ರಾಣೇಬೆನ್ನೂರಿನಲ್ಲಿ ಇಂದು ‘ರಾಜಾ ಗಣಪತಿ’ ಪ್ರತಿಷ್ಠಾಪನೆ
‘Raja Ganapathi’ to be installed in Ranebennur today.
ರಾಣೇಬೆನ್ನೂರಿನಲ್ಲಿ ಇಂದು ‘ರಾಜಾ ಗಣಪತಿ’ ಪ್ರತಿಷ್ಠಾಪನೆ
ರಾಣೇಬೆನ್ನೂರು, ಸೆ.13: ವಾಣಿಜ್ಯ ನಗರ ರಾಣೇಬೆನ್ನೂರಿನ ‘ಸಭ್ಯಾಸಾಚಿ ಸೆಟ್’ನಲ್ಲಿ ‘ವಂದೇ ಮಾತರಂ ಗಣೇಶ’ ಹಾಗೂ ‘ರಾಣೇಬೆನ್ನೂರು ಕಾ ್ಘ್ಣಹ್ಣಹಿ2026' ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆ ಇಂದು ನಡೆಯಲಿದೆ.
ಕಳೆದ 17 ವರ್ಷಗಳಿಂದ ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವ ವಂದೇ ಮಾತರಂ ಸ್ವಯಂಸೇವಾ ಸಂಸ್ಥೆಯು, ಪ್ರಸಕ್ತ ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲು ಮುಂದಾಗಿದೆ. ಉತ್ಸವಕ್ಕಾಗಿ ಖರ್ಚು ಮಾಡುವ ಕೋಟ್ಯಂತರ ರೂಪಾಯಿ ಹಣವನ್ನು ಸಂಕಷ್ಟದಲ್ಲಿರುವ ತಾಲ್ಲೂಕಿನ ರೈತರಿಗೆ ನೆರವು ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಸಂಸ್ಥಾಪಕ ಅಧ್ಯಕ್ಷ ಪ್ರಕಾಶ್ ಬುರುಡಿಕಟ್ಟಿ ಅವರು ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದು, ರೈತರ ಸಂಕಷ್ಟಕ್ಕೆ ವಿಘ್ನೇಶ್ವರ ಸ್ವಾಮಿ ಶೀಘ್ರ ಪರಿಹಾರ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಸೆ.14ರಂದು ಸೋಮವಾರ ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ಮಹಾಗಣಪತಿಯ ದರ್ಶನ, ಪ್ರಸಾದ ವಿತರಣೆ ಸೇರಿದಂತೆ ದೇಹದಾನ, ನೇತ್ರದಾನ ಹಾಗೂ ರಕ್ತದಾನದಂತಹ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ವಿವಿಧ ವಾದ್ಯ ವೈಭವ ಹಾಗೂ ಕಲಾತಂಡಗಳೊಂದಿಗೆ ಗಣೇಶ ವಿಸರ್ಜನಾ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿವಿಧ ವಾದ್ಯ ವೈಭವ ಕಲಾತಂಡಗಳೊಂದಿಗೆ ವಿಸರ್ಜನಾ ಕಾರ್ಯಕ್ರಮವು ಸಹಾ ನಡೆಯಲಿದೆ ಎಂದು ಅವರು ಮಾಧ್ಯಮಕ್ಕೆ ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 