ಧಾರವಾಡ 19: ಅಕ್ಕನ ಬಳಗದ ವತಿಯಿಂದ ಗಾಂಧೀಜಿಯವರ 150ನೇ ಜಯಂತ್ಯುತ್ಸವದ ಆಚರಣೆಯ ಅಂಗವಾಗಿ ಮೀನಾಕ್ಷಿ ಕೋಟೂರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಗಾಂಧಿ ಪರಿಕಲ್ಪನೆಯ ಮಹಿಳಾ ವಿಮೋಚನೆ ಕುರಿತ ಭಾಷಣ ಸ್ಪಧರ್ೆಯನ್ನು ಧಾರವಾಡದ ಎಲ್ಲ ಮಹಿಳಾ ಮಂಡಳಗಳಿಗೆ ದಿ. 18ರಂದು ಹಮ್ಮಿಕೊಳ್ಳಲಾಗಿತ್ತು.
ಸುಮಾರು 10 ಮಹಿಳಾ ಮಂಡಳಗಳ 12 ಸದಸ್ಯನಿಯರು ಭಾಗವಹಿಸಿ ಸ್ಪಧರ್ೆಗೆ ವಿಶೇಷ ಮೆರಗನ್ನಿತ್ತರು.
ನಿಣರ್ಾಯಕರಾಗಿ ಕನರ್ಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಶಿವಾನಂದ ಶೆಟ್ಟರ ಹಾಗೂ ಸುಮಂಗಲಾ ಶೆಟ್ಟರ ಅವರು ಆಗಮಿಸಿ ಮಾತನಾಡಿ ಗಾಂಧೀಜಿಯವರು ಸ್ತ್ರೀ ಎಲ್ಲಿ ಪೂಜಿಸಲ್ಪಡುವಳೋ ಅಲ್ಲಿ ಉಚ್ಛ ಮಟ್ಟದ ನಾಗರಿಕತೆ ಇರುತ್ತದೆ ಎನ್ನುವ ಅಭಿಪ್ರಾಯವಿತ್ತು. ಸ್ತ್ರೀಯನ್ನು ಅಭಲೆ ಎನ್ನುವುದು ಅಪಮಾನಕರ ಸಂಗತಿ, ಅದು ಮಹಿಳೆಗೆ ಪುರುಷ ಎಸಗಿದ ಅನ್ಯಾಯ. ಪುರುಷನ ಎಲ್ಲ ಆದರ್ಶಗಳ ಕೇಂದ್ರ ಬಿಂದು ಮಹಿಳೇನೆ ಆಗಬೇಕು. ಸಂಪ್ರದಾಯದ ಸಮೃದ್ಧತೆಯಲ್ಲಿ ಈಜಬೇಕು ಹೊರತು ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಲ್ಲಿಯವರೆಗೆ ಸ್ತ್ರೀ ಶಿಕ್ಷಣ ಸಿಗುವುದಿಲ್ಲವೋ ಅಲ್ಲಿಯವರೆಗೆ ಭಾರತದ ಆಥರ್ಿಕ, ಸಾಮಾಜಿಕ ಉನ್ನತಿಯಾಗುವುದಿಲ್ಲ. ಗಾಂಧೀಜಿ ಒಬ್ಬ ವಿಮೋಚನೆಯ ಅಪರೂಪದ ಹರಿಕಾರ. ಸ್ತ್ರೀಗಿರುವ ಇನ್ನೊಂದು ಬಲ ನೈತಿಕತೆ, ಇದರಲ್ಲಿ ಅವಳು ಪುರುಷರಿಗಿಂತ ಮೇಲು ಹಾಗೂ ಪ್ರಬಲಳು ಎಂದು ಅಭಿಪ್ರಾಯ ಪಟ್ಟರು. ಪ್ರಥಮ ಬಹುಮಾನರೇಖಾ ಜೋಶಿ, ದ್ವಿತಿಯ ಬಹುಮಾನ ಗೌರಿಕೋರಿಶೆಟ್ಟರ, ತೃತೀಯ ಬಹುಮಾನ ಮಂಜುಳಾ ರಾಮಡಗಿ, ಸಮಾಧಾನಕರ- ವಿನುತಾ ಹಂಚಿನಮನಿ, ರಾಜಶ್ರೀ ರಾವ್.
ಅಕ್ಕನ ಬಳಗದ ಸದಸ್ಯನಿಯರು, ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.