯೊಂದಿಗೆ ಶ್ರೇಷ್ಠತೆ ಎನ್ನುವ ಪರಂಪರೆಯನ್ನು ನೀಡಿ, ಅದ್ಭುತವಾದ ಸಂವಿಧಾನವನ್ನು ಕೊಟ್ಟು ಬದುಕು ಮಾಡಿಕೊಳ್ಳಿ ಎಂದು ಈ ದೇಶಲ್ಲಿ ಬಿಟ್ಟ ತಪ್ಪಿಗಾಗಿ ನಾವಿಂದು ನಮ್ಮವರನ್ನೆ ಬಲಿ ಪಡೆಯಲು ಮುಂದಾಗಿದ್ದೇವೆ. ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವುಗಳು ವಾಸ ಮಾಡುವ ಹಾಗೆ ನಮ್ಮ ಪೂರ್ವಜರು ತಮ್ಮ ಪ್ರಾಣ ಒತ್ತೆ ಇಟ್ಟು ನಿಮರ್ಾಣ ಮಾಡಿದ ದೇಶದಲ್ಲಿ ನಾವುಗಳು ಸ್ವೇಚ್ಛಾಚಾರಿಗಳಾಗಿ ವಾಸ ಮಾಡುತ್ತಿದ್ದೆವೆ.
ಯಾವ ದೇಶದ ಇತಿಹಾಸ ಗಟ್ಟಿಯಾಗಿರುತ್ತದೆಯೋ ಆ ದೇಶದ ಭವಿಷ್ಯವು ಅಷ್ಟೆ ಭದ್ರವಾಗುತ್ತದೆ ಎನ್ನುವ ಮಾತನ್ನು ಓದಿದ್ದೆ. ಆದರೆ ಭವಿಷ್ಯದ ವಿಷಯ ಹಾಗಿರಲಿ ಸಧ್ಯ ವರ್ತಮಾನದ ಬುಡವೇ ಅಲ್ಲಾಡುತ್ತಿರುವುದನ್ನು ನೋಡಿದರೆ ಭವಿಷ್ಯದ ಬಗ್ಗೆ ಕನಸು ಕಾಣುವುದು ಕೂಡ ಮೂರ್ಖತನವಾಗಿ ಬಿಡುತ್ತದೆ. ಆಡಳಿತ ಮಾಡಬೇಕಾದವರೇ ಅಡ್ಡ ದಾರಿ ಹೀಡಿಯುದಾದರೆ ಕಾಯಬೇಕಾದವನೇ ಕೊಲ್ಲಲು ಮುಂದಾದ ಅನುಭವವಾಗುವುದಿಲ್ಲವೆ? ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳಲ್ಲಿ ಸ್ವಾತಂತ್ರ್ಯ ಕೂಡ ಒಂದಾಗಿದೆ. ಆದರೆ ಇದು ಇಂದು ಸ್ವೇಚ್ಛಾಚಾರದ ರೂಪ ಪಡೆದುಕೊಂಡಿದೆ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನು ಬಲಿ ಕೊಡಲು ಹೊಂಚು ಹಾಕುತ್ತಿದ್ದಾರೆ. ಹೀಗಾದರೆ ಪ್ರಜಾಪ್ರಭುತ್ವ ಮಣ್ಣು ಪಾಲಾಗುವುದಿಲ್ಲವೇ? ಹೀಗೆ ಮಣ್ಣಲ್ಲಿ ಮಣ್ಣಾಗಲು ಹೋರಟಿರುವ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದಾದರೂ ಹೇಗೆ? ಎನ್ನುವುದು ನಮ್ಮನ್ನು ಕಾಡದೇ ಬಿಡದು.
