ಮಾಸ್ತಿ ಶಾಲೆಯಲ್ಲಿ “ಸನ್ ರೈಸ್ ಯೋಗ” ಕಾರ್ಯಕ್ರಮ
“Sunrise Yoga” program at Masti School
ಕೊಪ್ಪಳ 19: ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ 2025 ರ ಅಂಗವಾಗಿ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳದ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗವು ವಿವಿಧ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ದಿನಾಂಕ 18 ನೇ ಜೂನ್‌ದಂದು ಮಾಸ್ತಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ “ಸನ್ ರೈಸ್ ಯೋಗ ಹಾಗೂ ಚೈನ್ ಯೋಗ” ಎಂಬ ಶೀರ್ಷಿಕೆಯಡಿ ಶಾಲಾ ಮಕ್ಕಳಿಗೆ ಯೋಗ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಹುಲಗಪ್ಪ ಮಾತನಾಡಿ ಯೋಗವು ಮನಸ್ಸಿಗೆ ಹಿತ ನೀಡುವ ವ್ಯಾಯಾಮವಾಗಿದೆ. ಯೋಗವನ್ನು ಮುಂಜಾನೆಯ ಸಮಯದಲ್ಲಿ ಮಾಡುವುದರಿಂದ ಆರೋಗ್ಯದ ಮೇಲೆ ಉತ್ತಮ ಪರಿಣಾಮವಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿ ರೋಗಮುಕ್ತ ಜೀವನ ಹೊಂದಲು ಪ್ರೇರೇಪಿಸಿದರು. ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗದ ಡಾ. ಆಶಾ. ಎಸ್.ಎ ಮಾತನಾಡಿ ಯೋಗದ ಮಹತ್ವ, ಶರೀರ ಮತ್ತು ಮನಸ್ಸಿನ ಸಮತೋಲನ ಜೊತೆಗೆ ಬೌದ್ಧಿಕ ವಿಕಸನ, ಏಕಾಗ್ರತೆ ಬಗ್ಗೆ ತಿಳಿಸಿಕೊಟ್ಟರು. ಡಾ. ಲಕ್ಷ್ಮಿ ಸಂಗಟಿ ಹಾಗೂ ಡಾ. ವೀರೇಂದ್ರ ಶೆಟಗಾರ ಇವರುಗಳು ಚೈನ್ ಯೋಗ ತರಬೇತಿ ಹಾಗೂ ಧ್ಯಾನವನ್ನು ಹೇಳಿಕೊಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 