ಇನ್ನೆರಡು ವರ್ಷದೊಳಗೆ ಸಂಪೂರ್ಣ ಕಾಳಿ ನದಿ ಮಾಲಿನ್ಯ ಮುಕ್ತವಾಗಬೇಕು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್
ಕಾರವಾರ : ಕಾಳಿ ನದಿಯ ನೀರನ್ನು ಮಾಲಿನ್ಯ ಮುಕ್ತ ಮಾಡಬೇಕಿದೆ, ಈ ಸಂಬAಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಲೇ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಸೂಚಿಸಿದರು.
ಜಿಲ್ಲಾಧಿಕಾರಿ ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಕರ್ನಾಟಕಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಅವರು, ನ್ಯಾಯಾಲಯದ ಆದೇಶದಂತೆ ಈಗಾಗಲೇ ಜಿಲ್ಲಾ ಮಟ್ಟದ ಪರಿಸರ ಸರ್ವೇಕ್ಷಣಾ ಟಾಸ್ಕ ಪೋರ್ಸ ರಚನೆಗೊಂಡಿದ್ದು, ಈ ಕಮೀಟಿಯು ಕಾಳಿ ನದಿಯ ೧೦ ಕೀಮಿ. ಉದ್ದದ ಪಾತ್ರ ಮಾಲಿನ್ಯ ಮುಕ್ತ ಮಾಡಲು ಶ್ರಮಿಸಬೇಕಿದೆ. ಕಾಳಿ ನದಿ ಹರಿಯುವ ದಾಂಡೇಲಿ ನಗರದ ತುದಿ ಯಿಂದ ಬೊಮ್ಮನಹಳ್ಳಿ ಹಳ್ಳಿಯವರೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಿಯಾ ಯೋಜನೆಯಂತೆ ಕಾಳಿ ನದಿಯ ನೀರನ್ನು ಮಾಲಿನ್ಯ ಮುಕ್ತ ವಾಗಬೇಕು. ಅಲ್ಲದೇ ಕೇವಲ ಆ ೧೦ ಕೀಮಿ ವ್ಯಾಪ್ತಿಗೆ ಒಳಪಡದೇ ಇಡೀ ನದಿ ಉಗಮಸ್ಥಾನದಿಂದ ಸಮುದ್ರ ಸೇರುವವರೆಗೂ ಮಾಲಿನ್ಯ ಮುಕ್ತವಾಗಬೇಕಿದೆ. ಉಗಮ ಸ್ಥಾನದಲ್ಲಿರುವ ನೀರಿನ ಗುಣಮಟ್ಟ ಸಮುದ್ರ ಸೇರುವ ಸ್ಥಳದಲ್ಲಿಯೂ ಹಾಗೆಯೇ ಇರಬೇಕಿದೆ. ಇದಕ್ಕೆ ಸಂಬAದಿಸಿದ ಇಲಾಖೆಗಳು ಈ ಕುರಿತು ಸೂಕ್ತ ಕ್ರಮ ವಹಿಸಬೇಕಿದೆ. ನದಿಯ ಪಾತ್ರದಲ್ಲಿ ಮಾಲಿನ್ಯ ಕಾರಕಗಳು ನೀರನ್ನು ಸೇರುವುದನ್ನು ಗುರುತಿಸಿ ಅದನ್ನು ನಿಲ್ಲಿಸಬೇಕು ಹಾಗೂ ಈ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತಗಳು ನದಿಗೆ ಯಾವುದೇ ಮಲೀನ ನೀರು ಅಥವಾ ಕಸ ಕಡ್ಡಿಗಳು (ಘನ ತ್ಯಾಜ್ಯ) ಯಾವುದೇ ಮೂಲದಿಂದ ನದಿಗೆ ಸೇರುವಂತಹ ಪ್ರದೇಶಗಳನ್ನು ಗುರುತಿಸಿ, ನಕ್ಷೆಯನ್ನು ತಯಾರಿಸಿ, ಇದನ್ನು ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕೆಂದು ಅವರು ತಿಳಿಸಿದರು
ನದಿಯನ್ನು ಮಲೀನಗೊಳಿಸುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ ಜಿಲ್ಲಾಧಿಕಾರಿ, ಮುಂದಿನ ಎರಡು ವರ್ಷದೊಳಗೆ ಸಂಪೂರ್ಣ ಕಾಳಿ ನದಿ ಮಾಲಿನ್ಯ ಮುಕ್ತವಾಗಬೇಕು ಈ ಬಗ್ಗೆ ಕೂಡಲೇ ಕ್ರಮ ವಹಿಸಲು ಎಲ್ಲ ಇಲಾಖೆಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಘನ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು ೨೦೧೬ ರ ಅನುಷ್ಠಾನ ವಿಷಯವಾಗಿ ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಪೀಠವು ನೀಡಿರುವ ಆದೇಶದನ್ವಯ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ (ಟಾಸ್ಕ್ ಫೋರ್ಸ ಸಮಿತಿ) ರಚಿಸಲಾಗಿರುತ್ತದೆ. ಘನತ್ಯಾಜ್ಯ ವಿಲೇವಾರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಆದಾಗ್ಯೂ, ಮನೆ ಮನೆಯಿಂದ ಕಸ ಸಂಗ್ರಹಣೆ, ವಿಂಗಡಣೆ ಮತ್ತು ಮುಂದುವರೆದು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಂಗಡಿಸಿದ ಕಸವನ್ನು ವೈಜ್ಞಾನಿಕವಾಗಿ ಶೇಕಡಾ ೧೦೦ ರಷ್ಟು ನಿರ್ವಹಣೆ ಮಾಡಲೂ ಸಹ ಇನ್ನಷ್ಟು ಕ್ರಮಗಳನ್ನು ಮತ್ತು ಈ ಕುರಿತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಲು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯು ಘನತ್ಯಾಜ್ಯ ತ್ಯಾಜ್ಯ ನಿರ್ವಹಣೆ ನಿಯಮಗಳು ೨೦೧೬ ರನ್ವಯ ಸ್ಥಳೀಯ ಸಂಸ್ಥೆಗಳು ನಿರ್ವಹಣೆ ಮಾಡುತ್ತಿರುವ ಬಗ್ಗೆ ಕೂಲಂಕುಷವಾಗಿ ಪರಿವೀಕ್ಷಣೆ ನಡೆಸಿ ಆಗಾಗ್ಗೆ ಸೂಕ್ತ ತಂತ್ರಜ್ಞಾನ ಅಳವಡಿಕೆಗಳ ಬಗ್ಗೆ ಮಾರ್ಗದರ್ಶನ ನೀಡಲು ಮತ್ತು ಕಮೀಟಿಯ ಗಮನಕ್ಕೆ ತರಲು ಸೂಚಿಸಿದ ಜಿಲ್ಲಾಧಿಕಾರಿ ಜಿಲ್ಲೆಯ ಎಲ್ಲ ತಾಲೂಕು, ಗ್ರಾಮ ಪಂಚಾಯತಿ ಹಾಗೂ ನಗರಸಭೆಗಳಲ್ಲಿ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕೆಂದು ಆದೇಶ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪರಿಸರ ಅಧಿಕಾರಿಗಳಾದ ಡಾ. ಹೆಚ್ ಲಕ್ಷ್ಮೀಕಾಂತ, ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ, ಪೊಲೀಸ್ ಉಪಾಧೀಕ್ಷಕರಾದ ಅರವಿಂದ ಕಲಗುಜ್ಜಿ ಹಾಗೂ ಇತರರು ಹಾಜರಿದ್ದರು.