“ಗ್ಲಾಕೋಮಾ: ಸೈಲೆಂಟ್ ನೋ ಮೋರ್” ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
“Glaucoma: Silent No More” Continuing Medical Education Program
ಲೋಕದರ್ಶನ ವರದಿ
ಬೆಳಗಾವಿ 07: ಕೆಎಹೆಆರ್ ಗೆ ಸೇರಿದ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ನೇತ್ರವಿಜ್ಞಾನ ವಿಭಾಗವು 2026ರ ಫೆಬ್ರವರಿ 7ರಂದು ಬೆಳಗಾವಿಯ ಕೆಎಲ್‌ಇಎಸ್ ಡಾ. ಪ್ರಭಾಕರ ಕೊರೇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ “ಗ್ಲಾಕೋಮಾ ಹಿ ಸೈಲೆಂಟ್ ನೋ ಮೋರ್” ಎಂಬ ವಿಷಯದ ಮೇಲೆ ನಿರಂತರ ವೈದ್ಯಕೀಯ ಶಿಕ್ಷಣ (ಅಒಇ) ಕಾರ್ಯಕ್ರಮವನ್ನು ಆಯೋಜಿಸಿತು.
ಕಾರ್ಯಕ್ರಮವನ್ನು ಕೆಎಹೆಆರ್ನ ಕಾರ್ಯನಿರ್ವಹಣಾ ಕುಲಪತಿ ಡಾ. ಎನ್. ಎಸ್. ಮಹಾಂತಶೆಟ್ಟಿ, ಕೆಎಹೆಆರ್ ರಿಜಿಸ್ಟ್ರಾರ್ ಡಾ. ವಿ. ಎಂ. ಪಟ್ಟನಶೆಟ್ಟಿ, ಕೆಎಲ್‌ಇ ಎಸ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಕರ್ನಲ್ ಡಾ. ದಯಾನಂದ, ಹಾಗೂ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಪವಾರ್ ಅವರು ಗೌರವದಿಂದ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಇತರ ಗಣ್ಯರು ಉಪಸ್ಥಿತರಿದ್ದು, ಆಸ್ಪತ್ರೆ ಅಭಿವೃದ್ಧಿ ನಿರ್ದೇಶಕ ಡಾ. ವಿ. ಡಿ. ಪಾಟೀಲ, ನೇತ್ರವಿಜ್ಞಾನ ವಿಭಾಗದ ಉಪಪ್ರಾಂಶುಪಾಲ ಹಾಗೂ ಮುಖ್ಯಸ್ಥ ಡಾ. ಶಿವಾನಂದ ಬುಬನಾಳೆ, ಕೆಎಲ್‌ಇಎಸ್ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರಿಫ್ ಮಲ್ದಾರ್ ಹಾಗೂ ಕೆಎಂಸಿ ವೀಕ್ಷಕ ಡಾ. ಸಚಿನ್ ಮಹುಳಿ ಭಾಗವಹಿಸಿದ್ದರು.
ಈ ಅಒಇ ಕಾರ್ಯಕ್ರಮವನ್ನು ಕೆಎಹೆಆರ್ನ ಚಾನ್ಸೆಲರ್ ಡಾ. ಪ್ರಭಾಕರ ಕೊರೇ ಅವರ ಆಶ್ರಯದಲ್ಲಿ, ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಸ್. ಸಿ. ಬುಬನಾಳೆ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಆಯೋಜನಾ ಅಧ್ಯಕ್ಷೆಯಾಗಿ ಡಾ. ಸ್ಮಿತಾ ಕೆ. ಎಸ್. ಹಾಗೂ ಆಯೋಜನಾ ಕಾರ್ಯದರ್ಶಿಯಾಗಿ ಡಾ. ಭಾಗ್ಯಜ್ಯೋತಿ ಬಿ. ಕೆ. ಕಾರ್ಯನಿರ್ವಹಿಸಿದ್ದು, ನೇತ್ರವಿಜ್ಞಾನ ವಿಭಾಗದ ಬೋಧಕ ವೃಂದ ಹಾಗೂ ಸಿಬ್ಬಂದಿಯ ಸಂಪೂರ್ಣ ಸಹಕಾರವಿತ್ತು.
ಕಾರ್ಯಕ್ರಮದ ಸಲಹಾ ಸಮಿತಿಯಲ್ಲಿ ಡಾ. ಎ. ಎಲ್. ತೆನಗಿ ಮತ್ತು ಡಾ. ರೇಖಾ ಮುದ್ಹೋಳ್ ಅವರು ಸದಸ್ಯರಾಗಿದ್ದರು.
