ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿರುವ ವಿಧವೆಯರಿಗೆ ಸರಕಾರದ ವಿವಿಧ ಯೋಜನೆಗಳಡಿ ಲಭ್ಯವಿರುವ ಸೇವೆಗಳು, ಉಂಟಾಗುತ್ತಿರುವ ಅಡೆ-ತಡೆಗಳು ಹಾಗೂ ಅವರಿಗೆ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಮತ್ತು ಸುಪ್ರೀಂಕೋಟರ್್ ನಿದರ್ೇಶನದ ಅನ್ವಯ ಜಿಲ್ಲಾ ವಿಧೆವಯರ ತಜ್ಞರ ಸಮಿತಿ ರಚಿಸಲಾಗಿದ್ದು, ಈ ಸಮಿತಿ ವತಿಯಿಂದ ಜಿಲ್ಲೆಯಾದ್ಯಂತ ವಿಧವೆಯರ ಸಮೀಕ್ಷೆಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ತಜ್ಞರ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಬಿ.ಹಂದ್ರಾಳ್ ಅವರು ಹೇಳಿದರು,
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಲೋಕ್ ಅದಾಲತ್ ಹಾಲ್ನಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಧವೆಯರ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಮೀಕ್ಷೆ ಮೂಲಕ ಜಿಲ್ಲೆಯಲ್ಲಿರುವ ವಿಧವೆಯರ ಅಂಕಿ-ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ ಮತ್ತು ಅವರ ಸಮಸ್ಯೆಗಳು ಅರಿಯಲು ಸಾಧ್ಯವಾಗಲಿದ್ದು, ಅವರ ಕಲ್ಯಾಣಕ್ಕೆ ಹಾಕಿಕೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ವಿಧವೆಯರಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ದೊರಕಬೇಕು ಮತ್ತು ಅವರು ತಮ್ಮ ಸೌಲಭ್ಯಗಳಿಗಾಗಿ ಅಲೆದಾಡಬಾರದು ಎಂಬ ಸದುದ್ದೇಶದಿಂದ ಈ ಸಮಿತಿ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು.
ಈಗಾಗಲೇ ಜಿಲ್ಲೆಯಲ್ಲಿ 55650 ವಿಧವೆಯರಿದ್ದು, ಸರಕಾರದಿಂದ ಮಾಸಾಶನ ಪಡೆಯುತ್ತಿದ್ದಾರೆ ಎಂದು ಸಭೆಗೆ ವಿವರಿಸಿದ ನ್ಯಾ.ಹಂದ್ರಾಳ್ ಅವರು, ವಿಧವೆಯರಿಗೆ ವಸತಿ ಆಯ್ಕೆಯಲ್ಲಿ ಪ್ರಾತಿನಿಧ್ಯ, ಅಂಗನವಾಡಿ ಕಾರ್ಯಕತರ್ೆಯರು,ಸಹಾಯಕಿಯರು ಆಯ್ಕೆಯಲ್ಲಿ ಪ್ರಾತಿನಿಧ್ಯ, ವಿಧವಾ ವೇತನ, ಮರುವಿವಾಹ ಪ್ರೋತ್ಸಾಹಧನ, ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಲ-ಸೌಲಭ್ಯ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಸರಕಾರಗಳು ಈಗಾಗಲೇ ಕಲ್ಪಿಸಲಾಗುತ್ತಿದೆ. ಅವುಗಳ ಕುರಿತು ಅರಿವು ಬಹುತೇಕ ವಿಧವೆಯರಿಗೆ ಇಲ್ಲ. ಈ ಕುರಿತು ಅರಿವು ಮೂಡಿಸುವುದರ ಜತೆಗೆ ಇದಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಾದರೂ ನಮ್ಮ ಸಮಿತಿ ಸ್ಪಂದಿಸಲಿದೆ ಎಂದರು.
ಜಿಲ್ಲಾ ವಿಧವೆಯರ ತಜ್ಞರ ಸಮಿತಿಯು ವಿಧವೆಯರ ಸಮಸ್ಯೆಗಳು ಮತ್ತು ಅವರ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುಪ್ರೀಂ ತೀಪರ್ಿನ ಅನ್ವಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾದ ಮೇಲ್ವಿಚಾರಣಾ ಸಮಿತಿಗೆ ವರದಿ ಸಲ್ಲಿಸಲಾಗುವುದು. ಅವರು ಎರಡು ತಿಂಗಳಿಗೊಮ್ಮೆ ನಡೆಸಲಾಗುವ ಸಭೆಯಲ್ಲಿ ತೀಮರ್ಾನಗಳನ್ನು ಕೈಗೊಳ್ಳಲಿದ್ದಾರೆ ಎಂದರು.ವಿಧವೆಯರ ಅನುಕೂಲಕ್ಕಾಗಿ ಹೆಲ್ಪ್ಡೆಸ್ಕ್ ಸ್ಥಾಪಿಸಲಾಗುವುದು ಮತ್ತು ಅವರ ಸಹಾಯಕ್ಕಾಗಿ ಸಹಾಯವಾಣಿ(ಟೋಲ್ ಫ್ರೀ) ಆರಂಭಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಸುಪ್ರೀಂ ನಿದರ್ೇಶನದ ಅನ್ವಯ ಈ ತಜ್ಞರ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದಶರ್ಿಗಳು ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕರು ಸದಸ್ಯ ಕಾರ್ಯದಶರ್ಿಗಳಾಗಿರುತ್ತಾರೆ. ಸಹಾಯಕ ಆಯುಕ್ತರು, ಡಿವೈಎಸ್ಪಿ, ಸಮಾಜಕಲ್ಯಾಣ ಇಲಾಖೆ ಉಪನಿದರ್ೇಶಕರು, ಮುಖ್ಯ ಉಪ ವೈದ್ಯಾಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೇಶಕ ನಾಗೇಶ ಬಿಲ್ವಾ ಅವರು ಸುಪ್ರೀಂಕೋಟರ್್ ನಿದರ್ೇಶನ ಮತ್ತು ಜಿಲ್ಲಾ ವಿಧವೆಯರ ತಜ್ಞರ ಸಮಿತಿ ಕಾರ್ಯವೈಖರಿ ಕುರಿತು ಸಭೆಗೆ ವಿವರಿಸಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.