ಮೆಸ್ಸಿಗೆ 600ರ ಸಂಭ್ರಮ: ಲಿವರ್ಪೂಲ್ ಎದುರು ಬಾರ್ಸ್ಲೋನಾಗೆ ಭರ್ಜರಿ ಜಯ


ಬಾರ್ಸ್ಲೋನಾ ಮೇ 2 (ಕ್ಸಿನ್ಹುವಾ) ವಿಶ್ವ ಸ್ಟಾರ್ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಹಾಗೂ  ಲೂಯಿಸ್ ಸೌರೆಜ್ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಬಾರ್ಸ್ಲೋನಾತಂಡ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಮೊದಲ ಲೆಗ್ ಪಂದ್ಯದಲ್ಲಿ ಲಿವರ್ಪೂಲ್ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು.  ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಬಾರ್ಸ್ಲೋನಾ ತಂಡದ ಜಯದ ಜತೆ ಮತ್ತೊಂದು ವಿಶೇಷತೆ ನಡೆಯಿತು. ಅರ್ಜ್ಟೀನಾದ ಅಗ್ರ ಆಟಗಾರ ಲಿಯೊನೆಲ್ ಮೆಸ್ಸಿ ಕ್ಲಬ್ ಪಂದ್ಯಗಳಲ್ಲಿ 600ನೇ ಗೋಲ್ ಗಳಿಸಿದ ಗೌರವಕ್ಕೆ ಭಾಜನರಾದರು.  ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ನಡೆಯಿತು. ಆದರೆ, ಪಂದ್ಯದ 26ನೇ ನಿಮಿಷದಲ್ಲಿ  ಚೆಂಡಿನ ಮೇಲೆ ಪಾರಮ್ಯ ಸಾಧಿಸಿದ ಲೂಯಿಸ್ ಸೌರೆಜ್ ಬಾರ್ಸ್ಲೋನಾಗೆ ಗೋಲಿನ ಖಾತೆ ತೆರೆದರು. ಇದರೊಂದಿಗೆ ಮೊದಲ ಅವಧಿ ಮುಕ್ತಾಯಕ್ಕೆ ಬಾರ್ಸ್ಲೋನಾ 1-0 ಮುನ್ನಡೆ ಪಡೆಯಿತು. ಬಳಿಕ, ಎರಡನೇ ಅವಧಿಗೆ ತಂತ್ರಗಾರಿಕೆ ಹಾಗೂ ನಿಯಮಿತ ಯೋಜನೆಯೊಂದಿಗೆ ಕಣಕ್ಕೆ ಇಳಿದ ಲಿವರ್ಪೂಲ್ , ಗೋಲು ಗಳಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಆದರೆ, ಬಾಸರ್ಿಲೋನಾ ರಕ್ಷಣಾ ಕೋಟೆಯನ್ನು ಭೇದಿಸುವಲ್ಲಿ ಲಿವರ್ಪೂಲ್ ಸ್ಟ್ರೈಕರ್ಗಳು ವಿಫಲರಾದರು.  ನಂತರ ಮೈದಾನದಲ್ಲಿ ಚಾಕಚಕ್ಯತೆಯಿಂದ ಆಟವಾಡಿದ ಲಿಯೊನೆಲ್ ಮೆಸ್ಸಿ, 75ನೇ ಹಾಗೂ 82ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಸಿಡಿಸಿದರು. ಇದರಿಂದಾಗಿ ಬಾರ್ಸ್ಲೋನಾ 3-0 ಮುನ್ನಡೆ ಪಡೆಯಿತು. ಅಲ್ಲದೇ ಮೆಸ್ಸಿ 600 ಗೋಲು ಗಳಿಸಿದ ಸಾಧನೆಗೆ ಬುಧವಾರ ತಡರಾತ್ರಿ ಭಾಜನರಾದರು. ಅಂತಿಮವಾಗಿ ಬಾಸರ್ಿಲೋನಾ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.