ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

  ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ  Sapling planting program launched on Environment Day

ಲೋಕದರ್ಶನ ವರದಿ 

ಯರಗಟ್ಟಿ  10: ನಮ್ಮ ಸುತ್ತಮುತ್ತಲಿರುವ ಅರಣ್ಯ, ನೈಸರ್ಗಿಕ ಸಂಪತ್ತು, ವನ್ಯಜೀವಿ ಒಟ್ಟಾರೆ ಪರಿಸರವನ್ನು ಕಾಪಾಡುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸವದತ್ತಿ ವಲಯ ಅರಣ್ಯಾಧಿಕಾರಿ ಎಚ್‌.ಶಿವಕುಮಾರ ಹೇಳಿದರು. 

ಸಮೀಪದ ಬೂದಿಗೊಪ್ಪ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ಅರಣ್ಯ ಇಲಾಖೆ ಘಟಫ್ರಭಾ ಅರಣ್ಯ ವಿಭಾಗ ಪ್ರಾದೇಶಿಕ ಅರಣ್ಯವಲಯ ಸವದತ್ತಿ ಇವರು ಹಮ್ಮಿಕೊಂಡಿದ್ದ ಸಸಿ ನೆಡುವ ಮೂಲಕ ವನಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದು,

ನೆಟ್ಟ ಗಿಡಗಳನ್ನು ಪೋಷಿಸುವುದು, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ತ್ಯಾಜ್ಯವನ್ನು ಸಮರ​‍್ಕವಾಗಿ ವಿಲೇವಾರಿ ಮಾಡುವುದು ಅಗತ್ಯವಾಗಿದೆ. ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ವ ಕೊಡುಗೆ ನೀಡಬಹುದು ಎಂದರು. 

ಯರಗಟ್ಟಿ ಅರಣ್ಯ ಪಾಲಕ ರಾಜು ಅಮರಾ​‍್ಯಗೊಳ ಮಾತನಾಡಿ, ಅರಣ್ಯ ಇಲಾಖೆಯಿಂದ ಸಾಕಷ್ಟು ಸಸಿಗಳನ್ನು ನೆಡಿಸುತ್ತೆವೆ ಪರಿಸರ ರಕ್ಷಣೆ ಮಾಡಿದರಷ್ಟೇ ಸಮೃದ್ಧ ಮಳೆ, ಬೆಳೆ ನೀರೀಕ್ಷಿಸಲು ಸಾಧ್ಯ ಎಂದು ಹೇಳಿದರು.  

ಗಸ್ತು ಅರಣ್ಯ ಪಾಲಕ ಅಶೋಕ ವಾಗ್, ಮಹಾಂತೇಶ ಡೊಂಬರ, ಅರ್‌.ಎ.ಪಾಟೀಲ, ಮಹಾಂತೇಶ ಅಂಚಿ, ಅಪ್ಪಾಸಾಹೇಬ ತೇಣಗಿ, ನಾಗರಾಜ ನಾಯ್ಕ, ಮಹಾಂತೇಶ  ಬೆಣ್ಣಿ, ಭಿಮಪ್ಪ ಯರಗಣವಿ, ಪುಂಡಲೀಕ ಮಲಕನಕೊಪ್ಪ, ಬಾಪು ಅಂಚಿ, ಲಕ್ಷ್ಮೀ ಆಲದಕಟ್ಟಿ, ಗೀತಾ ರಾಯಗೊಂಡಗೊಳ, ಫಕ್ಕೀರವ್ವ ಹೊಗರ್ತಿ, ಸುರೇಖಾ ತೇಣಗಿ, ಶಿದ್ಲಿಂಗವ್ವ ತೇಣಗಿ, ವಿಠ್ಠಲ ವಜ್ರಮಟ್ಟಿ, ರಾಜು ಪಾಗದ, ಹನಮಪ್ಪ ಜರಗು ಮತ್ತಿತರಿದ್ದರು.