‘ಯುವ ನಾಗರಿಕರಿಗಾಗಿ ಹಣಕಾಸು ಶಿಕ್ಷಣ’ : ವಿದ್ಯಾರ್ಥಿ ಅಭಿವೃದ್ದಿ ಕಾರ್ಯಕ್ರಮ
‘Financial Education for Young Citizens’: Student Development Program
ಗದಗ 23: ನಗರದ ಕೆ.ಎಲ್.ಇ ಸಂಸ್ತೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ‘ಯುವ ನಾಗರಿಕರಿಗಾಗಿ ಹಣಕಾಸು ಶಿಕ್ಷಣ’ ಕುರಿತಾದ ಎರಡು ದಿನಗಳ ವಿದ್ಯಾರ್ಥಿ ಅಭಿವೃದ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀ ರವಿ ಹುಚ್ಚನ್ನವರ ಅವರು ಹಣಕಾಸಿನ ಮಾರುಕಟ್ಟೆ, ಪ್ರಾಥಮಿಕ ಸಾರ್ವಜನಿಕ ಹಂಚಿಕೆ, ಡಿಮ್ಯಾಟ್ ಖಾತೆ ತೆರೆಯುವಿಕೆ, ಕೆ.ವೈ.ಸಿ ಮಾಡುವ ವಿಧಾನ, ಲೈವ್ ಮಾರ್ಕೆಟ್ ಟ್ರೇಡಿಂಗ್ ಬಿ.ಎಸ್.ಇ, ಎನ್.ಎಸ್.ಇ ಸೂಚ್ಯಂಕಗಳು, ಮ್ಯೂಚ್ಯೂವಲ್ ಫಂಡ್, ಶೇರು ಮಾರುಕಟ್ಟೆಯಲ್ಲಿ ಉದ್ಯೋಗವಕಾಶಗಳು ಹಾಗೂ ಹಣಕಾಸಿನ ಮೋಸಗಳ ಬಗ್ಗೆ ಜಾಗೃತೆ ವಹಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ.ಕೆ. ಮಠ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಹರ್ಷ ನಿಲೂಗಲ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶ್ವೇತಾ ರಾಚಯ್ಯನವರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವಾಗೀಶ್ ರೇಶ್ಮೆ ಎಲ್ಲರಿಗೂ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 