ಲೋಕದರ್ಶನ ವರದಿ
ಕುರುಗೋಡು 06: ಡಿಪೋ ಉದ್ಘಾಟನೆಯಾಗಿ ಒಂದು ವರ್ಷವಾದರೂ ಡಕೋಟಾ ಬಸ್ನಲ್ಲಿ ಕೈ-ಮೈ ನೋಯಿಸಿಕೊಂಡು ಪ್ರಯಾಣಿಸುವದು ಮಾತ್ರ ತಪ್ಪಿಲ್ಲ, ಪಟ್ಟಣದ ಜನರಿಗೆ ಹೊಸ ಬಸ್ಗಳ ನಿರೀಕ್ಷೆ ಹುಸಿಯಾಗಿದೆ, ಹೊಸ ಡಿಪೋ ಗುಜರಿಗೆ ಕಳಿಸುವ ಸ್ಕ್ರ್ಯಾಪ್ ಡಕೋಟಾ ಬಸ್ಗಳ ಉಗ್ರಾಹಣವಾಗಿದೆ.
ಘಟಕದಲ್ಲಿ ಮೂಲ ಸೌಲಭ್ಯಗಳ ಕೊರತೆ ಒಂದಡೆ, ಮೊತ್ತೊಂದೆಡೆ ಚಾಲಕರಿಗೆ ಎಲ್ಲೆಂದರಲ್ಲಿ ಕೈ ಕೊಡುವ ಡಕೋಟಾ ಬಸ್ನ್ನು ಭಯದಿಂದ ನಡೆಸುವ ಗಂಭಿರ ಸ್ಥಿತಿ ಎದುರಾಗಿದೆ. ಆದರೆ ಇದರ ಬಗ್ಗೆ ಕಳಾಜಿ ತೋರದ ಸಾರಿಗೆ ಸಂಸ್ಥೆ ಅಧಿಕಾರಿಗಳು.
ಜನರ ನಿರೀಕ್ಷೆ ಹುಸಿ:
ಒಂದು ವರ್ಷದ ಹಿಂದೆ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿಲಾದ ಘಟಕವನ್ನು ಆಗಿನ ಕಾಂಗ್ರೆಸ್ ಸಕರ್ಾರದ ರಾಜ್ಯ ಸಾರಿಗೆ ಸಚಿವ ಹೆಚ್ಎಂ.ರೇವಣ್ಣ ಉದ್ಘಾಟಿಸಿದ್ದರು. ಆಗ ಪಟ್ಟಣದ ಜನರಲ್ಲಿ ಡಕೋಟ್ ಬಸ್ಗಳ ಕಾಟ ತಪ್ಪಿ ಹೊಸ ಬಸ್ಗಳು ಬರುತ್ತವೆ ಮತ್ತು ಬಸ್ಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಆಸೆ ಚಿಗುರಿತ್ತು, ಆದರೆ ಒಂದು ವರ್ಷ ಕಳೆದರೂ ಹೊಸಬಸ್ಗಳಿಲ್ಲದೆ ಅದೇ ಡಕೋಟ್ ಹಾಗೂ ಸ್ಕ್ರಾಪ್ ಬಸ್ಗಳೇ ಗತಿ ಎಂಬಂತೆ ನಿರಾಶಾದಾಯಕದಿಂದ ಪ್ರಯಾಣಿಕರು ಡಬ್, ದಡ್ ಎಂಬ ಶಬ್ದದಿಂದ ಮೈ-ಕೈ ನೋಯಿಸಿಕೊಂಡು ಬೇಸರದಿಂದಲೇ ಪ್ರಯಾಣಿಸುತ್ತಾರೆ.
