“ಮೂಲಂಗಿಯ ಸೊಪ್ಪಿನ ಮುತ್ತು: ಕುರ್ಲಿ ಶಾಲೆಯ ಮಕ್ಕಳು ಅರೋಗ್ಯದ ಹಾದಿಯಲ್ಲಿ” ಸಾವಯವ ಕನಸಿನ ಬೆಳೆ!
“The Pearl of Radish Greens: Kurli School Children on the Path to Health” Organic Dream Crop!
ಮುಂಡಗೋಡ 21 : ತಾಲೂಕಿನ ಕುರ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾವಯವ ಪದ್ಧತಿಯಲ್ಲಿ ವಿವಿಧ ತರಕಾರಿಗಳನ್ನು ಬೆಳೆಸಿ, ಅದನ್ನೇ ಶಾಲೆಯ ಮಕ್ಕಳ ಬಿಸಿಊಟಕ್ಕೆ ಬಳಸಲಾಗುತ್ತಿದೆ. ಇದು ಇತರ ಶಾಲೆಗಳಿಗೆ ಮಾದರಿಯಾಗುವಂತಹ ಉತ್ತಮ ಕಾರ್ಯವಾಗಿದೆ. ಸಾಮಾನ್ಯವಾಗಿ ಹಲವಾರು ಶಾಲೆಗಳಲ್ಲಿ ಬಿಸಿಊಟಕ್ಕೆ ಅಗತ್ಯವಿರುವ ತರಕಾರಿಗಳನ್ನು ಸಂತೆ ಪಟ್ಟಣಗಳಿಂದ ಖರೀದಿಸಿ ಬಳಸಲಾಗುತ್ತಿದೆ. ಇಂತಹ ತರಕಾರಿಗಳಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಹೆಚ್ಚಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಅಲ್ಲದೆ ತರಕಾರಿಗಳ ಗುಣಮಟ್ಟವೂ ಸಮರ್ಕವಾಗಿರುವುದಿಲ್ಲ.ಈ ಸಮಸ್ಯೆಯನ್ನು ಮನಗಂಡ ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಒಗ್ಗೂಡಿ ಶಾಲೆಯ ಆವರಣದಲ್ಲಿ ಲಭ್ಯವಿರುವ ಸಾಕಷ್ಟು ಫಲವತ್ತಾದ ಜಾಗವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಮಕ್ಕಳ ಬಿಡುವಿನ ಸಮಯದಲ್ಲಿ ಶಾಲಾ ಆವರಣದಲ್ಲಿ ಸಾವಯವ ಪದ್ಧತಿಯಲ್ಲಿ ಮೂಲಂಗಿ ಬೆಳೆಸಿ, ಅದರ ಸೊಪ್ಪನ್ನು ಮಕ್ಕಳ ಬಿಸಿಊಟಕ್ಕೆ ಬಳಸಲಾಗುತ್ತಿದೆ. ಇದಷ್ಟೇ ಅಲ್ಲದೆ, ಬೇರೆ ಬೇರೆ ಕಾಲಮಾನದಲ್ಲಿ ಬೀನ್ಸ್, ಬದನೆಕಾಯಿ, ಹರಿವೆ ಸೊಪ್ಪು, ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳನ್ನು ಸಾವಯವವಾಗಿ ಬೆಳೆಸಿ, ಶಾಲೆಯ ಮಕ್ಕಳ ಬಿಸಿಊಟಕ್ಕೆ ಬಳಸಲಾಗುತ್ತಿದೆ.
ಈ ಕುರಿತು ಶಾಲೆಯ ಶಿಕ್ಷಕರು ಮಾತನಾಡಿ, “ಮೂಲಂಗಿ ಹಾಗೂ ಅದರ ಸೊಪ್ಪಿನಿಂದ ಮಕ್ಕಳಿಗೆ ಉತ್ತಮ ಪ್ರಮಾಣದ ವಿಟಮಿನ್ ಅಂಶ ದೊರೆಯುತ್ತದೆ. ಯಾವುದೇ ರಾಸಾಯನಿಕ ಗೊಬ್ಬರ ಅಥವಾ ಕೀಟನಾಶಕಗಳನ್ನು ಬಳಸದೆ, ಶಾಲೆಯಲ್ಲಿಯೇ ತರಕಾರಿ ಬೆಳೆಯುವ ಮೂಲಕ ಪೋಷಕರ ಸಹಕಾರದಿಂದ ಮಕ್ಕಳಿಗೆ ಗುಣಮಟ್ಟದ ಬಿಸಿಊಟ ನೀಡುತ್ತಿದ್ದೇವೆ. ಮಕ್ಕಳ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವುದು ನಮ್ಮ ಮುಖ್ಯ ಉದ್ದೇಶ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲೆಯ ಈ ಪ್ರಯತ್ನವು ಮಕ್ಕಳ ಆರೋಗ್ಯ ರಕ್ಷಣೆಯ ಜೊತೆಗೆ ಸಾವಯವ ಕೃಷಿಯ ಮಹತ್ವವನ್ನು ಅರಿಯುವಂತೆ ಮಾಡುವ ಶ್ಲಾಘನೀಯ ಕಾರ್ಯವಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 