ಹೊನಕುಪ್ಪಿ ಜಾನಪ ಜಾತ್ರೆ: ರಂಜಿಸಿದ ಕಲಾ ತಂಡಗಳು
‘Folk arts should be preserved and developed’
ಲೋಕದರ್ಶನ ವರದಿ
‘ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕು’
ಮೂಡಲಗಿ 27: ‘ನಾಡಿನ ಸಂಸ್ಕೃತಿಯ ತಾಯಿಬೇರುವಾಗಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಕಲಾವಿದರು ಮತ್ತು ಸಮಾಜದ ಕೈಯಲ್ಲಿದೆ’ ಎಂದು ಚಂದ್ರಮ್ಮಾದೇವಿ ಕೈವಲ್ಯ ಮಠದ ಶರಣಬಸಪ್ಪ ಅಜ್ಜನವರು ಹೇಳಿದರು.
ತಾಲ್ಲೂಕಿನ ಹೊನಕುಪ್ಪಿ ಗ್ರಾಮದ ಚಂದ್ರಮ್ಮದೇವಿ ಕೈವಲ್ಯ ಮಠ ಆವರಣದಲ್ಲಿ ಧಾರವಾಡದ ಇಬ್ರಾಹಿಂ ಸುತಾರ ಸಾಮರಸ್ಯ ಸಾಂಸ್ಕೃತಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜರುಗಿದ ಜಾನಪದ ಜಾತ್ರೆ ಕರ‌್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಗ್ರಾಮೀಣ ಬದುಕಿನ ಉತ್ಸಾಹ ಇಮ್ಮಡಿಸುವ ಅಂತಿಪದ, ಲಾವಣಿ, ಸುಗ್ಗಿ, ಸೋಬಾನ, ಡೊಳ್ಳಿನ ಪದಗಳು ಮೊಬೈಲ್ ಹಾವಳಿಯಲ್ಲಿ ಮರೆಯಾಗುತ್ತಲಿವೆ. ಅವುಗಳನ್ನು ಉಳಿಸುವುದು ಎಲ್ಲ ಜವಾಬ್ದಾರಿಯಾಗಿದೆ ಎಂದರು.
ಜಾನಪದ ಕಲೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕಲಾವಿದ ಇಮಾಮಸಾಬ ವಲ್ಲಪ್ನವರ ಇಬ್ರಾಹಿಂ ಸುತಾರ ಸಾಮರಸ್ಯ ಸಾಂಸ್ಕೃತಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಜಾನಪದ ಕಲೆಗಳ ಪ್ರರ‌್ಶನ ಮೂಲಕ ಉಳಿಸಿ ಬೆಳೆಸುತ್ತಿದ್ದಾರೆ. ಅವರ ಕರ‌್ಯವು ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಹೆಗಡೆ ಮಾತನಾಡಿ ಜಾನಪದ ಕಲಾವಿದರಿಗೆ ರಾ್ಕರವು ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಹೊನಕುಪ್ಪಿ ಗ್ರಾಮದ ಗಣ್ಯರು ಮತ್ತು ಭಕ್ತರು ಅತಿಥಿಯಾಗಿ ಭಾಗವಹಿಸಿದ್ದರು.
10 ಜಾನಪದ ಕಲಾ ತಂಡಗಳು ವೈವಿದ್ಯಮಯವಾದ ನೃತ್ಯ, ಹಾಡು, ಕುಣಿತಗಳ ಮೂಲಕ ಜನರನ್ನು ರಂಜಿಸಿದರು. ಜಾನಪದ ಲೋಕವನ್ನು ಅನಾವರಣಗೊಳಿಸಿದರು. ಜಾನಪದ ಗಾಯಕ ನಿಂಗಪ್ಪ ದೊಡ್ಡ ಪೂಜಾರ ನಿರೂಪಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 