ಡಕೋಟಾ ಬಸ್:
ಡಿಪೋ ಸ್ಥಾಪನೆಯಾದಗಿನಿಂದ ಘಟಕದಲ್ಲಿ ಒಟ್ಟು 33ಬಸ್ಗಳು ಇದರಲ್ಲಿ 4 ಮಾತ್ರ ಹೊಸ ಬಸ್ಗಳು, ಬಿಟ್ಟರೆ ಉಳಿದ 29 ಡಕೋಟಾ ಬಸ್ಗಳೇ ಕೆಎ.34-ಎಫ್549, ಎಫ್1045, ಎಫ್859 ಹಾಗೂ ಇನ್ನೂ ಅನೇಕ ನಂಬರಿನ ಬಸ್ಗಳು ಅಂದಾಜು 5 ರಿಂದ 10 ಲಕ್ಷಕ್ಕಿಂತ ಹೆಚ್ಚು ಕಿಮಿ. ಮೀರಿರುವ ಸ್ಕ್ರಾಪ್ ಬಸ್ಗಳೇ ಗತಿ. ಇವುಗಳನ್ನು ನಿಷ್ಕ್ರಿಯ ಮಾಡಬೇಕು ಆದರೆ ಹೊಸ ಬಸ್ಗಳ ಕೊರತೆಯಿಂದ ಮಿತಿ ಮೀರಿ ಓಡಿಸಲಾಗುತ್ತಿದೆ. ಇವು ಚಲಿಸಿದರೆ ಕಿವಿ ಚಿಕ್ಕುವ ಗಡಗಡ ಸದ್ದು, ಪ್ಲಾಟ್ ಫಾರಂನಲ್ಲಿ ಬಿದ್ದಿರುವ ತೂತು ಮುಚ್ಚಲು ಬಳಿಸಿದ ತಗಡಿನ ಹಲಗೆಗಳು ಅಲ್ಲಲ್ಲಿ ಎದ್ದಿವೆ, ಕೆಲ ಪ್ರಯಾಣಿಕರ ಕಾಲಿಗಳಿಗೆ ಚುಚ್ಚಿ ರಕ್ತ ಬಂದಿರುವ ಘಟನೆಗಳು ಜರುಗಿವೆ. ಆಸನದ ಕೆಳಗೆ ಆಪಾಯದ ತೂತು, ಕಿಡಾಕಿ ಗಾಜುಗಳು ಒಡೆದು ಹೊಗಿವೆ, ಬಾಗಿಲು ಇಲ್ಲ ಇದರಿಂದ ಬಸ್ ಚಾಲಿಸುವಾಗ ಪ್ರಯಾಣಿಕರಿಗೆ ಮೈಮೇಲೆ ಅಡರುವ ಧೂಳು, ಆಸನಗಳ ಸೀಟು ಕಿತ್ತಿರುವುದು ಈ ಎಲ್ಲಾ ಸಮಸ್ಯಗಳಿಗೆ ಹೊಸ ಡಿಪೋದಿಂದ ಮುಕ್ತಿ ಸಿಗಲಿಲ್ಲ ಎಂಬ ಬೇಜಾರು ಪ್ರಯಾಣಿಕರಲ್ಲಿ ಕಾಡುತ್ತಿದೆ.
