ಲೋಕದರ್ಶನ ವರದಿ
ವಿಜಯಪುರ 20: ಇದೇ ಏಪ್ರಿಲ್ 23 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲೋಕಸಭ ಚುನಾವಣೆ ಅಂಗವಾಗಿ ಪ್ರತಿಯೋಬ್ಬರು ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಯುವಸಮೂಹದ ಜಾಥಕ್ಕೆ ಇಂದು ಐತಿಹಾಸಿಕ ಸ್ಮಾರಕ ಗೋಳಗುಮ್ಮದ ಆವರಣದಿಂದ ಇಂದು ಚಾಲನೆ ನೀಡಲಾಯಿತು.
ನಗರದ ಮೆಟ್ರಿಕ್ ನಂತರದ ಬಾಲಕಿಯರು ಹಾಗೂ ವೃತ್ತಿಪರ ಬಾಲಕಿಯರ ವಸತಿನಿಲಯಗಳ ವಿದ್ಯಾಥರ್ಿನಿಯರು, ಐತಿಹಾಸಿಕ ಸ್ಮಾರಕ ಗೋಳಗುಮ್ಮಟ ಆವರಣದಲ್ಲಿ ಜನರಿಗೆ ಮತದಾನದ ಜಾಗೃತಿ ಮೂಡಿಸುವ ಕರಪತ್ರವನ್ನು ಹಂಚುವ ಜೊತೆಗೆ ಗೋಳಗುಮ್ಮಟದ ಮಾರ್ಗವಾಗಿ ಡಾ.ಬಿ,ಆರ್ ಅಂಬೇಡ್ಕರ್ ವೃತ್ತ, ಜಗಜ್ಯೋತಿ ಬಸವೇಶ್ವರ ವೃತ್ತ ಗಾಂಧಿ ವೃತ್ತಗಳವರೆಗೆ ಜಾಥ ಮೂಲಕ ಜಾಗೃತಿ ಮೂಡಿಸಿದರು.
ಇಂದು ಬೆಳಗ್ಗೆ ಗೋಳಗುಮ್ಮಟ ಅವರಣದಲ್ಲಿ ಮತದಾನ ಜಾಗೃತಿಯ ಈ ಜಾಥಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಶ್ರೀ ಸಿ.ಬಿ ಕುಂಬಾರ್, ಜಿಲ್ಲಾ ಸಮಾಜಕಲ್ಯಣ ಇಲಾಖೆಯ ಉಪನಿರ್ದೇಶಕಿ ಶ್ರೀ ಮಹೇಶ್ ಪೋತದಾರ್ ಅವರು ಹಸಿರು ನಿಷಾನೆ ತೋರಿಸವ ಮೂಲಕ ಜಾಲನೆ ನೀಡಿದರು. ಜಾಥದಲ್ಲಿ ವಿದ್ಯಾಥರ್ಿನಿಯರು ಉತ್ಸಹದಿಂದ ಭಾಗವಹಿಸಿ ತಪ್ಪದೇ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಜಾಥದಲ್ಲಿ ವಾರ್ತಾ ಮತ್ತು ಸರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಸುಲೀಮಾನ್ ನದಾಫ್ ಎನ್.ಎಸ್.ಭೂಸ್ಗುಂಡ್ ಸೇರಿದಂತೆ ವಸತಿ ನಿಲಯಗಳ ವಾರ್ಡನ್ಗಳು ಭಾಗವಹಿಸಿದ್ದರು.