ಪ್ರಸ್ತುತ ಸನ್ನೇವೇಶವನ್ನೇ ಅವಲೋಕಿಸಿ ನೋಡಿದರೆ, ಕೋವಿಡ್ ಈ ಜಗತ್ತಿನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಭಾರತ ಸೊಂಕಿತ ದೇಶಗಳ ಪಟ್ಟಿಯಲ್ಲಿ ಕೆಳಗಿನ ಸಾಲಿನಲ್ಲಿತ್ತು. ಈಗ ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ಇನ್ನು ಕನರ್ಾಟಕವನ್ನು ಇತರ ರಾಜ್ಯಗಳಿಗೆ ಮಾದರಿ ಎಂದು ಕೊಂಡಾಡಿದ್ದರು. ಆದರೆ ಇಂದು ಅದೇ ಕನರ್ಾಟಕ ಅಕ್ಷರಶಃ ಸಂಕಟದ ದಾರಿಯನ್ನು ಸವೆಸುತ್ತಲಿದೆ. ಇದಕ್ಕೆಲ್ಲ ಕಾರಣ ಏನು? ಏಕೆ ಹೀಗಾಗುತ್ತಿದೆ? ಇದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಏಕೆ? ಎನ್ನುವ ಹತ್ತು ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಹೊರಟರೆ ಎಲ್ಲ ಉತ್ತರಗಳು ನಮ್ಮೆಡೆಗೆ ತಿರುಗಿ ನೋಡುತ್ತವೆ. ಅಂದ ಮೇಲೆ ಇಡೀ ಸಮಸ್ಯೆಯ ರೂವಾರಿಗಳು ಭವ್ಯ ಭಾರತದ ದಿವ್ಯ ಪ್ರಜೆಗಳಾದ ನಾವುಗಳೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಹಕ್ಕುಗಳಿಗಾಗಿ ಬಡಿದಾಡುವ ನಾವುಗಳು ಯಾವತ್ತು ಮಾಡಬೇಕಾದ ಕರ್ತವ್ಯಗಳ ಬಗ್ಗೆ ಆಗಲಿ, ಹೊತ್ತುಕೊಳ್ಳಬೇಕಾದ ಜವಾಬ್ದಾರಿಗಳ ಬಗ್ಗೆ ಆಗಲಿ ಮಾತನಾಡುವುದಿಲ್ಲ. ಮತದಾನ ಮಾಡುವುದು ನಮ್ಮ ಹಕ್ಕಾದರೆ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಯಾವತ್ತಾದರೂ ಮಾಡುತ್ತೀವಾ? ಇಲ್ಲ ಖಂಡಿತ ಇಲ್ಲ. ಎಲ್ಲರದು ಬರೀ ಜಾತಿ, ಧರ್ಮ, ಲಾಭ, ನಷ್ಟಗಳ ಲೆಕ್ಕಾಚಾರದಲ್ಲಿ ಮತದಾನ ಮಾಡಿ ಕೈ ತೊಳೆದುಕೊಂಡು ಬಿಡುತ್ತೇವೆ. ಇನ್ನು ಅಧಿಕಾರ ಪಡೆದುಕೊಳ್ಳುವವರು ನಮ್ಮ ಮೇಲೆ ದಬ್ಬಾಳಿಕೆ ಮಾಡದೆ ಕುಳಿತುಕೋ ಎಂದರೆ ಹೇಗೆ ಸುಮ್ಮನಿರುತ್ತಾರೆ ಹೇಳಿ. ಇಲ್ಲಿ ಮತದಾನ ಮಾಡುವವನಿಗೆ ಇರುವಷ್ಟೆ ಸ್ವಾತಂತ್ರ್ಯ ಮತ ಪಡೆದುಕೊಳ್ಳುವವನಿಗೂ ಇದೆ. ಅಂದ ಮೇಲೆ ಸ್ವಾತಂತ್ರ್ಯವನ್ನು ಸ್ವೇಚ್ಚೇಚಾರವಾಗಿ ಬಳಸುವ ಅಧಿಕಾರವನ್ನು ನಾವೇ ಅವನಿಗೆ ನೀಡಿ ಈಗ ನಾವೇ ಬಾಯಿ ಬಡಿದುಕೊಂಡರೆ ಏನು ಬದಲಾಗುವುದಿಲ್ಲ. ಅದಕ್ಕೆ ಹೇಳಿದ್ದು ನಮ್ಮಂತ ಜನಗಳು ಪ್ರಜಾಪ್ರಭುತ್ವದ ಪಾಠವನ್ನು ಕಲಿಯ ಬೇಕೆಂದರೆ ಕೀಮ್ ಜಾಂಗ್ ಉನ್ನ ನಂತಹ ಸಕರ್ಾರ ಆಡಳಿತಕ್ಕೆ ಬರಬೇಕು. ಆಗ ನಾವು ಮಾಡುತ್ತಿರುವ ತಪ್ಪಿನ ಅರಿವು ನಮಗಾಗುತ್ತದೆ.