ಚಾಲಕರ ಭಯ:
ಬಸ್ಗಳು ಎಷ್ಟೊಂದು ದುಸ್ಥಿತಿಗೆ ತಲುಪಿವೆ ಅಂದರೆ ವಾರದಲ್ಲಿ ಎರಡರಿಂದ ಮೂರು ಸಾರಿ ರಿಪೇರಿಗೆ ಬರುತ್ತಾವೆ. ಒಂದೊಂದು ಸಾರಿ ಸೇಲ್ಪ್ ಆಗದೆ ಬಸ್ ಸ್ಟಾಟರ್್ ಮಾಡಬೇಕಾದರೆ ಪ್ರಯಾಣಿಕರೇ ತಳ್ಳಬೇಕು. ಚಾಲಕನ ಸೀಟುಗಳು ಚಿಂದಿ ಚಿತ್ರನ್ನವಾಗಿ ಬೆಡ್ ಸೀಟ್ ಗತಿ, ಕೆಲ ಬಸ್ಗಳಲ್ಲಿ ಬ್ರೇಕ್, ಕ್ಲಚ್, ಗೇರ್ ಲೀವರ್ ಸುಸ್ಥಿತಿಯಲ್ಲಿ ಇಲ್ಲದೆ ಬ್ರೇಕ್ ಹಾಕಲು ಚಾಲಕರು ಹರಸಾಹಸ ಪಡುತ್ತಿರುವುದು ವಾಸ್ತವ, ಇನ್ನೂ ಹೆಚ್ಚು ಕಿಮಿ. ಓಡಿ ಮಿತಿ ಮೀರಿದ ಬಸ್ಗಳ ಎಂಜಿನ್ಗಳು ಓವರ್ ಹೀಟ್ ಆಗುತ್ತಿದ್ದು, ಇನ್ನೂ ಬಿಡಿ ಬಾಗಗಳು ಅಲಗಾಡುತ್ತಿರುತ್ತವೆ, ಬಟನ್ ಟೈರ್ ಮುಂದೆ ಹಾಕಬಾರದು ಆದರೆ ಮುಂದುಗಡೆ ಹಾಕುತ್ತಾರೆ ಇದರಿಂದ ಯಾವ ಹಂತದಲ್ಲಿ ಏನಾಗುತ್ತದೆ ಎಂಬ ಭಯ ಜೊತೆಗೆ ಬಾಗಿಲುಗಳು ಇಲ್ಲದ ಕಾರಣ ಪ್ರಯಾಣಿಕರು ಬಾಗಿಲಲ್ಲಿ ನಿಂತು ಕೊಂಡಾಗ ಇನ್ನೂ ಭಯದಿಂದ ಚಾಲನೆ ಮಾಡುವ ಗಂಭೀರ ಸ್ಥಿತಿ ಎದುರಾಗಿದೆ. ಇಂಥಹ ನಾನಾ ಸಮಸ್ಯೆಗಳ ಬಗ್ಗೆ ಚಾಲಕರು ಅನೇಕ ಬಾರಿ ಮನವಿ ನೀಡಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ಚಾಲಕರಿಂದಲೇ ವ್ಯಕ್ತವಾಗಿದೆ.
ಸೌಲಭ್ಯ ಕೊರತೆ:
ಘಟಕದಲ್ಲಿನ ಪ್ಲಾಟ್ ಫಾರಂಗೆ ಸಿಸಿ ಇಲ್ಲದೆ ಮಣ್ಣಿನ ಪ್ಲಾಟ್ ಇದ್ದು, ಆಗಾಗಿ ಬಸ್ ಬಂದರೆ ಧೂಳ್ ಎದ್ದು ತುಂಬಿಕೊಳ್ಳುತ್ತಿದೆ. ಬಿಜಾಪುರ, ಬೀದರ್, ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಇನ್ನಿತರ ದೂರದ ಜಿಲ್ಲೆಗಳಿಂದ ಬಂದು ಕಾರ್ಯನಿರ್ವಹಿಸುವ 100ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿಗೆ ಮಲಗಲು, ರೆಸ್ಟ್ ಮಾಡಲು ಕೊಠಡಿಗಳಿಲ್ಲ, ಶುದ್ದ ಕುಡಿಯುವ ನೀರಿಲ್ಲ, ಸೌಚಾಲಯ ಇದ್ದರೂ ಇಲ್ಲದಂತೆ, ಬಿಸಿ ನೀರಿಗಾಗಿ ಸೋಲಾರ್ ಇದೆ ಆದರೆ ಅದು ವ್ಯರ್ಥವಾಗಿದೆ. ಡ್ಯೂಟಿ ಸರಿಯಾಗಿ ನೀಡುತ್ತಿಲ್ಲ, ಆಫ್ಸಿಎಫ್ ಇದೆ ಅಂತ ಊರಿಗೆ ಹೋಗಲು ಕಷ್ಟವಾಗಿದೆ ಕಾರಣ ಸಂಜೆ ಇಲ್ಲಿಂದ ಬಸ್ಗಳ ವ್ಯವಸ್ಥೆ ಇಲ್ಲ. ಇನ್ನೂ ಹೊಟೇಲ್ ವ್ಯವಸ್ಥೆ ಇಲ್ಲದ ಕಾರಣ ಗ್ಯಾಸ್ಟ್ರಿಕ್, ಹೊಟ್ಟೆನೋವು ಹಾಗೂ ಬೇದಿಯಿಂದ ನರಳುವಂತಾಗಿದೆ.
ಉಗ್ರಾಹಣ:
ಘಟಕದ ಒಂದು ಭಾಗ ಗುಜರಿಗೆ ಕಳುಹಿಸುವ ಸ್ಕ್ರಾಪ್ ಬಸ್ಗಳು ಸಾಲುಸಾಲಾಗಿ ನಿಂತಿವೆ. ಇವುಗಳನ್ನು ಕೇಳುವವರಿಲ್ಲದೆ ಈ ಡಿಪೋ ಸ್ಕ್ರಾಫ್ ಬಸ್ಗಳ ಉಗ್ರಾಹಣವಾಗಿದೆ. ಹೊಸ ಬಸ್ಗಳು ಇಲ್ಲದಿದ್ದರು ಸ್ಕ್ರಾಫ್ ಬಸ್ಗಳಿಗೆನೂ ಕಡಿಮೆ ಇಲ್ಲ ಎನ್ನುವಂತೆಯಾಗಿದೆ ಕುರುಗೋಡಿನ ಡಿಪೋ.
ನಿರ್ಲಕ್ಷ್ಯ:
ಡಕೋಟಾ, 10ಲಕ್ಷಕ್ಕಿಂತ ಹೆಚ್ಚು ಕಿಮಿ. ಮೀರಿದ ಹಾಗೂ ಸುಸ್ಥಿತಿಯಲ್ಲಿ ಇಲ್ಲದಿರುವ ಬಸ್ಗಳನ್ನು ರಸ್ತೆಯ ಮೇಲೆ ಸಂಚಾರ ಮಾಡದೆ ನಿಷ್ಕ್ರಿಯ ಮಾಡಬೇಕು ಅಂತ ಸಾರಿಗೆ ಸಂಸ್ಥೆಯಲ್ಲಿ ಅದೇಶವಿದ್ದರು. ಇದನ್ನು ಲೇಖ್ಖಿಸದೆ ಜನರ ಜೀವದ ಜೊತೆ ಆಟ ಆಡುತ್ತಿದ್ದಾರೆ. ಘಟಕದಲ್ಲಿ ಸೌಲಭ್ಯಗಳ ಕೊರತೆ ಕಾಣುತ್ತಿದ್ದರು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಚಾಲಕರ ಹಾಗೂ ಸಿಬ್ಬಂದಿಗಳ ಗೋಳು ಕೇಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ತಲೆ ಎತ್ತಿ ತೋರುತ್ತದೆ.
ಹೇಳಿಕೆ:
"ಡಕೋಟಾ ಬಸ್ಗಳನ್ನು ಓಡಿಸುತ್ತಿದ್ದು, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡದೆ, ಹಳೆ ಬಸ್ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್ಗಳನ್ನು ನೀಡಿ ಪ್ರಯಾಣಿಕರ ಸುರಕ್ಷತೆ ಹಾಗೂ ಸುಖಕರ ಪ್ರಯಾಣಕ್ಕೆ ಮುಂದಾಗಬೇಕು ಸಾರಿಗೆ ಇಲಾಖೆ ಇಲ್ಲದಿದ್ದಾರೆ ಡಿಪೋದ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು."
-ಹೆಚ್.ಎಮ್.ವಿಶ್ವನಾಥಸ್ವಾಮಿ. ಅಧ್ಯಕ್ಷರು, ಬೀದಿಬದಿ ವ್ಯಾಪಾರಿಗಳ ಸಂಘ, ಕುರುಗೋಡು.