ಜಾನಪದ ಕಲೆ ಉಳಿಸಿ ಬೆಳೆಸಲು ಶಕುಂತಲಾ ಮಹಾಮನೆ ಕರೆ

ಧಾರವಾಡ 26: ನಮ್ಮ ಹಿರಿಯರು ಅಕ್ಷರ ಜ್ಞಾನವಿಲ್ಲದೆ ಬಾಯಿಂದ ಬಾಯಿಗೆ ಜಾನಪದ ಹಾಡಿನ ಮೂಲಕ ಕಲೆಯನ್ನು ಹಂಚಿ ಶ್ರೀಮಂತಿಕೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಯುಗದಲ್ಲಿ ಜಾನಪದ ಕಲೆಯನ್ನು ನಾವೆಲ್ಲರೂ ಉಳಿಸಿ ಬೆಳಸಬೇಕಿದೆ ಎಂದು ಶಕುಂತಲಾ ಮಹಾಮನೆ ಹೇಳಿದರು. 

ಇಲ್ಲಿನ ವೀರಶೈವ ಜಾಗೃತ ಮಹಿಳಾ ಸಮಿತಿ ಟೌನ್ಹಾಲ್ ನಡಕಟ್ಟಿ ಸಭಾಭವನದಲ್ಲಿ ಶಿವಲೀಲ ಗುಡಗುಂಟ ದತ್ತಿ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಜಾನಪದ ಸಮೂಹ ಗಾಯನ ಸ್ಪರ್ಧೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರದೇಶದಿಂದ ಪ್ರದೇಶಕ್ಕೆ ಜಾನಪದ ಸಾಹಿತ್ಯ ಬೇರೆ ಬೇರೆ ಆಗಿರುತ್ತದೆ. ಕರ್ನಾ ಟಕ ಕಾಲೇಜಿನ ಡಾ. ಎ.ಎಲ್ ದೇಸಾಯಿ ಮಾತನಾಡಿ, ಕರ್ನಾ ಟಕ ವಿಶ್ವವಿದ್ಯಾಲಯ ಹಾಗೂ ಕಾಲೇಜು ಕೂಡ ಜಾನಪದ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು. 

ಶಾಂತಾ ಹೊಸುರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈ ಜಾನಪದ ಸಮೂಹ ಗಾಯನ ಸ್ಪರ್ಧೆ ಯಲ್ಲಿ 16 ಮಹಿಳಾ ಮಂಡಳಿಗಳು, ಸದಸ್ಯರು ಭಾಗವಹಿಸಿದ್ದರು.  ಸ್ಪರ್ಧೆ ಯಲ್ಲಿ ಸನ್ಮತಿ ಸಖಿ ಬಳಗ ಪ್ರಥಮ,  ಜಾನಪದ ಸಂಶೋಧನಾ ಕೇಂದ್ರ ಮಹಿಳಾ ಮಂಡಳಿ ದ್ವೀತಿಯ ಹಾಗೂ ಅಕ್ಕನ ಬಳಗ ತೃತೀಯ ಸ್ಥಾನ ಪಡೆದುಕೊಂಡವು. ಆರಂಭದಲ್ಲಿ ಉಪಾಧ್ಯಕ್ಷೆ ನಳನಾಕ್ಷಿ ಅರಳಗುಪ್ಪಿ ಸ್ವಾಗತಿಸಿದರು. ಕಲ್ಪನಾ ಕಟಗಿ ಅತಿಥಿಗಳ ಪರಿಚಯ ಮಾಡಿದರು.