ಬೆಂಗಳೂರು 10: ಇರುವ ಗೊಂದಲಗಳ ನಡುವೆ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ತಮ್ಮವರನ್ನು ಕೂರಿಸಿ, ಸಮ್ಮಿಶ್ರ ಸಕರ್ಾರದಲ್ಲಿ ಇನ್ನಷ್ಟು ಗೊಂದಲ ತಂದುಕೊಳ್ಳುವುದು ಬೇಡ. ಮುಂದೆ ಅವಕಾಶ ಬಂದಾಗ ನೋಡಿಕೊಳ್ಳೋಣ ಎನ್ನುವ ತೀಮರ್ಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಅವರನ್ನು ವಿಧಾನ ಪರಿಷತ್ ಸಭಾಪತಿ ಮಾಡುವ ಇಂಗಿತ ಕಾಂಗ್ರೆಸ್ನದ್ದಾಗಿತ್ತು. ಪರಿಷತ್ನಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾರಣ ಈ ಆಸೆ ಸಹಜ. ಅದಾಗಲೇ ಸಿಎಂ ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಇದೀಗ ಹಂಗಾಮಿ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರನ್ನೇ ಸಭಾಪತಿಯಾಗಿಸಿದರೆ ಜೆಡಿಎಸ್ ಬಲವಾಗುತ್ತಾ ಹೋಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಾಗಿದೆ. ಈಗ ಮಿತ್ರ ಪಕ್ಷಕ್ಕೆ ಪರಿಷತ್ ಸಭಾಪತಿ ಸ್ಥಾನ ಕೂಡ ಬಿಟ್ಟುಕೊಟ್ಟರೆ ತಮಗೆ ದೊಡ್ಡ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ನಿನ್ನೆ ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸಭಾಪತಿ ಸ್ಥಾನ ಆಕಾಂಕ್ಷಿ ಎಸ್.ಆರ್. ಪಾಟೀಲ್ ಭೇಟಿ ಮಾಡಿದ್ದರು. ಸದ್ಯ ಇರುವ ಸ್ಥಿತಿಯಲ್ಲಿ ಬಲವಂತವಾಗಿ ನಿಮ್ಮನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದರೆ ಬೇರೆ ರೀತಿಯ ಸಂದೇಶ ರವಾನೆಯಾಗಲಿದೆ. ಮಿತ್ರಪಕ್ಷದಲ್ಲಿ ಒಡಕು ತಂದಿದ್ದೇವೆ ಎನ್ನುವ ಹಣೆಪಟ್ಟಿ ಹೊರಬೇಕಾಗುತ್ತದೆ. ಅವಸರ ಮಾಡಿಕೊಳ್ಳುವುದು ಬೇಡ. ಈ ಅಧಿವೇಶನದಲ್ಲಿ ಚುನಾವಣೆ ಬೇಡ. ಹಂಗಾಮಿ ಸಭಾಪತಿಗಳೇ ಮುಂದುವರಿಯಲಿ. ಮುಂದಿನ ಅಧಿವೇಶನದಲ್ಲಿ ಚುನಾವಣೆ ವಿಚಾರ ಮಾತನಾಡೋಣ. ಲೋಕಸಭೆ ಚುನಾವಣೆ ಹೊತ್ತಿಗೆ ಆ ಪೀಠದಲ್ಲಿ ನಮ್ಮವರು ಇದ್ದರಾಯಿತು ಎಂದು ಸಮಾಧಾನಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಬೇಸರದಿಂದಲೇ ಪಾಟೀಲರು ಒಪ್ಪಿದ್ದಾರೆ ಎನ್ನಲಾಗಿದ್ದು, ಜು. 12ಕ್ಕೆ ಬಜೆಟ್ ಅಧಿವೇಶನ ಮುಗಿಯಲಿದೆ. ನವೆಂಬರ್ನಲ್ಲಿ ಮತ್ತೆ ಅಧಿವೇಶನ ಬರಲಿದೆ. ಆಗ ಪ್ರಯತ್ನ ಮಾಡಿದರಾಯಿತು ಎಂಬ ಸಮಜಾಯಿಷಿಗೆ ಒಪ್ಪಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ಸಭಾಪತಿ ಹುದ್ದೆ ಬದಲಾವಣೆ ಸದ್ಯ ಬೇಡ. ಇರುವ ಸ್ಥಿತಿಯೇ ಮುಂದುವರಿಯಲಿ ಎನ್ನುವ ಮಾಹಿತಿ ಕಾಂಗ್ರೆಸ್ ಹೈಕಮಾಂಡ್ನಿಂದ ಬಂದಿದೆ ಎನ್ನಲಾಗಿದೆ.
ಇನ್ನೊಂದೆಡೆ ಹಂಗಾಮಿ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿಯವರೇ ಒಂದೊಮ್ಮೆ ಅಧಿಕೃತ ಸಭಾಪತಿಯಾಗಿ ಘೋಷಿತರಾದರೆ ಸಕರ್ಾರ ಕೂಡ ಸ್ಥಿರವಾಗಲಿದೆ. ಇದರಿಂದ ಹೊರಟ್ಟಿ ಅವರನ್ನೇ ಮುಂದುವರಿಸಲು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತೀಮರ್ಾನಿಸಿದ್ದಾರೆ ಎನ್ನಲಾಗಿದೆ. ಇವರೊಬ್ಬರನ್ನು ಬದಲಿಸಲು ಮುಂದಾದರೆ ಸಕರ್ಾರದಲ್ಲಿ ಅಸಮಾಧಾನ ಹೆಚ್ಚಾಗಲಿದೆ. ಇದರಿಂದ ಹೊರಟ್ಟಿ ಮುಂದುವರಿಸುವ ತೀಮರ್ಾನ ಕೈಗೊಂಡಿದ್ದಾರೆ. ಅಲ್ಲದೇ ಈ ಕಾರ್ಯ ಆದಲ್ಲಿ ಮುಖ್ಯ ಸಚೇತಕ ಹಾಗೂ ಉಪ ಸಭಾಪತಿ ಸ್ಥಾನ ಕಾಂಗ್ರೆಸ್ಗೆ ಸಿಗಲಿದೆ. ಆಗ ತಮ್ಮ ಆಪ್ತ ಶಾಸಕರಾದ ರಘು ಆಚಾಗರ್ೆ ಮುಖ್ಯ ಸಚೇತಕ ಹುದ್ದೆ ಕೊಡಿಸಬಹುದು ಎನ್ನುವುದು ಪರಮೇಶ್ವರ್ ಲೆಕ್ಕಾಚಾರ ಎನ್ನಲಾಗಿದೆ.