‘ದುಬೈ ದೌಲತ್ತು’ ಅನುಭವಿ ಕಥನ: ಗವಿಸಿದ್ಧಪ್ಪ ಕೊಪ್ಪಳ
‘Dubai Doulattu’ is the story of experienced storyteller Gavisiddhappa Koppal
ಕೊಪ್ಪಳ 29: ನಗರದ ಸ್ವಾಮಿ ವಿವೇಕಾನಂದ ಶಾಲೆಯ ಸಭಾಂಗಣದಲ್ಲಿ ಹಿರಿಯ ವಾಣಿಜ್ಯೋದ್ಯಮಿಗಳಾದ ಮಲ್ಲಿಕಾರ್ಜುನ ಬಳ್ಳೊಳ್ಳಿಯವರು ಕವಿ ಮಹೇಶ ಬಳ್ಳಾರಿಯವರ ‘ದುಬೈದೌಲತ್ತು’ ಪ್ರವಾಸೀ ಕಥನವನ್ನು ಲೋಕಾರೆ್ಣ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಗವಿಸಿದ್ಧಪ್ಪ ಕೊಪ್ಪಳ ಕೃತಿಕುರಿತು ಮಾತನಾಡಿಅವರುದುಬೈ ಪ್ರವಾಸಕಥನಅನುಭವೀಕಥನವಾಗಿದೆ.ಕವಿಯೊಬ್ಬಕಂಡ ಅನುಭವಗಳನ್ನು ಚಿತ್ರಿಸಿದ ರೀತಿಓದುಗರ ಗಮನ ಸೆಳೆಯುತ್ತದೆ.ಇದೊಂದು ಮಾರ್ಗದರ್ಶಿ ಕೃತಿಯೂಕೂಡ.ಕವಿಯ ಸೂಕ್ಷ್ಮ ಅವಲೋಕನಗಳನ್ನು ಕೃತಿಯಲ್ಲಿಕಾಣಬಹುದುಎಂದರು.ನಿವೃತ್ತ ಎಲ್.ಐ.ಸಿ.ಆಫೀಸರ್ ವೆಂಕಟೇಶ ಶ್ಯಾನಭಾಗ್ ಮಾತನಾಡಿ ಈ ಕೃತಿಯುದುಬೈ ಹೋಗಬೇಕಾದವರಿಗೆ ಸೂಕ್ತ ತಿಳುವಳಿಕೆ ನೀಡಿದೆ.ಅದ್ಭುತಗಳ ನಾಡುದುಬೈ ಮೀನು ಹಿಡಿಯುವವರದೇಶವಾಗಿತ್ತು.ಇದೀಗ ಇಡೀಜಗತ್ತುತನ್ನಕಡೆ ಸೆಳೆಯುವಂತಹ ನೆಲವಾಗಿದೆ.ದುಬೈ ಐತಿಹ್ಯಗಳೆಲ್ಲ ಈ ಪುಸ್ತಕದಲ್ಲಿಅಡಕವಾಗಿದೆಎಂದರು.
ಇದೇ ಸಂದರ್ಭದಲ್ಲಿ ಮಹೇಶ ಬಳ್ಳಾರಿಯವರ ‘ನಾಡಕವಿತೆ’ ಯೂಟೂಬ್‌ಚಾನೆಲ್‌ನ ‘ಗಾಂಧೀಜಿ ಮತ್ತು ಕೊಪ್ಪಳ’ ವೀಡೀಯೋಕ್ಲಿಪ್ ನ್ನು ಶಿವಮೂರ್ತಿ ಹೊಸಮನಿ, ಆನಂದ ಗೊಂಡಬಾಳ, ಶರಣು ಉಂಕಿ ಉದ್ಘಾಟಿಸಿದರು.ಕೃತಿಯ ಲೇಖಕರ ಮಹೇಶ ಬಳ್ಳಾರಿ ಪ್ರಾಸ್ತಾವಿಕ, ವೀರೇಶ ಕೊಪ್ಪಳ ನಿರ್ವಹಣೆ ನೆರವೇರಿಸಿದರು.ವೇದಿಕೆಯ ಮೇಲೆ ಪ್ರದೀಪ ಸೋಮಲಾಪುರ, ಡಿ.ಎಂ.ಬಡಿಗೇರ, ಡಾ.ಮಹಾಂತೇಶ ಮಲ್ಲನಗೌಡರ, ಗುರುರಾಜ ಹಲಗೇರಿ ಉಪಸ್ಥಿತರಿದ್ದರು.
ವಿಶ್ವನಾಥ ಬಳ್ಳೊಳ್ಳಿ, ಈರಣ್ಣ ಸಂಕ್ಲಾಪುರ, ಈಶ್ವರ ಹತ್ತಿ, ಮಲ್ಲಿಕಾರ್ಜುನ ಪಾಟೀಲ, ಅಮರದೀಪ, ಶಿ.ಕಾ.ಬಡಿಗೇರ, ವೀರಣ್ಣ ನಿಂಗೋಜಿ, ಮಹಾದೇವ ಸತ್ತಿಗೇರಿ, ಅರುಣಾ ನರೇಂದ್ರ, ಅಮರೇಶಅಂಗಡಿ, ಮಹಾಂತೇಶ ನೀಲಗಣಿ, ಶಿವಪ್ರಸಾದ ಹಾದಿಮನಿ ಮೊದಲಾದವರು ಭಾಗವಹಿಸಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 