“ಕ್ಯಾನ್ಸರಿಗೆ ಅರಿವೇ ಮೊದಲ ಚಿಕಿತ್ಸೆ, ಆತ್ಮವಿಶ್ವಾಸವೇ ಪ್ರತ್ಯಸ್ತ್ರ”-ಡಾ. ಗಡಾದ

 “ಕ್ಯಾನ್ಸರಿಗೆ ಅರಿವೇ ಮೊದಲ ಚಿಕಿತ್ಸೆ,  ಆತ್ಮವಿಶ್ವಾಸವೇ ಪ್ರತ್ಯಸ್ತ್ರ”-ಡಾ. ಗಡಾದ  “Knowledge is the first cure for cancer, confidence is the antidote” - Dr. Gadada

ಲೋಕದರ್ಶನ ವರದಿ 


“ಕ್ಯಾನ್ಸರಿಗೆ ಅರಿವೇ ಮೊದಲ ಚಿಕಿತ್ಸೆ,  ಆತ್ಮವಿಶ್ವಾಸವೇ ಪ್ರತ್ಯಸ್ತ್ರ”-ಡಾ. ಗಡಾದ  

ಗದಗ 4 : ಜಗತ್ತಿನಲ್ಲಿ ಪ್ರತಿ ವರ್ಷ ಎರಡು ಕೋಟಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು 97 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಕ್ಯಾನ್ಸರ್ ನ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಆರಂಭದ ಹಂತದಲ್ಲಿಯೇ ಗುರುತಿಸಿದರೆ ಅಮೂಲ್ಯವಾದ ಜೀವ ಉಳಿಯುತ್ತದೆ ಕ್ಯಾನ್ಸರ್ ಗೆ ಅರಿವೇ ಮೊದಲ ಚಿಕಿತ್ಸೆ ಆತ್ಮವಿಶ್ವಾಸವೇ ಪ್ರತ್ಯಸ್ತ್ರವಾಗಿದೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ ರಾಜೇಂದ್ರ ಎಸ್ ಗಡಾದ ಹೇಳಿದರು.  

          ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎನ್ಸಿಡಿ ವಿಭಾಗ ನಗರ ಆರೋಗ್ಯ ಕೇಂದ್ರ  ಇವುಗಳ ಸಂಯುಕ್ತ ಆಶ್ರಯದಲ್ಲಿ ಗದುಗಿನ ಮುನಿಸಿಪಲ್ ಕಾಲೇಜಿನಲ್ಲಿ ಏರಿ​‍್ಡಸಲಾಗಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮೇಲಿನಂತೆ ಮಾತನಾಡಿದ ಡಾ ಗಡಾದ ಅವರು ಇಂದು ವಿಜ್ಞಾನ ಸಾಕಷ್ಟು ಬೆಳೆದಿದ್ದರೂ ಕ್ಯಾನ್ಸರ್ ಬಂದರೆ ಸಾವು ನಿಶ್ಚಿತ ಎಂಬ ಭಾವನೆ ಜನರಲ್ಲಿ ಬೀರೂರಿ ಬಿಟ್ಟಿದೆ ವಿಶ್ವದ ಎಲ್ಲ ಕಾಯಿಲೆಗಳಲ್ಲಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿಯಾಗಿದ್ದು ತಂಬಾಕು ಸೇವನೆ ಧೂಮಪಾನ ಮಧ್ಯಪಾನದಂತ ದುಶ್ಚಟಗಳಿಂದ ದೂರವಿದ್ದರೆ ಇದನ್ನು ತಡೆಗಟ್ಟಬಹುದಾಗಿದೆ ಆರೋಗ್ಯಕರ ಹವ್ಯಾಸ ಆರೋಗ್ಯಕರ ಜೀವನ ಕ್ರಮದಿಂದ  ಕ್ಯಾನ್ಸರ್ ದಿಂದ ದೂರ ಇರಬಹುದಾಗಿದೆ . ಕ್ಯಾನ್ಸರ್ ಗೆ ಶೇಕಡ 40ರಷ್ಟು ತಂಬಾಕು ಕಾರಣವಾದರೆ ಶೇಕಡ 20ರಷ್ಟು ಒತ್ತಡ ಹಾಗೂ ಚಟುವಟಿಕೆ ರಹಿತ ಬದಲಾದ ಶೈಲಿ ಕಾರಣವಾಗಿದೆ ಎಂದರು.  

          ಸಮಾರಂಭವನ್ನು ಉದ್ಘಾಟಿಸಿದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಶ ಕೊಪ್ಪಳ ಅವರು ಮಾತನಾಡಿ ಕ್ಯಾನ್ಸರ್ ನಲ್ಲಿ ಮುಖ್ಯವಾಗಿ ಬಾಯಿ ಕ್ಯಾನ್ಸರ್ ಗರ್ಭ ಕೊರಳಿನ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ತುಂಬಾ ಅಪಾಯಕಾರಿ ಕ್ಯಾನ್ಸರ್ ಗಳಾಗಿದ್ದು ಅವುಗಳ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಆರಂಭದ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಕ್ಯಾನ್ಸರ್ ರೋಗದ ಮುಂದಿನ ಹಂತಗಳನ್ನ ತಡೆ ಗಢಟಷ ಬಹುದಾಗಿದೆ ಎಂದರು.  


             ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಭೌಡಢ ಎಣಗಢದಢ ಮುಖ್ಯೋಪಾಧ್ಯಾಯರಾದ  ಎಚ್ ಆರ್ ಪಾಟೀಲ್ ಅವರು ಮಾತನಾಡಿ ಆರೋಗ್ಯ ಇಲಾಖೆಯು ಹಮ್ಮಿಕೊಂಡಿರುವ ಜನಜಾಗೃತಿ ಮೂಡಿಸುವ ಇಂಥ ಕಾರ್ಯಕ್ರಮಗಳು ಮಕ್ಕಳಿಗೆ ಸೂಕ್ತ ಆರೋಗ್ಯ ಶಿಕ್ಷಣವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತಢಿಋಫ. ಎಂದರು.   


ಆರಂಭದಲ್ಲಿ ಕುಮಾರಿ ಕೀರ್ತಿ ಮಡಿವಾಳರ್ ಪ್ರಾರ್ಥಿಸಿದರು. ವಿಜ್ಞಾನ ಶಿಕ್ಷಕಿಯರಾದ  ಶೋಭಾ ದೊಡ್ಡವಾಡವರು ಪ್ರಸ್ತಾವಿಕ ನುಡಿಗಳನ್ನು ಆಡಿ ಸರ್ವರನ್ನು ಸ್ವಾಗತಿಸಿದರು. ನಗರ ಆರೋಗ್ಯ ಕೇಂದ್ರದ ಆರೋಗ್ಯ ನೀರೀಕ್ಷೆನಾಧಿಕಾರಿ  ಸಹಜಾನಂದ ಸಾಸ್ವಿಹಳ್ಳಿ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಕ್ಯಾನ್ಸರ್ ಕುರಿತು ಕೇಳಿದ ಹಲವಾರು ಪ್ರಶ್ನೆಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಉತ್ತರಗಳನ್ನು ನೀಡಿದರು ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದರು.