‘ವಿದ್ಯುತ್ ಬೇಡಿಕೆಗಾಗಿ ಪಂಪ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಹಾನಿಯಾಗದಂತೆ ಅನುಷ್ಠಾನ’
‘Implementation of the pumped storage project for electricity demand without harming the environment
*ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆ ಕುರಿತ ಆತಂಕ ಬೇಡ
*ಸಿಂಗಳೀಕ ರಕ್ಷಣೆಗೆ ಕೆನೋಪಿ ಕಲ್ಪಿಸಲು ಅರಣ್ಯ ಇಲಾಖೆಗೆ ಅನುದಾನ ನೀಡುತ್ತೇವೆ: ಮುಖ್ಯ ಎಂಜಿನಿಯರ್ ಶಿಲ್ಪಾ .ಡಿ.
ಕಾರವಾರ 29: ದೇಶದ ವಿದ್ಯುತ್ ಬೇಡಿಕೆ ಪೂರೈಸಲು ಶರಾವತಿ ಪಂಪ್ಸ ಸ್ಟೋರೇಜ್ ಯೋಜನೆ ಜಾರಿ ಮಾಡಲು ದಶಕಗಳ ಹಿಂದೆಯೇ ಸಿದ್ಧತೆ ನಡೆದಿತ್ತು ಎಂದು ಕೆಪಿಸಿಎಲ್ ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್ ಶಿಲ್ಪಾ .ಡಿ. ಹೇಳಿದರು.
ಅವರು ಕಾರವಾರದ ಪತ್ರಿಕಾಭವನದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದರು. ದೇಶದಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಉತ್ಪಾದನೆ ತಗ್ಗಿಸುವ ಯೋಜನೆ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಮುಂದೆ ಇದೆ. ಪವನ ಮತ್ತು ಸೋಲಾರ ವಿದ್ಯುತ್ ಘಟಕಗಳ ಜೊತೆ ಪಂಪ್ ಸ್ಟೋರೇಜ್ ಘಟಕಗಳನ್ನು ದೇಶದ ವಿವಿದೆಡೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಗುಜರಾತ್ ಮಹಾರಾಷ್ಟ್ರ, ತಮಿಳು ನಾಡು, ಪಶ್ಚಿಮ ಬಂಗಾಳದಲ್ಲಿ ಪಂಪ್ ಸ್ಟೋರೇಜ್ ಘಟಕಗಳಿವೆ ಎಂದು ಮುಖ್ಯ ಎಂಜಿನಿಯರ್ ಶಿಲ್ಪಾ ಡಿ. ರಾಜ್ ವಿವರಿಸಿದರು. ಚೀನಾದಲ್ಲಿ ಪಂಪ್ ಸ್ಟೋರೇಜ್ ಘಟಕಗಳಿಂದ 50 ಸಾವಿರ ಮೆಗಾವ್ಯಾಟ್, ಜಪಾನ್ ದಲ್ಲಿ 21 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಭಾರತ ಸದ್ಯ 8000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಪ್ಲಾನ್ ಮಾಡಿದೆ. ಕರ್ನಾಟಕದಲ್ಲಿ ಶರಾವತಿ ಪಂಪ್ಸ ಸ್ಟೋರೇಜ್ ಯೋಜನೆ ಮೊದಲ ಘಟಕವಾಗಿದೆ. ಇಲ್ಲಿಂದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇದೆ. ಈ ಯೋಜನೆಗೆ ಹೊಸ ಜಲಾಶಯ ನಿರ್ಮಾಣ ಬೇಕಾಗಿಲ್ಲ. ಕೆಳ ಹಂತದ ಗೇರುಸೊಪ್ಪ ಜಲಾಶಯ ದಿಂದ ಮೇಲಿನ ತಳಕಳಲೆ ಜಲಾಶಯಕ್ಕೆ ನೀರು ಪಂಪ್ ಮಾಡಿ ನಂತರ ವಿದ್ಯುತ್ ಉತ್ಪಾದಿಸುವುದಾಗಿದೆ. ಇದರಿಂದ ಶರಾವತಿ ನದಿಗೆ ಬಿಡುವ ನೀರಿನ ಪ್ರಮಾಣ ತಗ್ಗು ವುದಿಲ್ಲ. ಪರಿಸರ ಪೂರಕ ಯೋಜನೆಯಾದ ಜಲವಿದ್ಯುತ್ ಘಟಕ ದಿನವೂ 12 ಲಕ್ಷ ಯುನಿಟ್ ಉತ್ಪಾದಿಸಲಿದೆ. ಮುಂದಿನ 60 ವರ್ಷಗಳ ಕಾಲ ಈ ಘಟಕ ಬಳಸಬಹುದು ಎಂದರು.
ಇರುವ ಲೈನ್ ಸಾಮರ್ಥ್ಯ ಹೆಚ್ಚಳ: ಹುಬ್ಬಳ್ಳಿ ಕೆಪಿಟಿಸಿಎಲ್ ಮುಖ್ಯ ಎಂಜಿನಿಯರ್ ಶಿಲ್ಪಾ. ಎಂ. ಅವರು ಮಾತನಾಡಿ ದೇಶದ ಜನರ ವಿದ್ಯುತ್ ಬೇಡಿಕೆಗೆ ತಕ್ಕಂತೆ ಅದನ್ನು ಪೂರೈಸಲು ಶರಾವತಿ ಪಂಪ್ ಸ್ಟೋರೇಜ್ ಘಟಕ ನಿರ್ಮಾಣ ಅವಶ್ಯಕತೆ ಇದೆ. ಈ ಘಟಕದಿಂದ ವಿದ್ಯುತ್ ಉತ್ಪಾದನೆ ನಂತರ ಅದನ್ನು ಈಗಿರುವ ಟ್ರಾನ್ಸಮಿಷನ್ ಲೈನಗಳನ್ನು 200 ಕೆವಿ ಹೈಟೆನ್ಶನ್ ದಿಂದ 400 ಕೆವಿ ಹೈಟೆನ್ಶನ್ ಸಾಮರ್ಥ್ಯದ ಲೈನ್ ಗಳಾಗಿ ಬದಲಿಸಲಾಗುವುದು. ಹಾಗೂ ಇದಕ್ಕೆ ಈಗ ಬಳಸಿರುವ 35 ಮೀಟರ್ ಅಗಲದ ವಿದ್ಯುತ್ ಟ್ರಾನ್ಸಮಿಷನ್ ಮಾರ್ಗ ಸಾಕು ಎಂದರು. ಹೆಚ್ಚುವರಿ ಅರಣ್ಯ ಅಗತ್ಯ ಇಲ್ಲ ವಿವರಿಸಿದರು.
ಯಾವುದೇ ಆತಂಕ ಬೇಡ: ಕೆಪಿಸಿ ಸಿವಿಲ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಮಾತನಾಡಿ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಬಗ್ಗೆ ಪರಿಸರವಾದಿಗಳು, ಸ್ಥಳೀಯರು ಯಾವುದೇ ಆತಂಕ ಪಡುವುದುಬೇಡ.ಶರಾವತಿ ಪಂಪ್ಸ್ ಸ್ಟೋರೇಜ್ ಯೋಜನೆಗಾಗಿ 60 ವರ್ಷ ಹಿಂದೆ ಕಟ್ಟಿಸಿದ ತಳಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳನ್ನೇ ಬಳಕೆ ಮಾಡಲಾಗುತ್ತಿದ್ದು, ಹೊಸ ಜಲಾಶಯ ನಿರ್ಮಾಣ ಮಾಡುತ್ತಿಲ್ಲ. ಹೀಗಾಗಿ ಯಾವುದೇ ಪ್ರದೇಶ ಮುಳುಗಡೆಯಾಗುವುದಿಲ್ಲ ಎಂದರು. ಯೋಜನೆಗೆ 037 ಟಿ.ಎಂ.ಸಿ ನೀರು ಅಗತ್ಯವಿದ್ದು, ಈ ನೀರನ್ನು ಮರುಬಳಕೆ ಮಾಡುವುದರಿಂದ ಅಣೆಕಟ್ಟೆಯ ಕೆಳಭಾಗದ ಜನರಿಗೆ ನೀರಿನ ವಿಚಾರದಲ್ಲಿ ಯಾವುದೇ ಅನಾನುಕೂಲ ಆಗುವುದಿಲ್ಲ. ಅಲ್ಲದೆ, ಇಲ್ಲಿನ ನೀರನ್ನು ಬೇರೆಡೆಗೆ ಕೊಂಡೊಯ್ಯುವುದೂ ಇಲ್ಲ.2000 ಮೆಗಾವ್ಯಾಟ್ ವಿದ್ಯುತ್ ಶೇಖರಣಾ ಯೋಜನೆಯನ್ನು ಕೇವಲ 54.155 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಮತ್ತು 147 .7 ಹೆಕ್ಟೇರ್ ಖಾಸಗಿ ಭೂಮಿಗೆ ಮಿತಿಗೊಳಿಸಿ ನಿರ್ವಹಿಸಲಾಗುತ್ತಿದೆ. ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಠ ಪರಿಣಾಮ ಉಂಟಾಗುತ್ತದೆ. ಎಂದರು. 