ಬಾಲಮಂದಿರ ಪ್ರೌಢಶಾಲೆಯಲ್ಲಿ “ವಿಶ್ವ ಹೈಡ್ರೋಗ್ರಫಿ ದಿನ” ಆಚರಣೆ

ಬಾಲಮಂದಿರ ಪ್ರೌಢಶಾಲೆಯಲ್ಲಿ “ವಿಶ್ವ ಹೈಡ್ರೋಗ್ರಫಿ ದಿನ” ಆಚರಣೆ “World Hydrography Day” celebrated at Balamandir High School

ಕಾರವಾರ 19: ನೇವಲ್ ಬೇಸ್ ಸಿಬ್ಬಂದಿಗಳಿಂದ ಬಾಲಮಂದಿರ ಪ್ರೌಢಶಾಲೆಯಲ್ಲಿ “ವಿಶ್ವ ಹೈಡ್ರೋಗ್ರಫಿ ದಿನ” ಆಚರಣೆ ಮಾಡಲಾಯಿತು.  

ನೇವಲ್ ಬೇಸ್‌ನ ಲೆಪ್ಟಿನೆಂಟ್ ಕಮಾಂಡರ್ ಶ್ರೀ ಶಾಶ್ವತ ನಾಯಕ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೌಕಾನೆಲೆಯಲ್ಲಿ ಬಳಸಲಾಗುವ ಹೈಡ್ರೋಗ್ರ್ರಫಿ ವ್ಯವಸ್ಥೆ ಮತ್ತು ಅದರ ಪ್ರಯೋಜನದ ಕುರಿತು ಸಚಿತ್ರ ವಿವರಣೆಯ ಮೂಲಕ ಅಧಿವೇಶನ ನಡೆಸಿಕೊಟ್ಟರು.  

“ಹೈಡ್ರೋಗ್ರಫಿ” ಇದು ನಮ್ಮ ಜಾಗತಿಕ ಆರ್ಥಿಕತೆ, ಪರಿಸರ ಸಂರಕ್ಷಣೆ ಮತ್ತು ನಮ್ಮ ದೈನಂದಿನ ಜೀವನದ ಬಹುಭಾಗವನ್ನು ಅವಲಂಬಿಸಿರುವ ಅದೃಶ್ಯ ಅಡಿಪಾಯವಾಗಿದೆ. ಕಡಲ ತೀರಗಳಿಗೆ ಸರಕುಗಳನ್ನು ತಲುಪಿಸುವ ಬೃಹತ್ ಸರಕು ಹಡಗುಗಳಿಗೆ ಮಾರ್ಗದರ್ಶನ ನೀಡುವ ನಿಖರವಾದ ನಾಟಿಕಲ್ ಚಾರ್ಟ್‌ಗಳಿಂದ ಹಿಡಿದು ನಿಖರವಾದ ಮ್ಯಾಪಿಂಗ್ ವರೆಗೆ ಇದು ಕಾರ್ಯನಿರ್ವಹಿಸುತ್ತದೆ.” ಎಂದು ಅವರು ತಿಳಿಸಿದರು. ಇದರ ಜೊತೆಗೆ ನೌಕಾನೆಲೆಯ ಪ್ರಧಾನ ಕಛೇರಿಗಳ ಮತ್ತು ಶಾಖೆಗಳ ಕುರಿತು ಮನವರಿಕೆ ಮಾಡಿಕೊಟ್ಟರು ಮತ್ತು ನೌಕಾನೆಲೆಯಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಮತ್ತು ಶೈಕ್ಷಣಿಕ ಅರ್ಹತೆಯ ಕುರಿತು ಅರಿವು ಮೂಡಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಅಂಜಲಿ ಮಾನೆ ಎಲ್ಲರಿಗೂ ಸ್ವಾಗತ ಕೋರಿದರು ಹಾಗೂ ಕಾರ್ಯಕ್ರಮದ ಮಹತ್ವದ ಕುರಿತು ವಿವರಿಸಿದರು.ನಂತರ ವಿದ್ಯಾರ್ಥಿಗಳಿಗೆ ನೌಕಾನೆಲೆಯಲ್ಲಿ ಬಳಸಲ್ಪಡುವ ಹೈಡ್ರೋಗ್ರಾಪಿ ಉಪಕರಣ ಹಾಗೂ ದೂರದರ್ಶಕ ಉಪಕರಣಗಳ ಪ್ರಾತ್ಯೇಕ್ಷಿಕೆಯನ್ನು ತೋರಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ನೌಕಾನೆಲೆಯ ಸಿಬ್ಬಂದಿಗಳಾದ ಎಸ್‌. ನಾಯ್ಕ,  ಮುಖೇಶ್, ಕೇತಾನ್, ಶ್ರೀ ಸಾಯಿಕಿರಣ ಮೊದಲಾದವರು ಉಪಸ್ಥಿತರಿದ್ದರು. ಬಾಲಂದಿರ ಪ್ರೌಢಶಾಲೆಯ ಶಿಕ್ಷಕಿಯರಾದ  ಕಾಂಚನಾ ಎಸ್‌. ನಾಯ್ಕ,  ರಾಜೇಶ್ವರಿ ಹರಿಕಂತ್ರ, ಸರೀತಾ ಆರ್‌.  ಗೊವೇಕರ, ಅನುರಾಧಾ ಆರ್‌. ಬಾಂದೂಡಕರ,  ಉಷಾ ಎಸ್‌. ರೇವಣಕರ,  ಕೋಮಲ ಎಸ್‌. ಮಾನಕನೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಾಗೂ ಕು. ವಿಜೇತಾ ವಿ. ಹೆರೇ​‍್ಲಕರ ವಂದನಾರ್ಪಣೆ ಮಾಡಿದರು.