‘ವಚನ ಸಾಹಿತ್ಯವು ನಾಡಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ’
‘Vachana literature works to correct the country’s problems’
ಹೊಸಪೇಟೆ 19: ವಚನ ಸಾಹಿತ್ಯವು ನಾಡಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ. ಕಳಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಅಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಅನ್ನುವ ಈ ವಚನದ ಸಾಲುಗಳನ್ನು ಅರ್ಥ ಮಾಡಿಕೊಂಡಿದ್ದೆ ಆದರೆ ಈ ಸಮಾಜದಲ್ಲಿ ಕಳತನವಾಗಲಿ, ಕೊಲೆ ಸುಲಿಗೆಗಳಾಗಲಿ ಯಾವುದು ಇರುವುದಿಲ್ಲ. ಪರಸ್ಪರ ಗೌರವ ಕೊಟ್ಟು ತೆಗೆದುಕೊಳ್ಳುವ ಮನಸ್ಥಿತಿ ನಿರ್ಮಾಣ ಮಾಡಿಕೊಳ್ಳುವಲ್ಲಿ, ವ್ಯಕ್ತಿತ್ವವನ್ನು ರೂಪಿಸುವಲ್ಲಿ ವಚನ ಸಾಹಿತ್ಯ ನಮಗೆ ನೈತಿಕ ಮೌಲ್ಯಗಳನ್ನು ಬೋಧಿಸುತ್ತದೆ ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಡಿ ವಿ ಪರಮಶಿವಮೂರ್ತಿ ಅವರು ಕರೆ ನೀಡಿದರು.
ಪ್ರೊ ಡಿ ವಿ ಪರಮಶಿವಮೂರ್ತಿ ಅವರು ಹೊಸಪೇಟೆಯ ಶಂಕರ ಆನಂದ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ, ವಿಜಯನಗರ ಜಿಲ್ಲೆ ಮತ್ತು ಶಂಕರ ಆನಂದ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯ, ಹೊಸಪೇಟೆ ಇವರ ಸಹಯೋಗದೊಂದಿಗೆ ಇಂದು ದಿ. 18ರಂದು ಬೆಳಿಗ್ಗೆ 11.00 ಗಂಟೆಗೆ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಮೃತ್ಯುಂಜಯ ರುಮಾಲೆ ಅವರು ಮಾತನಾಡುತ್ತಾ ಪ.ಗು. ಹಳಕಟ್ಟಿ ಅವರು 12ನೇ ಶತಮಾನದ ವಚನದ ಒಂದು ಸಾಲಿನ ಬೆನ್ನು ಹತ್ತಿ ಇಡೀ ವಚನ ಸಾಹಿತ್ಯವನ್ನು ಸಂಗ್ರಹಿಸಿ ನಮಗೆಲ್ಲ ವಚನ ಸಾಹಿತ್ಯವನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಪ.ಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಹಳಕಟ್ಟಿ ಅವರು ತಮ್ಮ ಬದುಕಿನಲ್ಲಿ ಬಹಳ ಕಷ್ಟಪಟ್ಟು ವಚನ ಸಾಹಿತ್ಯವನ್ನು ನಮಗೆ ಸಂಗ್ರಹಿಸಿಕೊಟ್ಟು ಅವರು ಬದಉತ್ತಂಗಿ ಚನ್ನಪ್ಪನವರಿಗೂ ಸರ್ವಜ್ಞ ಅವರ ಒಂದು ಸಾಲು ಮಾತ್ರ ಸಿಕ್ಕಿತ್ತು. ಆದರೆ ಅವರೂ ಸಹ ಒಂದು ಸಾಲಿನ ಬೆನ್ನು ಹತ್ತಿ ಬೆಂಬಿಡದೇ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡ ಪರಿಣಾಮ ನಮಗೆ ಸರ್ವಜ್ಞ ದೊರಕಿದ್ದಾನೆ.ಪಗು ಹಳಕಟ್ಟಿ ಅವರ ಮೇಲೆ ಮತ್ತು ಉತ್ತಂಗಿ ಚೆನ್ನಪ್ಪ ಅವರ ಮೇಲೆ ವಚನ ಸಾಹಿತ್ಯ ದೊಡ್ಡ ರೀತಿಯ ಪರಿಣಾಮ ಬೀರಿರುವುದರಿಂದ ಅವರು ತಮ್ಮ ವ್ಯಕ್ತಿತ್ವವನ್ನು ಮರುರೂಪಿಸಿಕೊಂಡು ನಮಗೆ ದೊಡ್ಡ ಸಾಹಿತ್ಯ ಭಂಡಾರವನ್ನೇ ಬಿಟ್ಟು ಹೋಗಿದ್ದಾರೆ ಎಂದರು.
ಒಂದೊಂದು ವಚನವು ನಮ್ಮ ನೈತಿಕ ಮೌಲ್ಯ ಹಾಗೂ ಸಾಂಸ್ಕೃತಿಕ ಜಗತ್ತನ್ನು ಮತ್ತು ಪುರಾತನ ಪರಂಪರೆ ಜೊತೆಗೆ ಅರಿವಿನ ಪ್ರಜ್ಞೆಯನ್ನು ಸಾಕಾರಗೊಳಿಸುತ್ತದೆ ಎಂದು ಅತ್ಯಂತ ಭಾವನಾತ್ಮಕವಾಗಿ ಮಾತನಾಡಿದರು. ಹಿರಿಯರನ್ನು ಗೌರವಿಸುವುದು ಎಂದರೆ ಅವರ ಸತ್ತ ಮೇಲೆ ಫೋಟೋಗಳಿಗೆ ಪೂಜಿಸುವುದಲ್ಲ. ಅವರ ಘನತೆಗೆ ದಕ್ಕೆ ಬಾರದಂತೆ ಜೀವನದುದ್ದಕ್ಕೂ ನಾವು ನೈತಿಕ ಮೌಲ್ಯಗಳೊಂದಿಗೆ ಬದುಕುವುದು ಎಂದರು. ಶಂಕರ ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾರಾಯಣ ಜಿ. ಹೆಬಸೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಂಕರ ಆನಂದ್ ಸಿಂಗ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸಿ. ದೇವಣ್ಣ ಅವರು ಕಾರ್ಯಕ್ರಮ ನಿರೂಪಿಸಿದರು.
ಪ್ರಾಧ್ಯಾಪಕರಾದ ಡಾ. ನಾಗಣ್ಣ ಕಿಲಾರಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.ವಿಜಯನಗರ ಜಿಲ್ಲೆಯ ಚಕೋರಿ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕರಾದ ವೆಂಕಟೇಶ್ ಬಡಿಗೇರ್ ಅವರು ವಂದನಾರೆ್ಣ ಮಾಡಿದರು. ಹೊಸಪೇಟೆಯ ರಂಗಕರ್ಮಿಗಳಾದ ಮುದೇನೂರು ಉಮಾಮಹೇಶ್ವರ ಅವರು ಪ್ರಾರ್ಥನೆ ಜಾಗೃತ ಗೀತೆ ಹಾಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಪಾಕು, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಸಾಹಿತ್ಯಾಸಕ್ತರಾದ ಸೋದ ವಿರೂಪಾಕ್ಷಗೌಡ. ಕೆಎಂ ಬಸವರಾಜ್ ಅವರು ಹಾಗೂ ವಿವಿಧ ಲೇಖಕರು, ಕವಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 