ಬಾಲಕನ ಪೋಷಕರ ಪತ್ತೆಗಾಗಿ ಮನವಿ


ಕೊಪ್ಪಳ: ಕೊಪ್ಪಳದ ವಿಜಯನಗರ ಬಡಾವಣೆ ಹತ್ತಿರ ಜು. 06 ರಂದು ಸುಮಾರು 14 ವರ್ಷ ವಯಸ್ಸಿನ ಬುದ್ದಿಮಾಂದ್ಯ ಬಾಲಕನು ಪತ್ತೆಯಾಗಿದ್ದು, ಬಾಲಕನ ಪೋಷಕರ ಪತ್ತೆಗಾಗಿ ಸಹಕರಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿಜಯನಗರ ಬಡಾವಣೆ ಹತ್ತಿರ ಜು. 06 ರಂದು ಬೆಳಿಗ್ಗೆ 6-45 ಗಂಟೆ ಸುಮಾರಿಗೆ ಅಂದಾಜು 14 ವರ್ಷ ವಯಸ್ಸಿನ ಬುದ್ದಿಮಾಂದ್ಯ ಬಾಲಕ ತಿರುಗಾಡುತ್ತಿದ್ದನ್ನು ಗಮನಿಸಿದ ಸುನೀಲ್ಕುಮಾರ ಎ.ಎಂ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊಪ್ಪಳ ಅವರು, ಬಾಲಕನ್ನು ರಕ್ಷಣೆ ಮಾಡಿ, ಬಾಲಮಂದಿರಕ್ಕೆ ದಾಖಲಿಸಿರುತ್ತಾರೆ.  ಬಾಲಕನನ್ನು ಸಮಾಲೋಚಿಸಿದಾಗ ಬಾಲಕನು ಮಾನಸಿಕ ಅಸಾಮಾನ್ಯ ಮತ್ತು ಪೋಷಕರ ನಿರ್ಲಕ್ಷ್ಯತನದಿಂದ ಮನೆ ಬಿಟ್ಟಿರಬಹುದು.  ಈ ಬಾಲಕನು ಬುದ್ದಿಮಾಂದ್ಯನಾಗಿದ್ದು, ಮಾತನಾಡಲು ಸಹ ಬಂದಿರುವುದಿಲ್ಲ ಎಂಬುದನ್ನು ಗಮನಿಸಲಾಗಿದೆ.  ಬಾಲಕನನ್ನು ಜಿಲ್ಲಾ ಆಸ್ಪತ್ರೆ ಮಾನಸಿಕ ತಜ್ಞರಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ ವೈದ್ಯರು, ಬಾಲಕನು ಬುದ್ದಿಮಾಂದ್ಯನಾಗಿರುತ್ತಾನೆ ಎಂಬುದಾಗಿ ವರದಿ ನೀಡಿದ್ದಾರೆ.

ಬಾಲಕನ ವಿವರ: ಬಾಲಕನಿಗೆ ಮಾತನಾಡಲು ಬಾರದೇ ಇದ್ದ ಕಾರಣ ಬಾಲಕನ ಹಾಗೂ ಪೊಷಕರ ಹೆಸರು ತಿಳಿದು ಬಂದಿರುವುದಿಲ್ಲ.  ಬಾಲಕನಿಗೆ ಮಾತನಾಡಲು ಬರುವುದಿಲ್ಲ ಆದರೆ ಕನ್ನಡ ಮತ್ತು ಹಿಂದಿ ಭಾಷೆಗೆ ಸ್ಪಂದಿಸುತ್ತಾನೆ.  ಜಾತಿ ಮುಸ್ಲಿಂ ಎಂದು ಊಹಿಸಬಹುದಾಗಿದೆ.  ಅಂದಾಜು 14 ವರ್ಷ, ತೂಕ-28 ಕೆ.ಜಿ., 147 ಸೆಂ.ಮೀ. ಎತ್ತರ, ಕೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಮುಖದ ಎಡ ಬಾಗದಲ್ಲಿ ಕಲೆಯ ಗುರುತು ಮತ್ತು ತೆಲೆಯ ಹಿಂಭಾಗದಲ್ಲಿ ಗಾಯದ ಕಲೆಗಳ ಗುರುತುಗಳಿವೆ.  ಬಾಲಕನು ಸದ್ಯ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸರಕಾರಿ ಬಾಲಕರ ಬಾಲಮಂದಿರ (ವಿಜಯನಗರ ಬಡಾವಣೆ, ಅನ್ನಪೂಣರ್ೇಶ್ವರಿ ದೇವಸ್ಥಾನ ಹಿಂದುಗಡೆ ಕಿನ್ನಾಳ ರಸ್ತೆ ಕೊಪ್ಪಳ ದೂ.ಸಂ. 08539-225030 7259351515, 9972524215,) ಇಲ್ಲಿ ಇದ್ದು, ಬಾಲಕನ ಪೋಷಕರ ಪತ್ತೆಗಾಗಿ ಸಹಕರಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.