‘ಎಸ್. ವ್ಹಿ. ನಾಯ್ಕ ರಾಣೆ ಕೊಂಕಣ-ಮರಾಠ ಸಮಾಜದ ಒಂದು ದೊಡ್ಡ ಶಕ್ತಿ’
ಲೋಕದರ್ಶನ ವರದಿ
ಧಾರವಾಡ 15: ಎಸ್. ವ್ಹಿ. ನಾಯ್ಕ ರಾಣೆ ಬಹುಮುಖ ವ್ಯಕ್ತಿತ್ವದ ಪ್ರತಿಭಾನ್ವಿತ ವ್ಯಕ್ತಿಗಳು. ಅವರು ಕೊಂಕಣ-ಮರಾಠ ಸಮಾಜದ ಒಂದು ದೊಡ್ಡ ಶಕ್ತಿ ಎಂದು ನಿವೃತ್ತ ಉಪನ್ಯಾಸಕರು ಹಾಗೂ ಶಿಕ್ಷಣ ತಜ್ಞರಾದ ಡಾ. ಎಂ. ವೈ. ಸಾವಂತ ತಿಳಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಎಸ್. ವಿ. ನಾಯ್ಕ ರಾಣೆ ಕುಟುಂಬದ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಎಸ್.ವ್ಹಿ. ನಾಯ್ಕ ರಾಣೆ ಸಮಾಜಮುಖಿ ಚಿಂತಕರು ಮಾತ್ರವಲ್ಲ, ಸಮಾಜದ ಉದ್ದಾರಕ್ಕಾಗಿ ಇಡೀ ಬದುಕನ್ನೇ ಸಮರ್ಿಸಿಕೊಂಡವರು. ಎಲ್ಲರನ್ನೂ ಪ್ರೀತಿಸುವ ಉದಾರ ಗುಣದ ಅವರೊಬ್ಬ ತತ್ವ ನಿಷ್ಠ, ಸತ್ಯನಿಷ್ಠ ವ್ಯಕ್ತಿಗಳು. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅವರು ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದವರು ಎಂದು ಹೇಳಿದರು.
ಶಾಸಕರು ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಸಾಧಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಸ್. ವ್ಹಿ. ನಾಯ್ಕ ರಾಣೆ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದು, ಜನ ಸೇವೆ ಮಾಡಿ ಜನ ಮನ್ನಣೆ ಪಡೆದವರಾಗಿದ್ದಾರೆ. ಇಂತಹ ಇಳಿ ವಯಸಿನಲ್ಲಿಯೂ ಸಾಹಿತ್ಯ ಕೃತಿ ರಚಿಸುವ ಹವ್ಯಾಸವುಳ್ಳವರಾಗಿದ್ದಾರೆ. ತಮ್ಮ ನೂರಾರು ಕೃತಿ ಹಾಗೂ ಲೇಖನಗಳ ಮೂಲಕ ಸಮಾಜದ ಬದಲಾವಣೆಗಾಗಿ ಲೇಖನ ಬರೆದು ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಕೊಂಕಣ ಮರಾಠ ಸಮಾಜದ ಅಧ್ಯಕ್ಷ ರವಿ ನಾಯಕ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಸ್. ವಿ. ನಾಯ್ಕ ರಾಣೆ ಅವರ ಕ್ರಿಯಾಶೀಲ ವ್ಯಕ್ತಿತ್ವ, ಹೃದಯ ಶ್ರೀಮಂತಿಕೆಯ ಗುಣ, ಮೃದು ಸ್ವಭಾವ ಅವರದು ಎಲ್ಲರನ್ನೂ ಗೌರವಿಸುವ ಆತ್ಮೀಯತೆಯ ಗುಣದವರಾಗಿದ್ದರು.
ವೇದಿಕೆಯ ಮೇಲಿದ್ದ ಗಣ್ಯರು ಎಸ್.ವ್ಹಿ. ನಾಯ್ಕ ರಾಣೆ ಅವರು ರಚಿಸಿದ ಕಿನ್ನರ ಲೋಕ ನಂ-3 ಲೋಕಾರೆ್ಣ ಮಾಡಿದರು. ವೇದಿಕೆಯಲ್ಲಿದ್ದ ಸನ್ಮಾನಿತರಾದ ಸುರೇಂದ್ರ ಗಾಂವಕರ್, ವಿನೋದ್ ಶಿವಾನಂದ ಸೈಲ ಸನ್ಮಾನಕ್ಕೆ ಪ್ರತಿಕ್ರಿಯಿಸಿದರು.
ದತ್ತಿದಾನಿಗಳಾದ ಎಸ್. ವ್ಹಿ. ನಾಯ್ಕ ರಾಣೆ ದತ್ತಿ ಆಶಯ ಕುರಿತು ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು.
ಕ.ವಿ.ವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಎಸ್ ವಿ ನಾಯಕ ರಾಣೆ 83 ಜನ್ಮದಿನದ ನಿಮಿತ್ತ ಸಮಾಜದ ಮುಖಂಡರು ರಾಣೆ ದಂಪತಿಗಳನ್ನು ಸನ್ಮಾನಿಸಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರ್ವಹಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಬಾವಿಕಟ್ಟಿ ಸನ್ಮಾನ ಪತ್ರ ವಾಚಿಸಿದರು. ಧನವಂತ ಹಾಜವಗೋಳ ವಂದಿಸಿದರು. ಎಸ್. ವ್ಹಿ. ನಾಯ್ಕ ರಾಣೆ ಪರಿವಾರದವರು ಅಭಿಮಾನಗಳು ಕಾರ್ಯಕ್ರಮದಲ್ಲಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 