ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪೂರ್ವಭಾವಿ ಸಭೆ ಯಶಸ್ವಿ: ಕುರಗೋಡ ಸೇರಿ ಹಲವರು ಭಾಗಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪೂರ್ವಭಾವಿ ಸಭೆ ಯಶಸ್ವಿ: ಕುರಗೋಡ ಸೇರಿ ಹಲವರು ಭಾಗಿ Preparatory meeting for Sri Krishna Janmashtami celebration successful; Kuragoda and others particip

ಲೋಕದರ್ಶನ ವರದಿ 

ಕೊಪ್ಪಳ  18:  ಕೊಪ್ಪಳ ಜಿಲ್ಲಾ ಆಡಳಿತ ಭವನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಜನ್ಮಾಷ್ಟಮಿ ದಿನದಂದು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಷೆ, ಸಿದ್ಧತೆಗಳು ಹಾಗೂ ಆಚರಣೆಯ ಕುರಿತು ಮಹತ್ವದ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪತ್ರಕರ್ತರು, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಸಭೆಯಲ್ಲಿ ಸಮುದಾಯದ ಗೌರವ ಅಧ್ಯಕ್ಷರಾದ  ಕುರಗೋಡ ರವಿ ಯಾದವ್,  ಜಗನ್ನಾಥ್ ಯಾದವ್ ಕಾರ್ಯದರ್ಶಿ,  ಯಮನೂರ​‍್ಪ ಬಂಗ್ಲಾರ್, ಯುವ ಘಟಕದ ಅಧ್ಯಕ್ಷ ರಮೇಶ್ ಎನ್‌. ಯಾದವ್, ಕುಷ್ಟಗಿ ತಾಲೂಕು ಅಧ್ಯಕ್ಷ ಶಿವಪ್ಪ ಮಿರ್ಜಿ ಸೇರಿದಂತೆ ಯಾದವ್ ಸಮುದಾಯದ ಯುವ ಮುಖಂಡರು ಹಾಗೂ ಯುವ ಮಿತ್ರರು ಭಾಗವಹಿಸಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸುವ ಕುರಿತು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.“ಶ್ರೀ ಕೃಷ್ಣನ ಆದರ್ಶಗಳು, ಸಂದೇಶಗಳು ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜನ್ಮಾಷ್ಟಮಿ ಆಚರಣೆಯನ್ನು ಯಶಸ್ವಿಗೊಳಿಸೋಣ”ಎಂಬ ಸಂಕಲ್ಪದೊಂದಿಗೆ ಸಭೆ ಮುಕ್ತಾಯವಾಯಿತು..