ಗುರುಪೂರ್ಣಿಮೆಯ ಅಂಗವಾಗಿ ‘ಗುರುವಂದನ’ ಕಾರ್ಯಕ್ರಮ: ಸಂಗೀತ, ನೃತ್ಯ ಗುರುಗಳಿಗೆ ಸನ್ಮಾನ

ಗುರುಪೂರ್ಣಿಮೆಯ ಅಂಗವಾಗಿ ‘ಗುರುವಂದನ’ ಕಾರ್ಯಕ್ರಮ: ಸಂಗೀತ, ನೃತ್ಯ ಗುರುಗಳಿಗೆ ಸನ್ಮಾನ  ‘Guruvandana’ program on the occasion of Guru Purnima: Felicitation of music and dance gurus

ಬೆಳಗಾವಿ, ಆ.7: ಸಂಸ್ಕಾರ ಭಾರತಿ ಹಾಗೂ ನಿವೇದಾರ​‍್ಣ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್‌, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ‘ಗುರುವಂದನ’ ಕಾರ್ಯಕ್ರಮವನ್ನು ನಿವೇದಾರ​‍್ಣ ಅಕಾಡೆಮಿ ಆವರಣದಲ್ಲಿ ಭಕ್ತಿಭಾವದಿಂದ ಆಚರಿಸಲಾಯಿತು.  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಎಲ್‌.ಎಸ್‌. ಶಾಸ್ತ್ರಿ (ಲಕ್ಷ್ಮೀನಾರಾಯಣ ಶಾಸ್ತ್ರಿ) ಭಾಗವಹಿಸಿದ್ದು, ಸಂಸ್ಕಾರ ಭಾರತಿ ಉಪಾಧ್ಯಕ್ಷ ಅರವಿಂದ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.  

ಈ ಸಂದರ್ಭದಲ್ಲಿ ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗುರುಗಳಾದ ಡಾ. ಪೂಜಾ ನಾಗಲಿಕರ್, ಮೇಘನಾ ಹುಡ್ಡಾರ್, ರಾಜಶ್ರೀ ಗುಮಾಸ್ತೆ ಹಾಗೂ ಕೇದಾರ್ ಪೊತ್ದಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಮುಖ್ಯ ಅತಿಥಿ ಎಲ್‌.ಎಸ್‌. ಶಾಸ್ತ್ರಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದ್ದು, ಗುರು-ಶಿಷ್ಯ ಪರಂಪರೆಯು ಜ್ಞಾನ, ಕಲೆ, ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸುವ ಶ್ರೇಷ್ಠ ಪರಂಪರೆಯಾಗಿದೆ ಎಂದು ಹೇಳಿದರು. ಈ ಪರಂಪರೆಯನ್ನು ಉಳಿಸಿ ಬೆಳೆಸುವುದು ಇಂದಿನ ಸಮಾಜದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.  

ಡಾ. ಪೂಜಾ ನಾಗಲಿಕರ್ ಅವರು ನಟರಾಜ ಪೂಜೆಯ ಮಹತ್ವ ಹಾಗೂ ನಟರಾಜನ ರೂಪ-ಭಂಗಿಗಳು ನೃತ್ಯಕಲೆಯ ವಿವಿಧ ಆಯಾಮಗಳನ್ನು ಹೇಗೆ ಪ್ರತಿನಿಧಿಸುತ್ತವೆ ಎಂಬುದನ್ನು ವಿವರಿಸಿದರು. ನೃತ್ಯ ಪರಂಪರೆಯಲ್ಲಿ ನಟರಾಜನಿಗೆ ಇರುವ ವಿಶೇಷ ಸ್ಥಾನವನ್ನು ಅವರು ತಿಳಿಸಿದರು.  

ಅಧ್ಯಕ್ಷತೆ ವಹಿಸಿದ್ದ ಅರವಿಂದ ಪಾಟೀಲ ಅವರು ಸಂಸ್ಕಾರ ಭಾರತಿಯ ವಿವಿಧ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಇಂದಿನ ಯುವಪೀಳಿಗೆ ನಮ್ಮ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಂಟು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ನಿವೇದಾರ​‍್ಣ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆಟ್ರ್ಸ್ನ ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಮಹತ್ವ ಸಾರುವ ವಿಷಯಾಧಾರಿತ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು. ಗುರುಗಳ ಜ್ಞಾನ, ಮಾರ್ಗದರ್ಶನ ಹಾಗೂ ಸಂಸ್ಕಾರಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  ಕಾರ್ಯಕ್ರಮದ ಕೊನೆಯಲ್ಲಿ ಚಂದ್ರಶೇಖರ ನವಲಗುಂದ ವಂದನಾರೆ​‍್ಣ ಸಲ್ಲಿಸಿದರು.