88,000 ಪೌಂಡ್ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸಲು ವಿಜಯ್ ಮಲ್ಯಗೆ ಆದೇಶ
ಲಂಡನ್, ನ.22 - ಸ್ವತ್ತಿಗೆ ಸಂಬಂಧಪಟ್ಟಂತೆ ಯುಬಿಎಸ್ ಸ್ವಿಸ್ ಬ್ಯಾಂಕ್ಗೆ 88,000 ಪೌಂಡ್ಗಳ ಮಧ್ಯಂತರ ಕಾನೂನು ವೆಚ್ಚ ಪಾವತಿಸುವಂತೆ ಲಂಡನ್ ಹೈಕೋಟರ್್ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಅವರಿಗೆ ಆದೇಶ ನೀಡಿದೆ.
ವಿವಿಧ ರಾಷ್ಟ್ರೀಯಕೃತ ಬ್ಯಾಂಕ್ಗಳಿಂದ ಬಹುಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಪೂರ್ವ ಸುಸ್ತಿದಾರನೆಂಬ ಕಳಂಕದೊಂದಿಗೆ ಇಂಗ್ಲೆಂಡ್ಗೆ ಪರಾರಿಯಾಗಿರುವ ಮಾಜಿ ಮದ್ಯದ ದೊರೆಗೆ ನ್ಯಾಯಾಲಯದ ಈ ಆದೇಶದಿಂದ ಮತ್ತೊಂದು ಹಿನ್ನಡೆಯಾಗಿದೆ.
ಲಂಡನ್ನಲ್ಲಿರುವ ಬೇಕರ್ ಸ್ಟ್ರೀಟ್ ಬಂಗಲೆಯನ್ನು ಮಲ್ಯ ಸ್ವಿಸ್ ಬ್ಯಾಂಕ್ನಿಂದ 20.4 ದಶಲಕ್ಷ ಪೌಂಡ್ಗಳಿಗೆ ಅಡಮಾನ ಪಡೆದಿದ್ದರು.ಆದರೆ ಅದಕ್ಕೆ ಸಂಬಂದಪಟ್ಟ ವೆಚ್ಚಗಳನ್ನು ಭರಿಸಲು ಸುಸ್ತಿದಾರರಾಗಿದ್ದರು.ಈ ಸಂಬಂಧ ಬ್ಯಾಂಕ್ ಅಧಿಕಾರಿಗಳು ಕೋಟರ್್ನಲ್ಲಿ ದಾವೆ ಹೂಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಲಂಡನ್ ಹೈಕೋಟರ್್ನ ವಾಣಿಜ್ಯ ಮತ್ತು ಸ್ವತ್ತುಗಳ ವಿಭಾಗದ ಚೀಫ್ ಮ್ಯಾಸ್ಟರ್(ಮುಖ್ಯ ನ್ಯಾಯಾಧೀಶರು) ಮಾಥ್ಯೂ ಮಾಷರ್್, ಸ್ವಿಸ್ ಬ್ಯಾಂಕ್ಗೆ 88.000 ಪೌಂಡ್ ತಾತ್ಕಾಲಿಕ ಕಾನೂನು ವೆಚ್ಚ ಭರಿಸುವಂತೆ ಸೂಚಿಸಿದರು.
ಮಲ್ಯ ಸುಸ್ತಿದಾರರಾಗಿರುವುದರಿಂದ ಈ ಬಂಗಲೆಯನ್ನು ತೆರವುಗೊಳಿಸಲು ಸೂಚನೆ ನೀಡುವಂತೆ ಸ್ವಿಸ್ಬ್ಯಾಂಕ್ ಕೋಟರ್್ಗೆ ಈ ಹಿಂದೆ ಮನವಿ ಮಾಡಿತ್ತು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 