54.155 ಹೆಕ್ಟೇರ್ ಅರಣ್ಯಭೂಮಿ ಪೈಕಿ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೇರ್ ಭೂಮಿ ಬರುತ್ತದೆ. ಮೇಲ್ಮನಲ್ಲಿ ಕೇವಲ 34.173 ಹೇಕ್ಟೇರ್ ಮಾತ್ರ ಬಳಸಿಕೊಳ್ಳಲಾಗುತ್ತದೆ. ಯೋಜನಾ ವ್ಯಾಪ್ತಿಯಲ್ಲಿ ಬರುವ ಮರಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಅಗತ್ಯವಿರುವಷ್ಟು ಮಾತ್ರ ಮರಗಳನ್ನು ಕಡಿಯಲಾಗುತ್ತದೆ ಎಂದು ತಾಂತ್ರಿಕ ತಜ್ಞ ವಿಜಯ್ ವಿವರಿಸಿದರು.
ಪಂಗ್ಸ್ ಸ್ಟೋರೇಜ್ ಯೋಜನೆಗೆ ಈಗಾಗಲೇ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದೆ. ಈ ಪ್ರಾಧಿಕಾರವು ಅನುಮತಿ ನೀಡುವ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ , ಭೂ ಕಂಪನ ಅಧ್ಯಯನ ವಿಭಾಗ, ಭೂಮಿಯೊಳಗಿನ ರಾಕ್ ಸಂಶೋಧನಾ ಸಂಸ್ಥೆ ಸೇರಿದಂತೆ 12 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿದೆ. ಯೋಜನೆಯಿಂದ ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವವಾಗುವುದಿಲ್ಲ, ಜೀವ ವೈವಿಧ್ಯತೆಗೆ ಸಮಸ್ಯೆಯಾಗುವುದಿಲ್ಲ ಭೂಮಿಯ ಸ್ಥಿರತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬ ಬಗ್ಗೆ ನಿರ್ದೇಶನಾಲಯಗಳು ನೀಡಿದ ಬಳಿಕವೇ ಯೋಜನೆಗೆ ಅನುಮತಿ ನೀಡಿವೆ. ವನ್ಯಜೀವಿ ಇಲಾಖಾಧಿಕಾರಿಗಳು ಪ್ರತ್ಯೇಕವಾಗಿ ಪರೀಶೀಲಿಸಿದ ಬಳಿಕ ಯೋಜನೆಯನ್ನು ವನ್ಯಜೀವಿ ಮಂಡಳಿ ಮುಂದೆ ಮಂಡಿಸಲಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕ ರಾಜ್ಯ ಮನ್ಯಜೀವಿ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ ಎಂದರು.
ಶರಾವತಿ ಅಣೆಕಟ್ಟುಗಳ ಸಿವಿಲ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ,ಉಮಾಪತಿ, ಕೆಪಿಟಿಸಿಎಲ್ ಹುಬ್ಬಳ್ಳಿಯ ಶಿಲ್ಪಾ ಎಂ, ಕೆಪಿಎಲ್‌ನ ಅಧಿಕಾರಿಗಳಾದ ಚಂದ್ರಶೇಖರ, ಪ್ರದೀಪ್, ಗೀರೀಶ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 