ಆಯೋಜನಾ ಸಮಿತಿಯಲ್ಲಿ ಡಾ. ಚೇತನ ವರದ್, ಡಾ. ದೀಪಶ್ರೀ ಮುಟಾಲಿಕ್, ಡಾ. ಫರೀನ್ ಮಣಿಯಾರ್, ಡಾ. ರೋಹಿಣಿ ಡಿ. ಕೆ., ಡಾ. ಸಮ್ಯಕ್ತಾ ಶೆಟ್ಟಿ, ಡಾ. ಡೈಸಿ, ಡಾ. ಸಂಜನಾ, ಡಾ. ಅಂಜನಾ ಹಾಗೂ ಡಾ. ಮೌನೇಶ್ ಪಾಟೀಲ್ ಅವರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಮಹತ್ವದ ಕೊಡುಗೆ ನೀಡಿದರು.
ವೈಜ್ಞಾನಿಕ ಅಧಿವೇಶನಗಳಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಕೆಒಎಸ್ನ ಉಪಾಧ್ಯಕ್ಷ ಡಾ. ಕೃಷ್ಣ ಪ್ರಸಾದ್, ಡಾ. ವಿಕ್ರಮ್ ಜೈನ್, ಡಾ. ಕಮಲಾ ಮಹೇಶ್, ಡಾ. ರಿಷಿಕಾ, ಡಾ. ಕಿಟ್ಟೂರು, ಡಾ. ಪ್ರಗ್ಯಾ ಹಾಗೂ ಡಾ. ಜ್ಯೋತ್ಸ್ನಾ ಅವರು ಗ್ಲಾಕೋಮಾದ ಶೀಘ್ರ ನಿರ್ಣಯ ಹಾಗೂ ನಿರ್ವಹಣೆಯಲ್ಲಿನ ಇತ್ತೀಚಿನ ಪ್ರಗತಿಗಳ ಕುರಿತು ಉಪನ್ಯಾಸಗಳನ್ನು ನೀಡಿದರು.
“ಮೌನ ದೃಷ್ಟಿ ಕಳ್ಳ” ಎಂದು ಕರೆಯಲಾಗುವ ಗ್ಲಾಕೋಮಾ, ಮರಳಿ ಸಿಗದ ಕುರುಡುತನಕ್ಕೆ ಪ್ರಮುಖ ಕಾರಣವಾಗಿದ್ದು, ಪ್ರಾರಂಭಿಕ ಹಂತದಲ್ಲಿ ಲಕ್ಷಣರಹಿತವಾಗಿರುತ್ತದೆ. ಮಾರ್ಚ್ 9 ರಿಂದ 15 ರವರೆಗೆ ಆಚರಿಸಲಾಗುವ ವಿಶ್ವ ಗ್ಲಾಕೋಮಾ ವಾರದ ಹಿನ್ನೆಲೆದಲ್ಲಿ, 40 ವರ್ಷಕ್ಕಿಂತ ಮೇಲ್ಪಟ್ಟವರು, ಮಧುಮೇಹ ಹೊಂದಿರುವವರು ಹಾಗೂ ಕುಟುಂಬದಲ್ಲಿ ಗ್ಲಾಕೋಮಾ ಇತಿಹಾಸವಿರುವವರು ನಿಯಮಿತ ಕಣ್ಣು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಜಾಗೃತಿ ಮೂಡಿಸಿದರು.
ಕೆಎಲ್‌ಇಎಸ್ ಡಾ. ಪ್ರಭಾಕರ ಕೊರೇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಗ್ಲಾಕೋಮಾದ ಸಮಗ್ರ ಪರೀಶೀಲನೆ ಮತ್ತು ಚಿಕಿತ್ಸೆಗಾಗಿ ಅತ್ಯಾಧುನಿಕ ನಿರ್ಣಯ ಸೌಲಭ್ಯಗಳು ಹಾಗೂ ತರಬೇತುಗೊಂಡ ತಜ್ಞರನ್ನು ಹೊಂದಿದ್ದು, ರೋಗದ ಶೀಘ್ರ ಪತ್ತೆ ಮತ್ತು ಸೂಕ್ತ ಚಿಕಿತ್ಸೆಗೆ ನೆರವಾಗುತ್ತಿದೆ.
ಕಾರ್ಯಕ್ರಮವು ಗ್ಲಾಕೋಮಾ ಸಂಬಂಧಿತ ಕುರುಡುತನವನ್ನು ತಡೆಯಲು ಶೀಘ್ರ ಪತ್ತೆ ಮತ್ತು ಸಮಯೋಚಿತ ಚಿಕಿತ್ಸೆಯ ಮಹತ್ವವನ್ನು ಪುನರುಚ್ಚರಿಸುವ ಮೂಲಕ ಸಮಾಪ್ತಿಯಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 