‘ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ 50ಲಕ್ಷ ರೂ. ಅನುದಾನ’
‘Rs. 50 lakh grant for the construction of Hemaraddi Mallamma Temple’
ಲೋಕದರ್ಶನ ವರದಿ,
ಜಮಖಂಡಿ 30: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 50ಲಕ್ಷ ರೂ. ಅನುದಾನ ನೀಡಲಾಗುವದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಹೊರವಲಯದ ಕುಂಚನೂರ ಆರ್‌ಸಿಯಲ್ಲಿನ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ವೇಮ ವಿಕಾಸ ವೇದಿಕೆಯ ಸಹಯೋದಲ್ಲಿ ನಡೆದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲವಾಗುತ್ತಿದೆ ಅದರ ಹಾಗೆ ದೇವಸ್ಥಾನ ಎಲ್ಲ ಸಮುದಾಯಕ್ಕೂ ಅನುಕೂಲವಾಗಬೇಕು ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರಡ್ಡಿ ಸಮಾಜದವರ ಕೈ ಆಕಾಶದ ಕಡೆಗೆ ಇರವುದಿಲ್ಲ ಬದಲಾಗಿ ಭೂಮಿಯ ಕಡೆಗೆ ಇರುತ್ತವೆ. ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬಂದಿದೆ. ಹೇಮರಡ್ಡಿ ಮಲ್ಲಮ್ಮನವರ ಆದರ್ಶಗಳು ಕೇವಲ ಸಮಾಜಕ್ಕಲ್ಲದೆ ಇಡೀ ವಿಶ್ವದ ಮಹಿಳೆಯರಿಗೆ ಸಿಕ್ಕ ಅನರ್ಘ್ಯ ರತ್ನ. ಅವರು ಸಾತ್ವಿಕ ಗುಣಗಳನ್ನು ಹೊಂದಿದ ಆದರ್ಶ ಮಹಿಳೆ. ಅವರ ಆದರ್ಶಗಳನ್ನು ಎಲ್ಲ ಮಹಿಳೆಯರು ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಶಸಕ ಆನಂದ ನ್ಯಾಮಗೌಡ ಮಾತನಾಡಿ, ಸಮಾಜದಲ್ಲಿ ರೆಡ್ಡಿ ಸಮುದಾಯ ಚಿಕ್ಕದಿದ್ದರು ಶಕ್ತಿಯಲ್ಲಿ ಹೆಚ್ಚಾಗಿದೆ. ಸಮಾಜದ ಬಾಂದವರು ಬೇರೆ ಸಮಾಜದವರಿಗೆ ಸಹಕಾರ ನೀಡುವ ವ್ಯಕ್ತಿತ್ವ ಹೊಂದಿದವರಾಗಿದ್ದಾರೆ ಎಂದರು. ಮಾಜಿ ಶಸಕ ಶ್ರೀಕಾಂತ ಕುಲಕರ್ಣಿ, ರಡ್ಡಿ ಜನಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶೇಖರ ರೆಡ್ಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೇಮರಡ್ಡಿ ಮಲ್ಲಮ್ಮನವರ ಸುಪ್ರಭಾತದ ದ್ವನಿಸುರಳಿ ಹಾಗೂ ತಾಲ್ಲೂಕಿನ ಸಮಾಜ ಬಾಂಧವರ ಜನಗಣತಿ ವರದಿಯನ್ನು ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿ, ಚಿನಗುಂಡಿ ಲಕ್ಕಮ್ಮತಾಯಿ, ವಿಪ ಸದಸ್ಯ ಹನಮಂತ ನಿರಾಣಿ, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಶಿವನಗೌಡ ಪಾಟೀಲ, ರಾಮನಗೌಡ ಚಿಕ್ಕನಗೌಡರ, ಡಾ.ಜಿ.ವಿ. ಉದಪುಡಿ, ಎಲ್.ಆರ್. ಉದಪುಡಿ, ಕೃಷ್ಣಾರೆಡ್ಡಿ, ಕುಮಾರ ಪಾಟೀಲ ಇತರರು ಇದ್ದರು. ಸರಸ್ವತಿ ಸಬರದ ಪ್ರಾರ್ಥಿಸಿದರು, ವೇಮ ವಿಕಾಸ ವೇದಿಕೆಯ ತಾಲ್ಲೂಕಾ ಅಧ್ಯಕ್ಷ ಡಾ.ಆರ್.ಎನ್. ಸೋನವಾಲ್ಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕಲ್ಲೂರ, ಅನಿತಾ ಪಾಟೀಲ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 