ಕಾಲಿನ ಸಮಸ್ಯೆಯಿಂದಾಗಿ ರಮ್ಯಾ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿಲ್ಲ: ಡಿಕೆಶಿ

ಬೆಂಗಳೂರು, ನ.27- ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮಥರ್ಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಅವರ ಕಾಲಿನ ಸಮಸ್ಯೆ ತೀವ್ರ ಸ್ವರೂಪದ್ದಾಗಿದೆ. ಕಳೆದ 6ರಂದು ಬೆಂಗಳೂರಿಗೆ ಬರುವುದಾಗಿ ಹೇಳಿದ್ದರು.ಅದರ ಹಿಂದಿನ ದಿನವೇ ಬಿದ್ದು ಗಾಯಮಾಡಿಕೊಂಡಿದ್ದಾರೆ.ಅವರು ಓಡಾಡದಂತಹ ಪರಿಸ್ಥಿತಿ ಇರುವುದರಿಂದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಲಿಲ್ಲ ಎಂದರು.

.ವಿಷ್ಣು ಸ್ಮಾರಕ ?:

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲೇ ನಿಮರ್ಿಸಬೇಕು ಎಂಬ ಬೇಡಿಕೆ ಸೃಷ್ಟಿಯಾಗಿದೆ.ಈವರೆಗೂ ಆ ಬಗ್ಗೆ ಯಾವುದೇ ಚಚರ್ೆಗಳು ನಡೆದಿರಲಿಲ್ಲ. ನಿನ್ನೆ ಅಂಬರೀಶ್ ಅವರ ಅಂತ್ಯ ಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲೇ ನೆರವೇರಿಸಲಾಗಿದೆ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇಲ್ಲೇ ನಿಮರ್ಿಸುವ ಬಗ್ಗೆ ಪರಿಸ್ಥಿತಿ ನೋಡಿ ಪ್ರತಿಕ್ರಿಯಿಸಲಾಗುವುದು.ಸದ್ಯಕ್ಕೆ ನಾನು ಆ ಬಗ್ಗೆ ಹೇಳಿಕೆ ನೀಡಲು ಅಧಿಕೃತ ವ್ಯಕ್ತಿ ಅಲ್ಲ ಎಂದು ಹೇಳಿದರು.

7 ಮಂದಿ ಸಸ್ಪೆಂಡ್:

ಜಲಸಂಪನ್ಮೂಲ ಇಲಾಖೆಯಿಂದ ಪಿಡಬ್ಲ್ಯೂಡಿ ಹಾಗೂ ಇತರೆ  ಇಲಾಖೆಗಳಿಗೆ ಯರವಲು ಸೇವೆಯಿಂದ ಹೋಗಿದ್ದ ಇಂಜನಿಯರ್ಗಳನ್ನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿಗೆ ವಾಪಸ್ ಬಂದ ಇಂಜನಿಯರ್ಗಳಿಗೆ ಸ್ಥಳ ನಿಯೋಜನೆ ಮಾಡಿ ವಗರ್ಾವಣೆ ಮಾಡಲಾಗಿದೆ. ನಿಯೋಜಿತ ಸ್ಥಳಗಳಿಗೆ ತೆರಳದ ಆರು ಮಂದಿ ಸಹಾಯಕ  ಕಾರ್ಯನಿವರ್ಾಹಕ ಇಂಜಿನಿಯರ್, ಒಬ್ಬ ಕಾರ್ಯನಿವರ್ಾಹಕ ಇಂಜಿನಿಯರ್ ಸೇರಿ 7 ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂದರು.