“ಸಾಂಸ್ಕೃತಿಕ ಹಾಗೂ ನಾಟಕ ಕಾರ್ಯಕ್ರಮ-2026-27”
“Cultural and Drama Program-2026-27”
ಲೋಕದರ್ಶನ ವರದಿ
ಎಮ್. ಚಂದರಗಿ 31: ದಿನಾಂಕಃ 28-03-2025 ರಂದು ಸಂಜೆ 06 ಗಂಟೆಗೆ ಶ್ರೀ ಸ್ವಾಮಿ ವಿವೇಕಾನಂದ ಯುವ ಸಾಹಿತ್ಯ ಸಾಂಸ್ಕೃತಿಕ ಸಂಘ, ಯರಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಎಮ್. ಚಂದರಗಿ ಗ್ರಾಮದಲ್ಲಿ “ಸಾಂಸ್ಕೃತಿಕ ಹಾಗೂ ನಾಟಕ ಕಾರ್ಯಕ್ರಮ-2026-27” ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಸಪ್ಪ ರಾಮಪ್ಪ ಅಕ್ಕಿಸಾಗರ, ಜಾನಪದ ಕಲಾವಿದರು, ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ ಮೊಶೆಪ್ಪ ವೆಂಕಟಾಪೂರ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ರಮೇಶ ಬಸಪ್ಪ ಕತ್ತಿ, ಸಂತೋಷ ಅವಜಪ್ಪಗೋಳ, ಯಮನವ್ವ ಜೋಕಾನಟ್ಟಿ, ರುದ್ರ್ಪ ಮಾದರ, ಶಾಂತವ್ವ ದ್ಯಾಮಪ್ಪ ನಾಗನ್ನವರ, ಶ್ರೀಕಾಂತ ದುಂಡಯ್ಯಾ ಹಿರೇಮಠ, ಕೆಂಪಣ್ಣಾ ರಾಮಪ್ಪ ಕತ್ತಿ, ಲಕ್ಷ್ಮಣ ರಾಮಪ್ಪ ಅಕ್ಕಿಸಾಗರ ಇವರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ರುದ್ರ್ಪ ಮಾದರ ಇವರು ಮಾತನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರಿಂದ ಹಲವಾರು ಕಲಾವದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಜೀವನಕ್ಕೂ ಒಂದು ದಾರಿಯಾದಂತೆ ಆಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಗ್ಯಾ-ಬಾಳ್ಯಾ ಸಣ್ಣಾಟ ಹಾಗೂ ಭಜನಾ ಪದಗಳು ಜರುಗಿದವು. ಸ್ವಾಗತವನ್ನು ಯಮನವ್ವ ಜೋಕಾನಟ್ಟಿ ಹಾಗೂ ವಂದಣಾರೆ್ಣಯನ್ನು ಸಂತೋಷ ಅವಜಪ್ಪಗೋಳ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 