“ನಾನು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಕೆಲಸ ಮಾಡುತ್ತೇನೆ”: ಟ್ರಂಪ್

ವಾಷಿಂಗ್ಟನ್, ಏ.27, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಕೆಲಸವನ್ನು ಮರೆತು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಧ್ಯಮದ ವರದಿಯನ್ನು ಅವರು ತಳ್ಳಿ ಹಾಕಿದ್ದಾರೆ. ಶ್ರೀ ಟ್ರಂಪ್ ಅವರು ಟ್ವೀಟ್ ಮಾಡಿದ ಅವರು. "ನಾನು ಬೆಳಿಗ್ಗೆಯಿಂದ ತಡರಾತ್ರಿಯವರೆಗೆ ಕೆಲಸ ಮಾಡುತ್ತೇನೆ. ವ್ಯಾಪಾರ ಒಪ್ಪಂದ ಮತ್ತು ಮಿಲಿಟರಿ ವ್ಯವಹಾರ ಮೇಲ್ವಿಚಾರಣೆ ನಡೆಸುತ್ತಿದ್ದು ಹಲವಾರು ತಿಂಗಳುಗಳಿಂದ ಶ್ವೇತಭವನವನ್ನು ತೊರೆದಿಲ್ಲ. ನಾನು ದೇಶಕ್ಕೆ ದುಡಿಯುತ್ತಿದ್ದೇನೆ. ನನ್ನ ಬಗ್ಗೆ ಸುಳ್ಳು ವರದಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ. “ನಾನು ಕಠಿಣ ಕೆಲಸಗಾರ ಮತ್ತು ಬಹುಶಃ ನನ್ನ ಮೊದಲ ಮೂರೂವರೆ ವರ್ಷದ ಅವಧಿಯಲ್ಲಿ ಇತಿಹಾಸದ ಇತರ ಅಧ್ಯಕ್ಷರಿಗಿಂತ ಹೆಚ್ಚಿನದನ್ನು ಸಾಧಿಸಿದ್ದೇನೆ. ನಾನು ಸುಳ್ಳು ಸುದ್ದಿಗಳಿಗೆ ಸೊಪ್ಪು ಹಾಕುವುದಿಲ್ಲ" ಎಂದಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಗುರುವಾರ ಈ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಟ್ರಂಪ್ ಅವರು ಮಧ್ಯಾಹ್ನ ಹಲವು ದಿನಗಳಿಂದ ಓವಲ್ ಕಚೇರಿಗೆ ತಡವಾಗಿ ಆಗಮಿಸುತ್ತಿದ್ದಾರೆ. ಅವರು ತಮ್ಮ ಬೆಳಿಗ್ಗೆ ಶ್ವೇತಭವನದ ಮಾಸ್ಟರ್ ಬೆಡ್‌ರೂಮ್ ಅಥವಾ ಖಾಸಗಿ ಕೋಣೆಯಲ್ಲಿ ಕಳೆಯುತ್ತಾರೆ. ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ನಡೆದ ಕೊರೊನೊ ವೈರಸ್ ಟಾಸ್ಕ್ ಫೋರ್ಸ್ ಸಭೆಗೆ ವಿರಳವಾಗಿ ಹಾಜರಾಗಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿತ್ತು.