ಕನರ್ಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಮಸ್ಯೆಗೆ ಪರಿಹಾರ ಕಾಣದೆ ಕಂಗಾಲಾಗುತ್ತಿರುವ ಸನ್ನೀವೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಲಾಭ ಮಾಡಿಕೊಳ್ಳಲು ಮುಂದಾಗುತ್ತಿರುವ ಮನಸ್ಸುಗಳನ್ನು ನೊಡಿದರೆ ನಿಜಕ್ಕೂ ವಾಕರಿಕೆ ಬರುತ್ತದೆ. "ವೈದ್ಯೋ ನಾರಾಯಣೋ ಹರಿ" ಎಂದು ದೇವರಿಗೆ ಹೋಲಿಕೆಯಾಗುವ ವೈದ್ಯರುಗಳು ರೋಗಿಯ ಜೀವವನ್ನು ಉಳಿಸುವ ಬದಲು ಅವನಿಂದ ಸಿಗುವ ಹಣವನ್ನು ದೋಚಲು ಮುಂದಾಗುತ್ತಿರುವುದು ಕಂಡರೆ ಯಾರ ಮೇಲೆ ಭರವಸೆ ಇಡಬೇಕು? ಎನ್ನುವುದೇ ತಿಳಿಯುತ್ತಿಲ್ಲ. ನಾವು ಮತ ಹಾಕಿ ಆಯ್ಕೆ ಮಾಡಿ ಕಳುಹಿಸಿದ ಜನ ಪ್ರತಿನಿಧಿಗಳು, ಸಕರ್ಾರಗಳು ನಮ್ಮ ಸೇವೆಯ ಹೆಸರಿನಲ್ಲಿ ಹಣ ಮಾಡಲು ಭ್ರಷ್ಟಾಚಾರಕ್ಕೆ ಇಳಿಯುತ್ತಿದ್ದಾರೆ ಎಂದಾಗ ಈ ಪ್ರಜಾಪ್ರಭುತ್ವ ಸಕರ್ಾರ ಇದ್ದರೇನು? ಇರದಿದ್ದರೇನು? ಎನ್ನುವ ಭಾವನೆ ಮುಡುವುದಿಲ್ಲವೆ?.
ಸಕರ್ಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ ಆದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಅರ್ಧದಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿ ಎಂದು ಸಕರ್ಾರ ತಾಕೀತೂ ಮಾಡಿದರು. ಅದರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಖಾಸಗಿ ಆಸ್ಪತ್ರೆಗಳು ಮನ ಬಂದಂತೆ ದುಡ್ಡು ಕೀಳುತ್ತಿದ್ದಾರೆ. ಇದನ್ನು ಕಂಡಾಗ ಪ್ರಜಾಪ್ರಭುತ್ವಕ್ಕಿಂತ ಸವರ್ಾಧೀಕಾರವೇ ವಾಸಿ ಎನ್ನಿಸುವುದಿಲ್ಲವೇ? ಅಲ್ಲಿ ಸವರ್ಾಧಿಕಾರಿ ಹೇಳಿದ್ದೇ ಶಾಸನವಾಗುತ್ತದೆ. ಆದರೆ ಇಲ್ಲಿ ನಾವು ಆರಿಸಿ ಕಳುಹಿಸದವರೆ ನಮಗೆ ಮರಣ ಶಾಸನ ಬರೆಯುತ್ತಾರೆ ಅಂದ ಮೇಲೆ ಪ್ರಜಾಫ್ರಭುತ್ವ ಸಾಗುತ್ತಿರುವ ದಿಕ್ಕಿನ ಕುರಿತು ಅರಿವಾಗುವುದಿಲ್ಲವೇ? ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದ್ಯಾರು? ಎನ್ನುವ ಈ ಪ್ರಶ್ನೆಗೆ ಉತ್ತರ ಪ್ರಜೆಗಳೇ. ತಾವು ಮಾಡಬೇಕಾದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದರೆ, ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ದೇಶಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧ ಎನ್ನುವ ಮಟ್ಟದಲ್ಲಿದ್ದರೆ, ಹಕ್ಕುಗಳನ್ನು ಅನುಭವಿಸುವ ನಾನು ಕರ್ತವ್ಯವನ್ನು ಮಾಡಲೇ ಬೇಕು ಎನ್ನುವುದನ್ನು ತಿಳಿದುಕೊಂಡು ನಡೆದಿದ್ದರೆ ಇಂದು ಈ ಸಮಸ್ಯೆಯನ್ನು ನಾವು ಎದುರಿಸುತ್ತಿರಲಿಲ್ಲ.
