‘ನಗರಸಭೆ ಸದಸ್ಯರು ತಮ್ಮ ರಾಜೀನಾಮೆ ನಿಲುವನ್ನು ಆತ್ಮಾವಲೋಕನ ಮಾಡಿಕೊಳ್ಳಲಿ’
‘City Council members should introspect on their decision to resign’
ಗದಗ 06, ಪ್ರಸ್ತುತ ಕರ್ನಾಟಕ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು, ಕ್ರೀಯಾಶೀಲ ಮಾಜಿ ಸಚಿವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗದೆ ಇರುವ ಕಾರಣ ತಮ್ಮ ಗದಗ ಬೆಟಗೇರಿ ಅವಳಿ ನಗರದ ನಗರಸಭಾ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿರುವ ನಿಲುವನ್ನು ಆತ್ಮಾವಲೋಕನ ಮಾಡಿಕೊಳ್ಳಲು ಸಾಮಾಜಿಕ ಚಿಂತಕ ವಿಶ್ವನಾಥ ಶೀರಿಯವರು ವಿನಂತಿಸಿದ್ದಾರೆ. ಗದಗ ಜಿಲ್ಲೆಯ ಶಾಸಕರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗದೆ ಇರುವುದು ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ಮತದಾರರಿಗೂ ಬೇಸರ ಉಂಟು ಮಾಡಿದೆ. ಆದರೆ ತಾವು ತಮ್ಮ ನಿರ್ಣಯವನ್ನು ತಾವು ಈ ರೀತಿ ಹೊರ ಹಾಕಿರುವುದು ಚಿಂತನೆಗೆಯಡೆ ಮಾಡಿಕೊಟ್ಟಿದೆ.
ಶ್ರೀಯುತರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಕ್ಕಿದರೆ ಅವರು ಒಂದೇ ಇಲಾಖೆಗೆ ಗಮನ ಹರಿಸುವುವ ಪ್ರಮೇಯಕ್ಕೆ ಒಳಗಾಗುತ್ತಿದ್ದರು. ಜೊತೆಗೆ ವಿಧಾನ ಸಭೆ ಹಾಗೂ ಪರಿಷತ್ ಸದಸ್ಯರ ಬೇಡಿಕೆಗಳನ್ನು ಸಮಯೋಚಿತವಾಗಿ ನಿರ್ಣಯಿಸುವ ಪರಿಸ್ಥಿತಿಗೆ ಒಳಗಾಗುತ್ತಿದ್ದರು ಆದರೆ ಇವರು ರಾಜಕೀಯ ಹಿರಿಮೆ, ರಾಜ್ಯ ಉತ್ತಮ ಮಟ್ಟದ ಅಧಿಕಾರಿಗಳಿಂದ ಹಿಡಿದು ಸ್ಥಳೀಯ ಮಟ್ಟದಲ್ಲಿ ಅಧಿಕಾರ ವರೆಗೂ ಉನ್ನತ ಸಂಬಂಧವನ್ನು ಹೊಂದಿದ್ದಾರೆ. ಜೊತೆಗೆ ಇವರು ಕುಟುಂಬದ ಸಾರ್ವಜನಿಕ ಸೇವೆ, ಪಕ್ಷ ನಿಷ್ಠೆ ಇವರು ಇಂದು ಯಾರ ಬಳಿಯೂ ಹೋದರು.
ಇವರ ವಿಶಿಷ್ಟ ಪೂರ್ಣ ಅಭಿವೃದ್ಧಿ ಪರ ಚಿಂತನೆಗೆ ಮುಖ್ಯಮಂತ್ರಿ ಆದಿಯಾಗಿ ಯಾವ ಸಚಿವರು, ಅಧಿಕಾರ ಇಲ್ಲ ಅಥವಾ ತಳ್ಳಿಹಾಕುವ ಪ್ರಮೇಯವೇ ಇಲ್ಲ. ಇದರ ಒಳ ಅರಿವು ಈಗ ಇವರು ಒಂದೆ ಖಾತೆಯ ಸಾಂವಿಧಾನಿಕ ಸಚಿವರಾಗದೇ ಸರ್ಕಾರದ ಎಲ್ಲ ಇಲಾಖೆಗಳ ಸಚಿವರಂತಾಗಿ ಎಲ್ಲ ಇಲಾಖೆಗಳ ಸಚಿವರಿಂದ ಇಲಾಖೆಯ ಸೇವೆಯನ್ನು ಪಡೆಯಲು ಇನ್ನೂ ಹೆಚ್ಚು ಅವಕಾಶ ಸಿಕ್ಕಂತಾಯಿತು. ಜೊತೆಗೆ ಶ್ರೀಯುತರು ಪ್ರಸ್ತುತ ಹಾಗೂ ಹಿಂದಿನ ಸರ್ಕಾರಗಳಲ್ಲಿ ವಿವಿಧ ಖಾತೆಗಳ ಸಚಿವರಾಗಿ ತಮ್ಮ ವಿಶಿಷ್ಟ ಚಿಂತನೆ ಸೇವೆ ರಾಜ್ಯಕ್ಕೆ ಮಾದರಿಯಾಗಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 