‘ರಕ್ತದಾನವು ಅಮೂಲ್ಯವಾದ ಜೀವ ಉಳಿಸುವ ಶ್ರೇಷ್ಠ ದಾನವಾಗಿದೆ’

‘ರಕ್ತದಾನವು ಅಮೂಲ್ಯವಾದ ಜೀವ ಉಳಿಸುವ ಶ್ರೇಷ್ಠ ದಾನವಾಗಿದೆ’ ‘Blood donation is a precious life-saving gift’

ಲೋಕದರ್ಶನ ವರದಿ 

ಕೃಷ್ಣಪ್ಪ ಸೋನವಾಲಕರ ಅವರ 82ನೇ ಜನ್ಮ ದಿನಾಚರಣೆ ನಿಮಿತ್ತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ 

ಬೆಳಗಾವಿ 11: 'ರಕ್ತದಾನವು ಅಮೂಲ್ಯವಾದ ಜೀವಗಳನ್ನು ಉಳಿಸುವ ಶ್ರೇಷ್ಠ ದಾನವಾಗಿದೆ' ಎಂದು ಎರೆಹೊಸಹಳ್ಳಿಯ ರಡ್ಡಿ ಗುರುಪೀಠದ ಪೀಠಾಧಿಪತಿ ವೇಮನಾನಂದ ಸ್ವಾಮೀಜಿ ಹೇಳಿದರು. 

ಇಲ್ಲಿಯ ಕೆ.ಎಚ್‌. ಸೋನವಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೆ.ಎಚ್‌. ಸೋನವಾಲಕರ ಪ್ರತಿಷ್ಠಾನ, ರೋಟರಿ ರಕ್ತ ಭಂಡಾರ, ಬೆಳಗಾವಿಯ ಬೀಮ್ಸ್‌, ರೆಡ್‌ಕ್ರಾಸ್ ಹಾಗೂ ವಿವಿಧ ಸಂಘಟನೆಗಳೊಂದಿಗೆ ದಿ. ಕೃಷ್ಣಪ್ಪ ಸೋನವಾಲಕರ ಅವರ 82ನೇ ಜನ್ಮ ದಿನಾಚರಣೆ ಅಂಗವಾಗಿ ಏರಿ​‍್ಡಸಿದ್ದ 10ನೇ ಬೃಹತ್ ಐಚ್ಛಿಕ ರಕ್ತದಾನ ಶಿಬಿರವನ್ನು ಹಾಗೂ ಶಾಲಾ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತಾನು ಕೊಡುವ ದಾನದಲ್ಲಿ ತೃಪ್ತಿಯನ್ನು ಪಡೆದುಕೊಳ್ಳಬೇಕು, ಅಂಥ ತೃಪ್ತಿಯ ಭಾವನೆ ರಕ್ತದಾನದಲ್ಲಿ ಇದೆ ಎಂದರು. 

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಕ್ರೀಡಾ ಕೊಠಡಿ ಉದ್ಘಾಟಿಸಿ ಮಾತನಾಡಿ, ಸೋನವಾಲಕರ ಕುಟುಂಬದವರು ಸರ್ಕಾರಿ ಶಾಲೆಗೆ ಭೂದಾನ ಮಾಡಿ ಶಾಲೆಯನ್ನು ಹೈಟೆಕ್ ಮಾದರಿಯಲ್ಲಿ ಮಾಡಿರುವುದು ಮಾದರಿಯಾಗಿದೆ. ಅವರದು ಶಿಕ್ಷಣಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪೆಕ್ಸ್‌ ಬ್ಯಾಂಕ್ ನಿರ್ದೆಶಕ ರಾಹುಲ ಸತೀಶ ಜಾರಕಿಹೊಳಿ 'ಸರ್ಕಾರಿ ಶಾಲೆಗಳು ಜ್ಞಾನದೇಗುಲವಿದ್ದಂತೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ಸಮಾಜ ಮೆಚ್ಚುವಂತ ಕಾರ್ಯಮಾಡಬೇಕು' ಎಂದರು. 

ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಳಗಾವಿಯ ಜಿಲ್ಲಾ ಶಾಖೆಯ ಅಧ್ಯಕ್ಷ ವಿ.ಡಿ. ಡಾಂಗಿ, ಗೋಕಾಕ ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ ಮಾತನಾಡಿದರು. 

ಟೆಕ್ವಾಂಡೋದಲ್ಲಿ ಅಂತರಾಷ್ಟ್ರೀಯ ಸಾಧನೆ ಮಾಡಿರುವ ಲಕ್ಷ್ಮೀ ರಡರಟ್ಟಿ ಹಾಗೂ ಅತ್ಯುತ್ತಮ ಸಮಾಜ ಸೇವೆ ಮಾಡಿರುವ ಲಯನ್ಸ್‌ ಕ್ಲಬ್ ಮೂಡಲಗಿ ಪರಿವಾರದ ಪರವಾಗಿ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ ತಲಾ 11 ಸಾವಿರ ನಗದು ನೀಡಿ ಪ್ರಶಸ್ತಿ ಪ್ರದಾನ ಮಾಡಿದರು. 

ಡಿಸಿಪಿ ನಾರಾಯಣ ಭರಮಣಿ, ಬೆಳಗಾವಿಯ ಲೇಕವ್ಯೂವ ಆಸ್ಪತ್ರೆಯ ಡಾ. ಗೀರೀಶ ಸೋನವಾಲಕರ, ಡಾ. ಪ್ರಕಾಶ ಸೋನವಾಲಕರ,  ಸಂತೋಷ ಸೋನವಾಲಕರ, ಆರ್‌.ಪಿ. ಸೋನವಾಲಕರ, ವೆಂಕಟೇಶ ಸೋನವಾಲಕರ, ಮಲ್ಲಿಕಾರ್ಜುನ ಕಬ್ಬೂರ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೀತಾರಾಮ ಆರ್‌.ಎಸ್, ತಹಶೀಲ್ದಾರ್ ಶ್ರೀಶೈಲ್ ಗುಡಮೆ, ತಾಲ್ಲೂಕು ಪಂಚಾಯಿತಿ ನಿವೃತ್ತ ಇಒ ಎಫ್‌.ಎಸ್‌. ಚಿನ್ನನವರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ, ಟಿಎಚ್‌ಒ ಡಾ. ಮುತ್ತಣ್ಣ ಕೊಪ್ಪದ, ಡಾ. ಸೂರಣ್ಣವರ, ಎಂಇಎಸ್ ಕಾಲೇಜು ಆಡಳಿತಾಧಿಕಾರಿ ಎಸ್‌.ಎಲ್‌. ಚಿತ್ರಗಾರ, ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಮಹೇಶ ಕಂಬಾರ, ಲಕ್ಷ್ಮಣ ಅಡಿಹುಡಿ, ಕೃಷ್ಣಾ ಗಿರೆಣ್ಣವರ ಅತಿಥಿಯಾಗಿದ್ದರು. 

ಶಿಬಿರದಲ್ಲಿ 198 ಜನ ರಕ್ತದಾನವನ್ನು ಮಾಡಿದರು.  ಮುಖ್ಯ ಶಿಕ್ಷಕ ಭೀಮಪ್ಪ ಕಸಾಳೆ ಸ್ವಾಗತಿಸಿದರು,  ಬಸವರಾಜ ಕೆ ನಿರೂಪಿಸಿದರು, ಶಿವಬಸು ಶೆಟ್ಟರ ವಂದಿಸಿದರು. 




Belgavi