ಆದರೆ ಬರೀ ಹಕ್ಕುಗಳನ್ನು ಅನುಭವಿಸಿ ಕರ್ತವ್ಯಗಳನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವವನ್ನು ನೇಣಿಗೇರಿಸಿ ಬದುಕು ಕಟ್ಟಿಕೊಳ್ಳಲು ಹೊರಟಿದ್ದೇವೆ ಎಂದ ಮೇಲೆ ಈ ಸ್ಥಿತಿಯನ್ನು ನಾವು ಅನುಭವಿಸಲೇ ಬೇಕು. ಆಡಳಿತ ಪಕ್ಷಕ್ಕೆ ತನ್ನ ಖುಚರ್ಿ ಉಳಿಸಿಕೊಳ್ಳುವ ಸಮಸ್ಯೆ, ವಿರೋಧ ಪಕ್ಷಕ್ಕೆ ಆಡಳಿತ ಪಕ್ಕವನ್ನು ಕೆಳಗಿಳಿಸುವು ಸಮಸ್ಯೆ, ಮಂತ್ರಿಗಳಿಗೆ ಅಧಿಕಾರ ಚಲಾಯಿಸುವ ಸಮಸ್ಯೆ, ಅಧಿಕಾರಿಗಳಿಗೆ ಇದರ ಲಾಭ ಪಡೆಯುವ ಸಮಸ್ಯೆ, ಜನ ಸಾಮಾನ್ಯನಿಗೆ ಕೊರೊನಾ ಬಂದರೆ ಬದುಕುಳಿಯುವ ಸಮಸ್ಯೆ, ಬರದೇ ಇದ್ದರೆ ಎಲ್ಲವನ್ನು ಹೀಯಾಳಿಸಿ ಮಾತನಾಡುವ ಸಮಸ್ಯೆ. ಹೀಗಿರುವಾಗ ದೇಶ ನಿಮರ್ಾಣ ಮಾಡುವವರ್ಯಾರು? ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ಗಡಿ ಕಾಯುವ ಯೋಧ ಕಾಯುತ್ತಲೇ ಇದ್ದಾನೆ, ಉಳುಮೆ ಮಾಡುವ ರೈತ ಉಳುತ್ತಲೇ ಇದ್ದಾನೆ. ಯೋಧನ ರಕ್ತಕ್ಕಾಗಲಿ, ರೈತನ ಬೆವರಿಗಾಗಲಿ ಇಲ್ಲಿ ಯಾರು ಚಿಂತೆ ಮಾಡುತ್ತಿಲ್ಲ. ಎಲ್ಲರದು ತಮ್ಮ ಹಿತಾಸಕ್ತಿಗಳ ಪಾಲನೆ ಅಷ್ಟೆ. ಎಲ್ಲಿ ಇತಿಹಾಸವನ್ನು ರಕ್ಷಿಸಿಕೊಳ್ಳಲು ಆಗುವುದಿಲ್ಲವೋ ಅಲ್ಲಿ ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಾಗುವುದಿಲ್ಲ. ಇನ್ನೂ ನಮ್ಮ ಜನಗಳು ಬುದ್ಧಿ ಕಲಿಯದೇ ಹೋದರೆ ಶಿಸ್ತಿನ ಜೀವನ, ಶಿಸ್ತು ಬದ್ಧ ಆಡಳಿತ ಕಲಿಸಿಕೊಡುವುದಕ್ಕೆ ಬಂದೂಕಿನ ಆಳ್ವಿಕೆ ಅನಿವಾರ್ಯವಾಗುತ್ತದೆ. ಕಾರಣ ಪ್ರಜಾಪ್ರಭುತ್ವ ಎನ್ನುವುದು ಕೇವಲ ಮತ ಹಾಕಿ ಕುಳಿತು ಕೊಳ್ಳುವುದಲ್ಲ, ಮತ ಪಡೆದು ಉಡಾಫೆಯ ಆಡಳಿತ ಮಾಡುವುದಲ್ಲ, ಮನಸ್ಸಿಗೆ ಬಂದಂತೆ ಬದುಕು ಸಾಗಿಸುವುದು ಅಲ್ಲ, ಅಧಿಕಾರದ ಅಮಲಿನಲ್ಲಿ ಅಡ್ಡದಾರಿ ಹಿಡಿಯುವುದಲ್ಲ, ಬದಲಿಗೆ ದೇಶದ ಒಳಿತಿಗಾಗಿ ಹೆಗಲಿಗೆ ಹೆಗಲು ನೀಡಿ ದುಡಿಯುವುದಾಗಿಯಿದು ಕೇವಲ ಆಡಳಿತಗಾರರ ಜವಾಬ್ದಾರಿಯಲ್ಲ ಬದಲಿಗೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎನ್ನುವುದರ ಅರಿವು ಈಗಲು ಮೂಡದೇ ಇದ್ದರೆ ಮುಂದಾಗುವ ಅನಾಹುತಕ್ಕೆ ನಾವುಗಳೆಲ್ಲ ಮೂಕ ಸಾಕ್ಷಿಗಳಾಗಬೇಕಾಗುತ್ತದ ಅಷ್ಟೆ.
- ಮಂಜುನಾಥ ಎಂ. ಜುನಗೊಂಡ
ಪತ್ರಕರ್ತರು, ವಿಜಯಪುರ