ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯ: ವಿವಾಹವಾಗುವುದಾಗಿ ನಂಬಿಸಿ ಮಹಿಳೆಯಿಂದ 5.6 ಲಕ್ಷ ದೋಚಿದ ಅಪರಿಚಿತ
ಬೆಂಗಳೂರು, ಮೇ 26 ,ಮ್ಯಾಟ್ರಿಮೋನಿ ವೆಬ್ ಸೈಟ್ ವೊಂದರಲ್ಲಿ ಪರಿಚಯವಾದ ಮಹಿಳೆಯೊಬ್ಬರನ್ನು ವಿವಾಹವಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ 5.6 ಲಕ್ಷ ರೂಗಳ ವಂಚಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ.ಜಯನಗರದ 46 ವರ್ಷದ ಮಹಿಳೆ ಯೊಬ್ಬರು ಕಳೆದ 2019ರ ಆಗಸ್ಟ್‌ನಲ್ಲಿ ಮ್ಯಾಟ್ರಿಮೋನಿ ವೆಬ್ ಸೈಟ್ ವೊಂದರಲ್ಲಿ ವರನನ್ನು ಹುಡುಕಲು ತಮ್ಮ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು.ಇತ್ತೀಚೆಗೆ ಅದರಲ್ಲಿ ರಿಯನ್ಶ್ ದಿನೇಶ್ ಆಚಾರ್ಯ ಪರಿಚಯವಾಗಿ ಇಂಗ್ಲೆಂಡ್ ಐಎಸ್‍ಡಿ ಕೋಡ್ ಇರುವ ಮೊಬೈಲ್ ನಂಬರನ್ನು ನೀಡಿದ್ದಾನೆ. ಪ್ರತಿ ದಿನ ಕರೆ ಮತ್ತು ಮೆಸೇಜ್ ಮಾಡುತ್ತಿದ್ದ ಆತ, ನಾನು ದೊಡ್ಡ ಶ್ರೀಮಂತನ ಮಗ ಎಂದು ಹೇಳಿಕೊಂಡಿದ್ದ. ಮಲೇಷ್ಯಾದಲ್ಲಿ ವ್ಯಾಪಾರ ಮಾಡುತ್ತಿದ್ದ ನಮ್ಮ ತಂದೆ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದು ಅವರ ವ್ಯಾಪಾರವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆ ಕಾರಣದಿಂದ ನಾನು ಮಲೇಷ್ಯಾಗೆ ಬಂದಿದ್ದೇನೆ ಎಂದು ಹೇಳಿಕೊಂಡಿದ್ದ.ನಮ್ಮ ತಂದೆ ಇಲ್ಲಿನ ಕೆಲ ಉದ್ಯೋಗಿಗಳಿಗೆ ಸಾಯುವ ಮುನ್ನ ದೊಡ್ಡ ಮಟ್ಟದ ಹಣ ಕೊಟ್ಟಿದ್ದಾರೆ. ಅದನ್ನು ನಾನು ವಾಪಸ್ ಪಡೆಯಬೇಕು ಎಂದು ಕಥೆ ಕಟ್ಟಿದ್ದ. ಇದಾದ ಸ್ವಲ್ಪ ದಿನದಲ್ಲೇ ಆ ಹಣವನ್ನು ಪಡೆಯಲು ಶುಲ್ಕ ಕಟ್ಟಬೇಕು. ಅದಕ್ಕೆ 6 ಲಕ್ಷ ರೂ. ಹಣ ಬೇಕು ಎಂದು ಮಹಿಳೆಯ ಬಳಿ ಕೇಳಿದ್ದಾನೆ.
ಅವನ ಮಾತನ್ನು ನಂಬಿದ ಮಹಿಳೆ ಆನ್‍ಲೈನ್ ಮೂಲಕ ಸುಮಾರು 5.6 ಲಕ್ಷವನ್ನು ಕಳುಹಿಸಿದ್ದಾರೆ.ಇದಾದ ಬಳಿಕ ಅವರಿಗೆ ಮೇ 6ರಂದು ಮಲೇಷ್ಯಾದಿಂದ ಆಚಾರ್ಯನ ಹೆಸರಿನ ಕಸ್ಟಮ್ ಅಧಿಕಾರಿ ಕಾಲ್ ಮಾಡಿ ನೀವು ಕಳುಹಿಸಿರುವ ಹಣವನ್ನು ಮಲೇಷ್ಯಾದಲ್ಲಿ ರಿಲೀಸ್ ಮಾಡಲು 74 ಸಾವಿರ ಶುಲ್ಕ ಕಟ್ಟಬೇಕು ಎಂದು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಮಹಿಳೆ ನಡೆದ ವಿಚಾರವನ್ನು ಕುಟುಂಬಸ್ಥರ ಬಳಿ ಹಾಗೂ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ. ಆಗ ತಾನು ಮೋಸ ಹೋಗಿರುವುದು ತಿಳಿದು ದೂರು ನೀಡಿದ್ದಾರೆ. ಈಗ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 