ಲೋಕದರ್ಶನವರದಿ
ರಾಣೇಬೆನ್ನೂರ04: ಆಧುನಿಕ ಬದುಕು ಮತ್ತು ತಂತ್ರಜ್ಞಾನದ ವ್ಯವಸ್ಥೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕ ಕಲೆಗಳು ವಿನಾಶದತ್ತ ಸಾಗುತ್ತಲಿವೆ. ಇದರಿಂದ ಇತಿಹಾಸದ ನಾಟಕ, ಸಂಸ್ಕಾರ, ಪರಂಪರೆ ಇಂದಿನ ಯುವ ಜನಾಂಗಕ್ಕೆ ತಿಳಿಯದಂತಹ ಪರಿಸ್ಥಿತಿ ನಿಮರ್ಾಣವಾಗಿದೆ ಎಂದು ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ರಾಜ್ಯ ರಂಗಾಸಕ್ತರ ಬಳಗ ರಂಗ ಕುಸುಮ ಕಲಾಕೇಂದ್ರ ಆಯೋಜಿಸಿದ್ದ ರಂಗ ತರಬೇತಿ, ರಂಗ ಸಂಭ್ರಮ ಶಿಬಿರ ಉದ್ಘಾಟಿಸಿ ಮಾತನಾಡಿದ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ರಾಘವೇಂದ್ರಾಚಾರ್ಯ ನವರತ್ನ ವಿಷಾಧಿಸಿದರು.
ರಾಣೇಬೆನ್ನೂರು ತಾಲೂಕು ತಾವು ತಿಳಿದಂತೆ ಜನಪದ ಸಂಸ್ಕೃತಿಯ ಕಲಾವಿದರ ತವರೂರು. ಅಲ್ಲದೆ ಉತ್ತರ ಕನರ್ಾಟಕದ ಹೆಬ್ಬಾಗಿಲೇನಿಸಿಕೊಂಡಿರುವ ಇತಿಹಾಸದ ಅಂದಿನ ರಾಣಿಬಿದನೂರು ನಾಟಕ ಕಲಾವಿದರ ಭವ್ಯ ಪರಂಪರೆಯ ನಾಡಾಗಿದೆ ಎಂದರು.
ನಾಟಕ ಕ್ಷೀತಿಜ ಖ್ಯಾತಿಯ ಹಲಗೇರಿ ದೊಡ್ಡ ಜಟ್ಟೇಪ್ಪ ಮತ್ತು ಸಣ್ಣ ಜಟ್ಟೇಪ್ಪ ಲಾವಣಿ ಕಲಾಕಾರ ಸಮ್ಮದ್ ಸಾಹೇಬ್ ಅರೇಮಲ್ಲಾಪುರದ ಕಲಾವಿದರು ಜೋಹಿಸರಹರಳಹಳ್ಳಿ ಭಜನೆ ಕಲಾವಿದರು, ಪುರವಂತಿಕೆ ಅಟವಾಳಗಿ ಮನೆತನದವರು, ಕಂಚಗಾರ ಓಣಿಯ ದೊಡ್ಡಾಟ ಅಂತರವಳ್ಳಿಯ ಗೊಂಬೆ ಕಲೆಯ ಜೀವನಗೌಡ್ರ ಕಲಾವಿದರು ಸೇರಿದಂತೆ ಮತ್ತಿತರ ಕಲಾವಿದರು ತಮ್ಮ ಸಮಗ್ರ ಕಲೆಗಳನ್ನು ವಿಶ್ವಕ್ಕೆ ಪರಿಚಯಿಸಿದ ಕೀತರ್ಿ ಇವರೆಲ್ಲರಿಗೂ ಸಲ್ಲುತ್ತದೆ ಎಂದು ಇತಿಹಾಸ ಸ್ಮರಿಸಿ ಮಾತನಾಡಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ರಂಗ ನಿದರ್ೇಶಕ ಈ ವೆಂಕಟೇಶ ಅವರು ವಾಣಿಜ್ಯ ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ರಂಗಾಸಕ್ತ ಬಳಗವು ಸ್ಥಳೀಯ ರಂಗ ಕುಸುಮ ಕಲಾ ಕೇಂದ್ರದ ಅಡಿಯಲ್ಲಿ ರಂಗ ತರಬೇತಿ ಆಯೋಜಿಸಲಾಗಿದೆ. ರಂಗ ಶಿಕ್ಷಣದಿಂದ ಮಕ್ಕಳ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಮತ್ತು ಭವಿಷ್ಯದ ಭದ್ರ ಬುನಾದಿಗಾಗಿ ತಮ್ಮ ಜೀವನ ಕಲೆಯ ಅನುಭವದ ಮೂಲಕ ವ್ಯಕ್ತಿತ್ವ ನಿಮರ್ಿಸಿಕೊಳ್ಳಲು ಸಹಕಾರಿಯಾಗಲಿದೆ. ನಗರದ ಜನತೆ ಈ ಅಪರೂಪದ ಅವಕಾಶವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಪ್ರೋ|| ಸಾಯಿಲತಾ ಮಡಿವಾಳರ ಅವರು ನಾಟಕ ಅಂದು ಇಂದು ಮತ್ತು ಮುಂದು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಲಕ್ಷ್ಮೀ ಅಡಕಿ ಪ್ರಾಥರ್ಿಸಿದರು, ಶಿಕ್ಷಕ ದೇವರಾಜ ಹುಣಸಿಕಟ್ಟಿ ಸ್ವಾಗತಿಸಿದರು.
ತಾಲೂಕ ಕ.ಸಾ.ಪ ಅಧ್ಯಕ್ಷೆ ಎ.ಬಿ.ರತ್ನಮ್ಮ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನರ್ಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ನಿವೃತ್ತ ಶಿಕ್ಷಕ ಚಿಕ್ಕೂರಾವ್ ಕುಲಕಣರ್ಿ, ಸಾಹಿತಿ ಪ್ರಭಾಕರ ಶಿಗ್ಲಿ, ಮಸಾವೆ ಅದ್ಯಕ್ಷ ಸೀತಾರಾಮ್ ಕಣೇಕಲ್, ರಂಗತಜ್ಞೆ ಸುಮಂಗಲಾ, ಮಂಜುನಾಥ ಕೊರವರ, ಚಂದ್ರಶೇಖರ ಮಡಿವಾಳರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಪ್ರಥಮ ಆಧ್ಯತೆಯಾಗಿ ರಂಗಶಿಕ್ಷಣ, ಸಂಗೀತ, ಚಿತ್ರಕಲೆ, ಜಾನಪದ ನೃತ್ಯ, ದೊಡ್ಡಾಟ, ಗೊಂಬೆಯಾಟ, ಕಂಸಾಳೆ, ವೀರಗಾಸೆ, ಲಲಿತಕಲೆ ಸೇರಿದಂತೆ ಮತ್ತಿತರ ಕಲೆಗಳ ಬಗ್ಗೆ 15 ದಿವಸಗಳ ನಡೆಯಲಿದೆ.